ಲಾರಿಯಸ್ ಪ್ರಶಸ್ತಿ ರೇಸ್ನಲ್ಲಿ ಒಲಿಂಪಿಯನ್ ನೀರಜ್ ಚೋಪ್ರಾ
Team Udayavani, Feb 3, 2022, 7:40 AM IST
ಲಂಡನ್: ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಹೆಸರನ್ನು ಪ್ರತಿಷ್ಠಿತ ಲಾರಿಯಸ್ “ವರ್ಲ್ಡ್ ಬ್ರೇಕಿಂಗ್ ಥ್ರೂ ಆಫ್ ದ ಇಯರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
23 ವರ್ಷದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ನಲ್ಲಿ 87.58 ಮೀ. ದೂರದ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಎಪ್ರಿಲ್ನಲ್ಲಿ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಲಿದೆ.
ನೀರಜ್ ಚೋಪ್ರಾ ಲಾರಿಯಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ 3ನೇ ಕ್ರೀಡಾಳು. 2011ರಲ್ಲಿ ಸಚಿನ್ ತೆಂಡುಲ್ಕರ್ ಮತ್ತು 2019ರಲ್ಲಿ ವಿನೇಶ್ ಫೋಗಟ್ ಅವರ ಹೆಸರನ್ನು ಸೂಚಿಸಲಾಗಿತ್ತು. ಇವರಲ್ಲಿ ತೆಂಡುಲ್ಕರ್ಗೆ ಪ್ರಶಸ್ತಿ ಒಲಿದು ಬಂದಿತ್ತು.
ಇದನ್ನೂ ಓದಿ:ವಿಂಟರ್ ಒಲಿಂಪಿಕ್ಸ್: ಭಾರತದ ಪಾಳೆಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಪತ್ತೆ
ವರ್ಷದ ಕ್ರೀಡಾಳು ಪ್ರಶಸ್ತಿ
ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಮನ್ ಆಫ್ ಇಯರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರೆಂದರೆ, ನೊವಾಕ್ ಜೊಕೋವಿಕ್ (ಟೆನಿಸ್, ಸರ್ಬಿಯಾ), ಟಾಮ್ ಬ್ರಾಡಿ (ಫುಟ್ ಬಾಲ್, ಅಮೆರಿಕ), ಕೇಲೆಬ್ ಡ್ರೆಸ್ಸೆಲ್ (ಈಜು, ಅಮೆರಿಕ), ಈಲ್ಯೂಡ್ (ಮ್ಯಾರಥಾನ್, ಕೀನ್ಯ), ರಾಬರ್ಟ್ ಲೆವಾಂಡೋವ್ಸ್ಕಿ (ಫುಟ್ ಬಾಲ್, ಪೋಲೆಂಡ್) ಮತ್ತು ಮ್ಯಾಕ್ಸ್ ವೆಸ್ಟಾಪೆನ್ (ಕಾರ್ ರೇಸ್, ನೆದರ್ಲೆಂಡ್ಸ್).
ವನಿತಾ ವಿಭಾಗದಿಂದ ಆ್ಯಶ್ಲಿ ಬಾರ್ಟಿ (ಟೆನಿಸ್, ಆಸ್ಟ್ರೇಲಿಯ), ಅಲಿಸನ್ ಫೆಲಿಕ್ಸ್ (ಆ್ಯತ್ಲೀಟ್, ಅಮೆರಿಕ), ಕ್ಯಾಟಿ ಲೆಡೆಕಿ (ಈಜು, ಅಮೆರಿಕ), ಎಮ್ಮಾ ಮೆಕ್ಕಿಯಾನ್ (ಈಜು, ಆಸ್ಟ್ರೇಲಿಯ), ಅಲೆಕ್ಸಿಯಾ ಪುಟೆಲ್ಲಾಸ್ (ಫುಟ್ಬಾಲ್, ಸ್ಪೇನ್), ಎಲೈನ್ ಥಾಮ್ಸನ್ ಹೆರಾಹ್ (ಆ್ಯತ್ಲೀಟ್, ಜಮೈಕಾ) ನಾಮ ನಿರ್ದೇಶನಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.