ಎನ್‌ಇಪಿ: ಕೌಶಲ ಆಧಾರಿತ ಕೋರ್ಸ್ ಕಲಿಕೆಗೆ ತೊಡಕು !
ಉಪನ್ಯಾಸಕರಿಗೆ ತರಬೇತಿ ಇಲ್ಲದೆ ವಿದ್ಯಾರ್ಥಿಗಳಿಗೆ ನಷ್ಟ
Team Udayavani, Dec 19, 2021, 7:05 AM IST
ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ಇದೇ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದಿರುವ ಕೌಶಲ ಆಧಾರಿತ ಕೋರ್ಸ್ ಜಾರಿಗೆ ತೊಡಕುಗಳು ಎದುರಾಗಿವೆ.
ಕೌಶಲಪೂರಕ ಶಿಕ್ಷಣದಡಿ ಮೊದಲ ವರ್ಷದ ಪದವಿಗೆ ಡಿಜಿಟಲ್ ಸಾಕ್ಷರತೆ, ಯೋಗ ಮತ್ತು ಆರೋಗ್ಯ ಎಂಬ ಹೊಸ ಕೋರ್ಸ್ ಇದೆ. ಆದರೆ ಈ ಕೋರ್ಸ್ ಬೋಧನೆ ಹೇಗೆ ಮತ್ತು ಯಾರು ಎಂಬ ಬಗ್ಗೆ ಉಪನ್ಯಾಸಕ ವಲಯದಲ್ಲಿ ಗೊಂದಲವಿತ್ತು. ಹೊಸ ಮಾದರಿಯ ಕಲಿಕೆ ಆದ ಕಾರಣ ಉಪನ್ಯಾಸಕರಿಗೆ ತರಬೇತಿ ಸಿಕ್ಕಿಲ್ಲ. ಇದರ ಜವಾಬ್ದಾರಿ ಬಗ್ಗೆ ವಿ.ವಿ. ಮತ್ತು ಕಾಲೇಜುಗಳು ಪರಸ್ಪರ ಬೊಟ್ಟು ಮಾಡಿದ ಪರಿಣಾಮ ಬಹುನಿರೀಕ್ಷಿತ ಕೋರ್ಸ್ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ತಲುಪಿಲ್ಲ. ಈಗ ಪದವಿ ಮೊದಲ ವರ್ಷ ಮುಗಿಯುವ ಸಮಯದಲ್ಲಿ ಉಪನ್ಯಾಸಕರು ಈ ಕೋರ್ಸ್ ಬಗ್ಗೆ ತರಬೇತಿ ಪಡೆಯುವ ಪ್ರಮೇಯ ಎದುರಾಗಿದೆ.
“ಕೌಶಲ ಆಧಾರಿತ ವಿಷಯವನ್ನು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಸೂಚನೆ ಯಿತ್ತು. ಆದರೆ ಈ ಬಗ್ಗೆ ಉಪನ್ಯಾಸಕರಿಗೆ ಪೂರ್ಣ ಮಾಹಿತಿ, ತರಬೇತಿ ನೀಡದಿದ್ದರೆ ಬೋಧಿಸುವುದು ಹೇಗೆ? ಈಗ ಕೊನೆಯ ಹಂತದಲ್ಲಿ ತರಬೇತಿ ಎಷ್ಟು ಅರ್ಥಪೂರ್ಣ’ ಎಂದು ಉದಯವಾಣಿ ಜತೆಗೆ ಮಾತನಾಡಿದ ಉಪನ್ಯಾಸಕರೊಬ್ಬರು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳಿಂದಲೇ ಕಲಿಕೆ!
ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಡಿಜಿಟಲ್ ಸಾಕ್ಷರತೆಯ ಕೋರ್ಸ್ ಮೊಬೈಲ್ ಮೂಲಕ ತಾವೇ ಅಭ್ಯಸಿಸಬಹುದು. ನ್ಯಾಸ್ಕಾಂ (ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ ವೇರ್ ಆ್ಯಂಡ್ ಸರ್ವಿಸಸ್ ಕಂಪೆನಿ) ಸಿದ್ಧಪಡಿ ಸಿದ ಆ್ಯಪ್ ಡೌನ್‌ಲೋಡ್ ಮಾಡಿ ತಾವೇ ಕಲಿಯಬಹುದು. ಇದರ ಬಳಕೆ ಬಗ್ಗೆ ಉಪ ನ್ಯಾಸಕರಿಗೆ ಈಗ ತರಬೇತಿ ನೀಡಲಾಗುತ್ತಿದೆ.
ಡಿಜಿಟಲ್ ಸಾಕ್ಷರತೆ ಮತ್ತಿತರ ಕೆಲವು ವಿಷಯಗಳಲ್ಲಿ ಉಪನ್ಯಾಸಕರಿಗೆ ಆನ್‌ಲೈನ್ ತರಬೇತಿ ನೀಡಲಾಗಿದೆ. ವರ್ಕ್ ಲೋಡ್ ಕಡಿಮೆ ಇರುವವರಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ. ಮುಂದೆ ಕೊಡಗು, ಉಡುಪಿ ಮತ್ತು ಮಂಗಳೂರಿ ನಲ್ಲಿ ಕ್ಲಸ್ಟರ್ ಮಟ್ಟದ ತರಬೇತಿಯನ್ನು ನ್ಯಾಸ್ಕಾಂ ವತಿಯಿಂದ ನೀಡಲಾಗುವುದು.
-ಪ್ರೊ| ಪಿ.ಎಸ್.ಯಡಪಡಿತ್ತಾಯ,
ಕುಲಪತಿ, ಮಂಗಳೂರು ವಿ.ವಿ.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.