ಪ್ರಕೃತಿ ಸಂರಕ್ಷಣೆಗೆ ಬೇಕಿದೆ ಪ್ರತಿಜ್ಞೆ: ಡಾ| ಹೆಗ್ಗಡೆ

ಪಶ್ಚಿಮ ಘಟ್ಟ ಸಂರಕ್ಷಣೆ, ನೇತ್ರಾವತಿ ನದಿ ಪ್ರಾಮುಖ್ಯತೆ - ವಿಚಾರ ಸಂಕಿರಣ

Team Udayavani, Apr 27, 2022, 5:10 AM IST

ಪ್ರಕೃತಿ ಸಂರಕ್ಷಣೆಗೆ ಬೇಕಿದೆ ಪ್ರತಿಜ್ಞೆ: ಡಾ| ಹೆಗ್ಗಡೆ

ಬೆಳ್ತಂಗಡಿ: ವೈಜ್ಞಾನಿಕ ಪ್ರಗತಿಯ ಹೆಸರಿನಲ್ಲಿ ಮನುಷ್ಯನು ಪ್ರಕೃತಿಯ ಮೊದಲ ಶತ್ರುವಾಗಿ ಪರಿಣಮಿಸಿದ್ದರಿಂದ ನೈಸರ್ಗಿಕ ಅಸಮ ತೋಲನಕ್ಕೆ ಕಾರಣವಾಗಿದೆ. ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿರಿಸಿ ಕೊಂಡು ಅರಣ್ಯ ಸಂರಕ್ಷಣೆಯೆಡೆಗೆ ಪ್ರತಿಜ್ಞೆ ಮಾಡುವ ಸಂಕಲ್ಪವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ, ಅರಣ್ಯ ಇಲಾಖೆ ಮತ್ತು ಶ್ರೀ ಧ.ಮಂ. ಕಾಲೇಜಿನ ಆಶ್ರಯದಲ್ಲಿ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಮಂಗಳವಾರ ನಡೆದ “ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ, ನೇತ್ರಾವತಿ ಮತ್ತು ಇತರ ಉಪನದಿಗಳ ಪವಿತ್ರತೆ-ಪ್ರಾಮುಖ್ಯತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂದು ಹಿರಿಯರು ಪ್ರಕೃತಿ ಸಂರಕ್ಷ ಣೆಯ ಉದ್ದೇಶದಿಂದ ಮರಗಿಡಗಳಲ್ಲಿ ದೇವರು, ಧರ್ಮ ಸಂಬಂಧಿತ ನಂಬಿಕೆಯನ್ನಿರಿಸಿ ಆರಾಧಿಸಿದ್ದರು. ನಾವು ಆಶ್ರಯಿಸಿರುವ ಭೂಮಿ ಪ್ರಕೃತಿ ಅಥವಾ ದೇವರು ನೀಡಿರುವಂತಹದು. ವಿದೇಶಗಳಲ್ಲಿ ಅರಣ್ಯವನ್ನು ಉಳಿಸಿ ಕೊಳ್ಳುವ ಪ್ರಜ್ಞೆ ಇದ್ದು, ಆ ಕಾರಣಕ್ಕಾಗಿಯೇ ವ್ಯಾಪಕ ಮಳೆಕಾಡುಗಳು ಅಲ್ಲಿವೆ. ನಮ್ಮಲ್ಲಿಯೂ ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲ ಇದೆಯಾದರೂ ಅಭಿವೃದ್ಧಿ, ವಾಣಿಜ್ಯಿಕ ಲಾಭದ ಉದ್ದೇಶಗಳಿಗಾಗಿ ನಿಸರ್ಗಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

