ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ
ಸರಿಯಾದ ವಿಚಾರವನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಯುವ ಜನರ ಮೇಲಿದೆ.
Team Udayavani, Jan 24, 2022, 5:29 PM IST
ಧಾರವಾಡ: ಇಂದಿನ ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ನೇತಾಜಿ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಕರ್ನಾಟಕ ರಾಜ್ಯ ಸಮಿತಿಯಿಂದ ಆನ್ ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೇತಾಜಿ ಅವರ ಕನಸಾದ ಸಮಾಜವಾದಿ ಭಾರತವನ್ನು ಕಟ್ಟುವ ದಿಕ್ಕಿನಲ್ಲಿ ಇಂದಿನ ಯುವ ಜನರು ಅವರ ಉತ್ತರಾಧಿಕಾರಿಗಳಾಗಿ ಶ್ರಮಿಸಬೇಕಿದೆ. ಸರಿಯಾದ ವಿಚಾರವನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಯುವ ಜನರ ಮೇಲಿದೆ. ಗೊಂದಲಗಳಿಗೆ ಬಲಿಯಾಗದೇ ಇತಿಹಾಸವನ್ನು ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ಅರ್ಥ ಮಾಡಿಕೊಂಡು ಸತ್ಯಕ್ಕೆ ನಿಷ್ಠರಾಗಬೇಕು. ನೇತಾಜಿ ಅವರ ವ್ಯಕ್ತಿತ್ವ, ಆದರ್ಶ, ಹೋರಾಟಗಳನ್ನು ಅಳವಡಿಸಿಕೊಂಡು ಇಂದಿನ ಅನ್ಯಾಯಗಳ ವಿರುದ್ಧ ಸಮರಶೀಲ ಹೋರಾಟವನ್ನು ಕಟ್ಟುವ ಮೂಲಕ ನೇತಾಜಿಯವರ 125ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ ಮಾತನಾಡಿ, ನೇತಾಜಿಯವರ ಜೀವನ, ಹೋರಾಟದಿಂದ ಸ್ಫೂರ್ತಿ ಪಡೆದು ನಾವು ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ವಿರುದ್ಧ ರಾಜಿರಹಿತವಾಗಿ ಧ್ವನಿಯೆತ್ತಬೇಕು. ಅವಕಾಶವಾದಿತನಕ್ಕೆ ಎಡೆಮಾಡಿ ಕೊಡದೇ ಜಾತಿ, ಧರ್ಮದ ಹೆಸರಿನಲ್ಲಿ ಇಂದು ನಮ್ಮನ್ನು ಒಡೆದಾಳುತ್ತಿರುವ ಆಳ್ವಿಕರ ವಿರುದ್ಧ ಒಗ್ಗಟ್ಟಾಗಿ ಯುವ ಜನ ಸಮಸ್ಯೆಗಳ ವಿರುದ್ಧ ಚಳವಳಿಯನ್ನು ಬಲಪಡಿಸೋಣ, ನೇತಾಜಿಯವರ ವಿಚಾರಗಳನ್ನು ಎಲ್ಲೆಡೆ ಹರಡೋಣ ಎಂದು ಹೇಳಿದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಎಐಡಿವೈಒ ಹಲವಾರು ವರ್ಷಗಳಿಂದ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿ ರಹಿತ ಪಂತದ ಮಹಾನ್ ಕ್ರಾಂತಿಕಾರಿಗಳ ನೈಜ ಉತ್ತರಾಧಿಕಾರಿಗಳಾಗಿ ಅವರ ದಿನಾಚರಣೆಗಳನ್ನು ಆಚರಿಸುತ್ತ ಅವರ ಹೋರಾಟದ ಬದುಕನ್ನು, ವೈಚಾರಿಕತೆಯನ್ನು ಯುವಜನರಿಗೆ ಪರಿಚಯಿಸುತ್ತ ಬಂದಿದೆ. ಅದರ ಮೂಲಕ ಸ್ಫೂರ್ತಿ ಪಡೆದು ಇಂದಿನ ಅನ್ಯಾಯಗಳ ವಿರುದ್ಧ ಧ್ವನಿ ಎತ್ತೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.