Ayodhya: ನವ ಅಯೋಧ್ಯೆ ಇಂದು ಅನಾವರಣ

ರಾಮಮಂದಿರ ಉದ್ಘಾಟನೆ ಸನ್ನಿಹಿತವಾಗಿರುವಂತೆ ವಿಮಾನ- ರೈಲುನಿಲ್ದಾಣ ಲೋಕಾರ್ಪಣೆ

Team Udayavani, Dec 29, 2023, 11:41 PM IST

ayodhya airport

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಜ. 22ರಂದು ಪ್ರಾಣಪ್ರತಿಷ್ಠಾಪನೆ ಮಾಡು ವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೇ ವೇಳೆ ಡಿ. 30ರ ಶನಿವಾರ ಪ್ರಧಾನಿ ಮೋದಿಯವರು ಅಯೋಧ್ಯೆಯ ಚಿತ್ರಣವನ್ನೇ ಬದಲಾಯಿಸುವಂತಹ 15,700 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ 11,100 ಕೋ.ರೂ.ಗಳು ಅಯೋಧ್ಯೆಗೆ ಮೀಸಲಾಗಿದ್ದರೆ ಉಳಿದ 4,600 ಕೋ.ರೂ. ಮೊತ್ತದ ಯೋಜನೆಗಳು ಉತ್ತರಪ್ರದೇಶದ ವಿವಿಧ ಭಾಗಗಳಿಗೆ ಸಂಬಂಧಿಸಿದ್ದಾಗಿವೆ. ಮೋದಿಯವರ ಜನಸಭಾ ರ್ಯಾಲಿಯಲ್ಲಿ 1.5 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇಡೀ ಅಯೋಧ್ಯೆ ಅದ್ಭುತವಾಗಿ ಶೃಂಗಾರಗೊಂಡಿದೆ. ಮೋದಿ ಭೇಟಿಯ ಹಿನ್ನೆ ಲೆ ಯಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಮೋದಿಯವರು ಮುಖ್ಯವಾಗಿ 2 ಅಮೃತ್‌ ಭಾರತ್‌ ರೈಲುಗಳು, ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಸೇರಿ 6 ವಂದೇ ಭಾರತ್‌ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಅನಂತರ ಮಹರ್ಷಿ ವಾಲ್ಮೀಕಿಯ ಹೆಸರನ್ನು ಹೊಂದಲಿರುವ ಬೃಹತ್‌ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೆಯೇ ಇತ್ತೀಚೆಗಷ್ಟೇ ಅಯೋಧ್ಯಾ ಧಾಮ ಜಂಕ್ಷನ್‌ ಎಂದು ಮರುನಾಮಕರಣಗೊಂಡ ರೈಲು ನಿಲ್ದಾಣವೂ ಉದ್ಘಾಟನೆಯಾಗಲಿದೆ.

1,450 ಕೋ.ರೂ. ಮೊತ್ತದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಲೋಕಾರ್ಪಣೆ
ಮಂದಿರ ನಿರ್ಮಾಣದಿಂದ ಅಯೋಧ್ಯೆ ಯಲ್ಲಿ ಪ್ರವಾಸಿಗಳ ಸಂಖ್ಯೆ ನಿಶ್ಚಿತವಾಗಿ ಭಾರೀ ಪ್ರಮಾಣದಲ್ಲಿ ಏರಲಿದೆ. ಇದೇ ಕಾರಣದಿಂದ ಮೊದಲ ಹಂತದಲ್ಲಿ 1,450 ಕೋ.ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಮಹರ್ಷಿ ವಾಲ್ಮೀಕಿ ನಿಲ್ದಾಣವೆಂದು ಇದಕ್ಕೆ ಹೆಸರಿಡಲಾಗಿದೆ.
ನಿಲ್ದಾಣ 6,500 ಚ.ಮೀ. ವಿಸ್ತೀರ್ಣವಿದೆ. 2ನೇ ಹಂತದಲ್ಲಿ 50 ಸಾವಿರ ಚ.ಮೀ.ಗೆ ವಿಸ್ತರಿಸಲಾಗುತ್ತದೆ. ರನ್‌ವೇಯನ್ನು 3,750 ಚ.ಮೀ.ಗಳಷ್ಟು ವಿಸ್ತರಿಸಲಾಗುತ್ತದೆ. ಈ ನಿಲ್ದಾಣ ಉದ್ಘಾಟನೆ ಐತಿಹಾಸಿಕ ಹೆಜ್ಜೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ವರ್ಣಿಸಿದ್ದಾರೆ.

ಯಾವ್ಯಾವ ಯೋಜನೆ ಉದ್ಘಾಟನೆ?