54 ಸಾವಿರ ಗಿಡ ನಾಟಿ
ವನ್ಯಜೀವಿಗಳು ಇಂದು ಆಹಾರ ಅರಸುತ್ತಾ ನಾಡಿಗೆ ಬಂದು ಮನು ಷ್ಯನ ಹಾವಳಿಗೆ ತುತ್ತಾಗುತ್ತಿವೆ. ಮಾತು ಬರುತ್ತಿದ್ದರೆ ಅವುಗಳೂ ಸಂಘಟಿತ ವಾಗುತ್ತಿದ್ದವು. ಆದರೆ ಮನುಷ್ಯನ ಹಾವಳಿಯ ವಿರುದ್ಧ ಧ್ವನಿ ಎತ್ತಲಾಗದಂತ ಪರಿಸ್ಥಿತಿ ಅವುಗಳದು. ಅವುಗಳ ಆಹಾರಕ್ರಮಕ್ಕೆ ಅನುಗುಣವಾಗಿ ಧರ್ಮಸ್ಥಳ ಕ್ಷೇತ್ರವು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅರಣ್ಯ ಭಾಗದಲ್ಲಿ 54,000 ಹಣ್ಣಿನ ಗಿಡಗಳನ್ನು ನಾಟಿ ಮಾಡಿದೆ. ಈ ಯೋಜನೆ ಮುಂದುವರಿಯಲಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತ ನಾಡಿ, ನಮ್ಮ ಹೃದಯಕ್ಕೆ ಹತ್ತಿರವಾಗುವ ಕಾಲಕ್ಕೆ ಅಗತ್ಯವಿರುವ ಯೋಜನೆಗಳಿಗೆ ಆದ್ಯತೆ ನೀಡಬೇಕು. ಪಂಚಭೂತಗಳಿಂದ ಸೃಷ್ಟಿಯಾದ ಈ ಶರೀರ ಪಂಚಭೂತ ಗಳೊಂದಿಗೆ ಸಮನ್ವಯದಿಂದ ಬದುಕಿದಾಗಿ ಜೀವನಕ್ಕೊಂದು ಅರ್ಥ ಬರುತ್ತದೆ ಎಂದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯವನ್ನು ತಿಳಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನಟಾಲ್ಕರ್‌, ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲರಾದ ಡಾ| ಪಿ.ಎನ್‌. ಉದಯಚಂದ್ರ, ಡಿಎಫ್‌ಒ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.ಪ್ರಾಧ್ಯಾಪಕ ಡಾ| ಕುಮಾರ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಜಲಮೂಲ ಸ್ವಚ್ಛವಾಗಿರಿಸೋಣ
ಅರಣ್ಯ ಸಂರಕ್ಷಣೆ ನಮ್ಮದೇ ಹೊಣೆ; ಅರಣ್ಯ ಇಲಾಖೆ, ಸರಕಾರ ನಮ್ಮ ಪ್ರತಿನಿಧಿಗಳು. ಧರ್ಮಸ್ಥಳದಲ್ಲಿ 40 ವರ್ಷಗಳಿಂದ ಅಡುಗೆ ಮತ್ತಿತರ ಉದ್ದೇಶಗಳಿಗೆ ಉರುವಲು, ಮರದ ಉತ್ಪನ್ನ ಬಳಸದೆ ಪರ್ಯಾಯ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ. ಕಿಟಕಿ-ಬಾಗಿಲುಗಳಿಗೆ ಮರದ ಬದಲು ಫೈಬರ್‌ ಉತ್ಪನ್ನವನ್ನು ಬಳಸಲಾಗುತ್ತಿದೆ. ಅರಣ್ಯವಾಸಿಗಳನ್ನು ಸ್ಥಳಾಂತರಿಸುವ ಮುನ್ನ ಜೀವನ ಭದ್ರತೆಗೆ ಬೇಕಾದ ಪರಿಹಾರ ನೀಡಬೇಕು. ನದಿಗಳಲ್ಲಿ ಮುಳುಗುವುದರಿಂದ ಪವಿತ್ರವಾಗುತ್ತೇವೆ ಎಂದುಕೊಳ್ಳುವ ನಾವು ಇದೇ ವೇಳೆ ಜಲಮೂಲಗಳನ್ನು ಸ್ವಚ್ಛವಾಗಿರಿಸಬೇಕು. ಅದಕ್ಕಾಗಿ ಕ್ಷೇತ್ರದಿಂದ 500 ಕೆರೆಗಳ ಪುನಶ್ಚೇತನ ಮಾಡಲಾಗಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.