ಬೇಕೇ ಬೇಕು ಐಸ್ ಕ್ರೀಮ್ ಬೇಕು…
ಕ್ಯಾಂಡಿ, ಕುಲ್ಫಿಗಳ ಆಕರ್ಷಣೆ!
Team Udayavani, May 6, 2020, 9:10 AM IST
ರಾಮಾಯಣ ಮಹಾಭಾರತ ಸೀರಿಯಲ್‌ಗಳು ಪ್ರಸಾರವಾದದ್ದು ಖುಷಿಯ ವಿಚಾರ. ಆದರೆ, ಅವುಗಳ ಜೊತೆಯಲ್ಲಿ ಐಸ್‌ಕ್ರೀಮ್ ಜಾಹೀರಾತು ಕೂಡ ಪ್ರಸಾರ ಆಗಬೇಕೇ?
ಐಸ್‌ಕ್ರೀಮ್ ಅಂದ್ರೆ ನನಗೆ ಬಹಳ ಇಷ್ಟ. ಈ ಲಾಕ್‌ಡೌನ್ ಸಮಯದಲ್ಲಿ ದಿನಸಿ, ಔಷಧಿ, ಹಾಲು, ತರಕಾರಿ ಮುಂತಾದ ಅತ್ಯವಶ್ಯ ವಸ್ತುಗಳು ಸಿಗ್ತಿರೋದೇ ನಮ್ಮ ಪುಣ್ಯ. ಇಂಥದ್ದರಲ್ಲಿ ನಾನು, ಐಸ್‌ಕ್ರೀಮ್ ಐಸ್‌ಕ್ರೀಮ್ ಅಂತ ಬಾಯಿ ಬಡಿದುಕೊಂಡರೆ, ಕೇಳಿದವರು ಏನೆಂದುಕೊಂಡಾರು? ತಿಂಗಳಿಗೊಮ್ಮೆ ಎರಡು ಲೀಟರ್ ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್ ತಂದು , ಅರ್ಧ ಲೀಟರ್ ಐಸ್‌ಕ್ರೀಮನ್ನು ಒಮ್ಮೆಲೇ ತಿಂದು ತೇಗುವ ನಾನು, ಮತ್ತೆ ಐಸ್ ಕ್ರೀಮ್ ನೆನಪಾದಾಗಲೆಲ್ಲ ಕೋನು, ಕ್ಯಾಂಡಿ, ಕುಲ್ಫಿಗಳ ಆಕರ್ಷಣೆಗೆ ಒಳಗಾಗುತ್ತೇನೆ.
ಲಾಕ್‌ಡೌನ್, ನನ್ನ ಈ ದುರಭ್ಯಾಸದ ಮೇಲೂ ಪರಿಣಾಮ ಬೀರಿತ್ತು. ಲಾಕ್ ಡೌನ್ ಕಾರಣಕ್ಕೆ ತುಟಿಪಿಟಕ್ ಎನ್ನದೆ ಮನೆಯೊಳಗೆ ಇದ್ದದ್ದಾಗಿತ್ತು. ಈ ಮಧ್ಯೆ, ಡಿಡಿಯಲ್ಲಿ ರಾಮಾಯಣ- ಮಹಾಭಾರತಗಳು ಪ್ರಸಾರವಾಗತೊಡಗಿದವು. ಅಷ್ಟೇ ಆಗಿದ್ದರೆ ಸಮಸ್ಯೆಯೇನೂ ಇರಲಿಲ್ಲ. ಡಿಡಿಯವರು, ಈ ಧಾರಾವಾಹಿಗಳ ಜೊತೆಯಲ್ಲಿ, ಅಮೂಲ್ ಐಸ್ ಕ್ರೀಮ್ ಜಾಹೀರಾತನ್ನು, ಪುನಃ ಪುನಃ ಪ್ರಸಾರ ಮಾಡತೊಡಗಿದರು. ನನ್ನ ಕಥೆ ಏನಾಗಿರಬಹುದು ಊಹಿಸಿಕೊಳ್ಳಿ! ನನ್ನ ಸಂಕಟ ನೋಡಲಾಗದೆ, ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಅಂಗಡಿಗೆ, ಹಾಲು ತರಲು ಹೋದ ರಾಯರು, ಅಲ್ಲಿ ಐಸ್‌ಕ್ರೀಮ್ ಇದೆಯೇ ಎಂದು ವಿಚಾರಿಸಿದರು. ಮತ್ತು ಅಲ್ಲಿ ಕೋನ್- ಕುಲ್ಫಿ ಇರುವ ವಿಷಯವನ್ನಷ್ಟೇ ತಂದರು! ಅಷ್ಟೇ ಅಲ್ಲ, ಅದು ಯಾವಾಗ ಬೇಕಾದರೂ ಖಾಲಿಯಾಗುವ
ಸಂಭವನೀಯತೆಯನ್ನೂ ತೆರೆದಿಟ್ಟರು! ಮಧ್ಯಾಹ್ನದ ನಂತರ ಮಗ ಹೋದಾಗ, ಅಂಗಡಿಗೆ ಬಾಗಿಲು ಹಾಕಿತ್ತು. ಸುಖಾಸುಮ್ಮನೆ ತಿರುಗುವ ಹುಡುಗರಿಗೆ ಪೊಲೀಸರು ಹೊಡೆಯುವ ವಿಷಯ ತಿಳಿದಿದ್ದ ಮಗನಿಗೆ, ಮನೆಯಿಂದ ಹೆಚ್ಚು ದೂರದ ಅಂಗಡಿಗೆ ಹೋಗಲು ಭಯ!
ಜೋಲು ಮೋರೆ ಹೊತ್ತು ಹಿಂದಿರುಗಿದ. ಬೇರೆ ದಾರಿಯಿಲ್ಲದೆ “ಯಾವ ಐಸ್ ಕ್ರೀಮ್ ತಂದರೂ ಕಮಕ್ ಕಿಮಕ್ ಅನ್ನದೆ ತಿನ್ನುತ್ತೇನೆ’ ಎಂಬ ಭರವಸೆ ಕೊಟ್ಟಮೇಲೆ, ರಾಯರೇ ಮರುದಿನ ನಾಲ್ಕು ಕೋನ್ ಮತ್ತು ನಾಲ್ಕು ಕುಲ್ಫಿ ತಂದರು. ಆದರೆ, ಇದು ಉರಿಯುತ್ತಿದ್ದ ಹೋಮಾಗ್ನಿಗೆ ತುಪ್ಪ ಸುರಿದಂತಾಗಿದೆ. ನನ್ನ ಅವಸ್ಥೆಯನ್ನು ಯಾರಿಗೆ ಹೇಳಲಿ?
ಸುರೇಖಾ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.