6 ವಂದೇ ಭಾರತ್‌ ರೈಲುಗಳು
ಕರ್ನಾಟಕದ ಮಂಗಳೂರು-ಮಡಗಾಂವ್‌ (ಗೋವಾ)
ಬೆಂಗಳೂರಿನ ಕಂಟೋನ್ಮೆಂಟ್‌-ತಮಿಳುನಾಡಿನ ಕೊಯಮತ್ತೂರು
ಅಯೋಧ್ಯಾ-ದಿಲ್ಲಿ (ಆನಂದ್‌ ವಿಹಾರ್‌ ನಿಲ್ದಾಣ)
ಜಮ್ಮು-ಕಾಶ್ಮೀರದ ಶ್ರೀಮಾತಾ ವೈಷ್ಣೋ ದೇವಿ ಕಟರಾ-ಹೊಸದಿಲ್ಲಿ
ಪಂಜಾಬ್‌ನ ಅಮೃತಸರ-ದಿಲ್ಲಿ
ಮಹಾರಾಷ್ಟ್ರದ ಜಲಾ°-ಮುಂಬಯಿ

2 ಅಮೃತ್‌ ಭಾರತ್‌ ರೈಲುಗಳು
1 ಬಿಹಾರದ ದರ್ಭಾಂಗ-ಅಯೋಧ್ಯಾ-ದಿಲ್ಲಿ (ಆನಂದ್‌ ವಿಹಾರ್‌ ನಿಲ್ದಾಣ)
2 ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣ-ಪ. ಬಂಗಾಲದ ಮಾಲ್ಡಾ

ಅಮೃತ್‌ ಭಾರತ್‌ ವಿಶೇಷವೇನು?
ಅಮೃತ್‌ ಭಾರತ್‌ ರೈಗಳನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಎಲ್‌ಎಚ್‌ಬಿ ಪುಶ್‌-ಪುಲ್‌ ತಂತ್ರಜ್ಞಾನವಿದೆ. ಅಂದರೆ ಟ್ರೈನಿನ ಎರಡೂ ತುದಿಗಳಿಂದ ಕಾರ್ಯಾಚರಣೆ ಆರಂಭಿಸಬಹುದು. ಕೋಚ್‌ಗಳಿಗೆ ಎಸಿ ಸೌಲಭ್ಯವಿಲ್ಲ, ಆದರೆ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸೌಲಭ್ಯಗಳನ್ನು ನೀಡಲಾಗಿದೆ. ಆಸನಗಳು ಆರಾಮದಾಯಕವಾಗಿರಲಿವೆ, ಪ್ರಯಾಣಿಕರಿಗೆ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ.

ಬಾಲರಾಮನ ವಿಗ್ರಹ ಆಯ್ಕೆಗೆ ಸಭೆ
ಶ್ರೀರಾಮಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪಿಸಲಿರುವ ಬಾಲರಾಮನ ಮೂರ್ತಿಯನ್ನು ಆಯ್ಕೆ ಮಾಡಲು ಶುಕ್ರವಾರ ಅಯೋಧ್ಯೆಯಲ್ಲಿ ಮಹತ್ವದ ಸಭೆ ನಡೆದಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 5 ವರ್ಷದ ಬಾಲ ರಾಮನ ಮೂರು ಮೂರ್ತಿಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

ಕರ್ನಾಟಕದ ಹೊನ್ನಾವರದ ಶಿಲ್ಪಿ ಗಣೇಶ್‌ ಭಟ್‌ ಹಾಗೂ ಮೈಸೂರಿನ ಅರುಣ್‌ ಯೋಗಿರಾಜ್‌ ಕೃಷ್ಣಶಿಲೆಯಲ್ಲಿ ವಿಗ್ರಹವನ್ನು ನಿರ್ಮಿಸಿ ದ್ದಾರೆ. ರಾಜಸ್ಥಾನದ ಶಿಲ್ಪಿ ನಾರಾಯಣ ಪಾಂಡೆ ಮಕ್ರಾನ ಅಮೃತ ಶಿಲೆಯನ್ನು ಬಳಸಿದ್ದಾರೆ. ಮುಂಬಯಿಯ ಚಿತ್ರಕಲಾವಿದ ವಾಸುದೇವ್‌ ಕಾಮತ್‌ ಬರೆದ ಚಿತ್ರವನ್ನು ಆಧರಿಸಿ ಈ ವಿಗ್ರಹಗಳನ್ನು ಸಿದ್ಧಪಡಿಸ ಲಾಗಿದೆ. ಈ ಮೂರು ವಿಗ್ರಹಗಳ ಪೈಕಿ ಒಂದನ್ನು ಆಯ್ಕೆ ಮಾಡಲು ಸಭೆ ನಡೆದಿದೆ. ಯಾವ ವಿಗ್ರಹದಲ್ಲಿ ಬಾಲರಾಮನ ದಿವ್ಯತೆ ಗರಿಷ್ಠ ಪ್ರಮಾಣದಲ್ಲಿ ವ್ಯಕ್ತವಾಗುತ್ತದೋ ಅದನ್ನು ಆಯ್ಕೆ ಮಾಡುವುದಾಗಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.