NEP : 4ನೇ ವರ್ಷದ ಪದವಿ ಓದಲು ಆಸಕ್ತಿ ಇದೆಯೇ?
ಆಸಕ್ತ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ
Team Udayavani, Feb 7, 2024, 11:16 PM IST
ಬೆಂಗಳೂರು:ರಾಷ್ಟ್ರೀಯ ಶಿಕ್ಷಣ ನೀತಿ -2020 (ಎನ್‌ಇಪಿ)ಯಡಿ ಓದುತ್ತಿರುವ ವಿದ್ಯಾರ್ಥಿಗಳಿಂದ ನಾಲ್ಕನೇ ವರ್ಷದ ಪದವಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಹಿಂದೆ 3 ವರ್ಷಕ್ಕೆ ಸೀಮಿತವಾಗಿದ್ದ ಪದವಿ ಶಿಕ್ಷಣವನ್ನು ಎನ್‌ಇಪಿಯಡಿ 4 ವರ್ಷಕ್ಕೆ ವಿಸ್ತರಿಸಿ ಆನರ್ ಪದವಿಯ ಸ್ಥಾನ ನೀಡಲಾಗಿದೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಾಲ್ಕನೇ ವರ್ಷದ ಪದವಿಯ ಬಗ್ಗೆ ಉತ್ಸಾಹ ಹೊಂ ದಿಲ್ಲ. ಹಾಗೆಯೇ ಹಲವು ಶಿಕ್ಷಣ ತಜ್ಞರು ಈ ಹಿಂದಿನಂ ತೆಯೇ ಪದವಿ ಇರಲಿ ಎಂದು ಅಭಿಪ್ರಾಯಪಟ್ಟಿ ದ್ದಾರೆ. ಈ ಬಗ್ಗೆ ಅವಸರದ ತೀರ್ಮಾನ ಕೈಗೊಳ್ಳದೆ, ಕೂಲಂಕಷ ಚರ್ಚಿಸಿ ನಿರ್ಧರಿಸಲು ಮುಂದಾದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಈಗ ಅಭಿಪ್ರಾಯ ಸಂಗ್ರಹಕ್ಕೆ ಉತ್ಸುಕರಾ ಗಿದ್ದಾರೆ.
ಎನ್‌ಇಪಿಯಡಿ ಪ್ರವೇಶ ಪಡೆದ ವಿದ್ಯಾರ್ಥಿ ಗಳು ಈಗ 3ನೇ ವರ್ಷದಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದಾರೆ. ಇನ್ನೊಂದು ಸೆಮಿಸ್ಟರ್ ಪೂರ್ಣಗೊಳಿಸಿದ ಬಳಿಕ 4ನೇ ವರ್ಷಕ್ಕೆ ಪ್ರವೇಶ ಪಡೆಯುತ್ತಾರೆ. ಇದು ರಾಜ್ಯದ ಶೈಕ್ಷಣಿಕ ವಲಯಕ್ಕೆ ಹೊಸ ಪರಿಕಲ್ಪನೆ. ಈ ಹಿನ್ನೆಲೆಯಲ್ಲಿ ಪದವಿಯ ನಾಲ್ಕನೇ ವರ್ಷ ಓದಲು ಆಸಕ್ತರಿರುವ ವಿದ್ಯಾರ್ಥಿ ಗಳು ಮತ್ತು ವಿಷಯ ಆಸಕ್ತಿಯ ಮಾಹಿತಿ ಸಂಗ್ರಹಿಸಲು ಕಾಲೇಜು ಪ್ರಾಂಶುಪಾಲರಿಗೆ ಸೂಚಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ನಾಲ್ಕನೇ ವರ್ಷದಲ್ಲಿ ಓಪನ್ ಎಲೆಕ್ಟಿವ್ ವಿಷಯವಿದೆ. ವಿದ್ಯಾರ್ಥಿಗಳು ಕಲೆ, ವಾಣಿಜ್ಯ ಅಥವಾ ವಿಜ್ಞಾನ ಕೋರ್ಸ್‌ಗಳಲ್ಲಿ ತಮ್ಮ ಆಯ್ಕೆ ಯನ್ನು ಮಾಡಿಕೊಳ್ಳಬಹುದು. ಆದರೆ ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 237 ರಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್‌ಗಳು ಒಟ್ಟಿಗೆ ಇವೆ. ಉಳಿದೆಡೆ ಅನ್ಯ ವಿಷಯಗಳನ್ನು ಆರಿಸಿಕೊಳ್ಳುವವರಿಗ ಶಿಕ್ಷಣ ನೀಡಲು ಸಿದ್ಧತೆ ನಡೆಸಬೇಕಿದೆ. ವಿಭಿನ್ನ ಜ್ಞಾನಶಾಖೆಯ ಕೋರ್ಸ್ ಗಳ ಸಂದರ್ಭದಲ್ಲಿ ಹಲವು ಪ್ರಾಯೋಗಿಕ ಸಮಸ್ಯೆಗಳು ಎದುರಾಗಲಿವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿದ ಬಳಿಕ ಪೂರ್ವ ಸಿದ್ಧತೆ ನಡೆಸಲು ಸರಕಾರ ಚಿಂತನೆ ನಡೆಸಿದೆ.
ಎಸ್‌ಇಪಿ ವರದಿ ಸಲ್ಲಿಕೆಯಾಗಿಲ್ಲ
ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಮಧ್ಯಂತರ ವರದಿಯನ್ನು ಇನ್ನೂ ಸಲ್ಲಿಸಿಲ್ಲ. ಆಯೋಗ ಸಲ್ಲಿಸುವ ವರದಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವರು. ಆದ್ದರಿಂದ ಎಸ್‌ಇಪಿಯಡಿ 3 ವರ್ಷದ ಅಥವಾ 4 ವರ್ಷದ ಪದವಿ ಎಂಬ ತೀರ್ಮಾನವಾಗಿಲ್ಲ ಎಂದು ಸಚಿವ ಡಾ| ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಾಲ್ಕನೇ ವರ್ಷದ ಪದವಿ ಓದುವ ಆಸಕ್ತಿಯಿರುವ ವಿದ್ಯಾರ್ಥಿಗೆ ನೀವು ಮೂರನೇ ವರ್ಷಕ್ಕೆ ಪದವಿ ಮುಗಿಸಿ ಎಂದು ಹೇಳಲಾಗದು. ಆನರ್ ಪದವಿ ಪಡೆಯಲು ಆಸಕ್ತರಾಗಿರುವ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಿಸುವಂತೆ ವಿವಿ ಮತ್ತು ಕಾಲೇಜುಗಳಿಗೆ ಸೂಚಿಸಿದ್ದೇವೆ. ಒಂದಿಬ್ಬರು ಆಯ್ಕೆ ಮಾಡಿಕೊಂಡರೂ ಅವಕಾಶ ಕಲ್ಪಿಸಬೇಕಾಗುತ್ತದೆ.
– ಡಾ| ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವರು
~ ರಾಕೇಶ್ ಎನ್.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.