ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಕೆಳಹಂತಗಳಲ್ಲಿ  ಶಿಕ್ಷಣದ ಆಡಳಿತ ಕುರಿತಂತೆ ನಮ್ಮ ದೇಶ ಹೆಚ್ಚು ಹೆಚ್ಚು ಯೋಚಿಸಬೇಕಿದೆ

Team Udayavani, Aug 10, 2020, 12:10 PM IST

ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮನುಷ್ಯನ ಒಳ ಮನಸ್ಸು ಹಾಗೂ ಹೊರ ವ್ಯಕ್ತಿತ್ವವನ್ನು, ಅದರ ಎಲ್ಲ ಸಾಧ್ಯತೆಗಳಲ್ಲಿ, ಆಯಾಮಗಳಲ್ಲಿ ಸಮಗ್ರವಾಗಿ ಹಾಗೂ ಧನಾತ್ಮಕವಾಗಿ ಪರಿವರ್ತಿಸಬಹುದಾದ ಪ್ರಕ್ರಿಯೆ- ಶಿಕ್ಷಣ. ಅಲ್ಲಿ ಗುರಿಗಳು, ಕಾರ್ಯಸೂಚಿ, ವಿಧಾನಗಳು ತುಂಬ ಸಂಕೀರ್ಣ ವಾಗಿರುವುದನ್ನು ಈ ಹಿನ್ನೆಲೆಯಲ್ಲಿ. ಗಮನಿಸಬೇಕು, ಶಿಕ್ಷಣದ ಮುಂದೆ ಏಕಕಾಲಕ್ಕೆ ಬಹುರೂಪಿ, ಹಲವು ಗುರಿಗಳಿರುತ್ತವೆ. ಅದು ಮಾನವನ ಆತ್ಮೋನ್ನತಿಯ ದಾರಿ. ಅದರೆ ಅದೇ ಸಂದರ್ಭ ದಲ್ಲಿಯೇ ಅದು ಮಾನವನ ನಿಜದ ಬದುಕಿನಲ್ಲಿ ಅತ್ಯಗತ್ಯ ವಾಗಿರುವ ಜೀವನಕೌಶಲಗಳ ಬತ್ತಳಿ ಕೆಯೂ ಹೌದು. ಅನಾದಿ ಕಾಲದಿಂದಲೂ ನಾಗರಿಕತೆಗಳು ಮಕ್ಕಳಿಗೆ ಧಾರ್ಮಿಕ ಗ್ರಂಥಗಳು ಇತ್ಯಾದಿ ಅವರನ್ನು “ನಾಗರಿಕ ರನ್ನಾಗಿಸುವ’ ವಿಷಯಗಳನ್ನು ಬೋಧಿಸಿದವು. ಜತೆಗೇ, ಬದುಕಲು ಬೇಕಾದ ಬಿಲ್ವಿದ್ಯೆ, ಸಮರ ಕಲೆ ಇತ್ಯಾದಿಗಳನ್ನೂ ಕಲಿಸಿದವು. ಶಿಕ್ಷಣ ಹೀಗೆ ಮನುಷ್ಯ ತನ್ನ ಇಹಪರಗಳ ಬದುಕಿನ ಮೇಲೆ ಹತೋಟಿ ಸಾಧಿಸಲು ಬಳಸುವ ಸೂತ್ರ.

ಶಿಕ್ಷಣ ಮನುಷ್ಯನ ಬದುಕಿನ ಮಾರ್ಗ ದರ್ಶಿಯೂ ಹೌದು. ಒಂದು ಸಮಾಜದಲ್ಲಿ ಬದುಕಲು, ಸಂಸ್ಕೃತಿಯ ಭಾಗವಾಗಲು ಹಾಗೂ ಆ ಸಂಸ್ಕೃತಿಯ ಕೊಂಡಿಯಾಗಿ ವರ್ತಮಾನ, ಭವಿಷ್ಯದ ನಾಗರಿಕತೆಯನ್ನು ಕಟ್ಟಲು ವ್ಯಕ್ತಿಗೆ ಬೇಕಾದ ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಶಿಕ್ಷಣದ ಮೇಲಿದೆ. ಹಾಗೆಯೇ ಶಿಕ್ಷಣ ಒಂದು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ನಿರೂಪಿಸುವ ಅಂಶ ಕೂಡ ಹೌದು. ಒಂದು ದೇಶದ ಶಿಕ್ಷಣ ಆ ದೇಶ ತನ್ನ ಮುಂದೆ ಇಟ್ಟುಕೊಂಡಿರುವ ಆದರ್ಶ ಸಮಾಜದ, ರಾಷ್ಟ್ರದ ಕನಸನ್ನು ಸಾಧಿಸುವ ಪರಿಕರ. ಹೀಗೆ ಶಿಕ್ಷಣಕ್ಕೆ ತುಂಬ ಸಂಕೀರ್ಣ ಉದ್ದೇಶ ಗಳಿವೆ. ಎಲ್ಲ ಶ್ರೇಷ್ಠ ನಾಗರಿಕತೆಗಳೂ ತಮ್ಮ ಶಿಕ್ಷಣದ ಗುಣ ಮಟ್ಟ ವನ್ನು ನಿರಂತರ ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸುವುದು ಈ ಹಿನ್ನೆಲೆಯಲ್ಲಿ. ಭ್ರಷ್ಟರು, ನಿರಂಕುಶ ಪ್ರಭುತ್ವವಾದಿಗಳು, ವಸಾಹತು ಶಾಹಿಗಳು ಇತಿಹಾಸದುದ್ದಕ್ಕೂ ಅದನ್ನು ಹಾಳು ಮಾಡಲು ಪ್ರಯತ್ನಿಸಿರುವುದೂ ಈ ಹಿನ್ನೆಲೆಯಲ್ಲಿಯೇ.
***
ಈ ಶಿಕ್ಷಣ ನೀತಿಯ ಸಾಧನೆ ಇನ್ನೂ ಒಂದು ದೃಷ್ಟಿಕೋನದಿಂದ ಅಭಿನಂದನಾರ್ಹ. ಅದೇನೆಂದರೆ ಭಾರತದಂತಹ, ಒಂದು ಜಗತ್ತೇ ಆಗಿರುವ ದೇಶಕ್ಕೆ ಶಿಕ್ಷಣ ಹೇಗಿರಬೇಕು ಎನ್ನುವುದರ ಕುರಿ ತಾದ ಕಲ್ಪನೆಗಳನ್ನು ಒಂದು ಚೌಕಟ್ಟಿನಲ್ಲಿ ತರುವುದು ಸುಲಭವಲ್ಲ. ಏಕೆಂದರೆ ನಮ್ಮ ಸಂಸ್ಕೃತಿ, ಜ್ಞಾನ ಪರಂಪರೆಗಳು ಜೀವನ ವಿಧಾನಗಳು ಒಂದು ಚೌಕಟ್ಟಿಗೆ ಕಟ್ಟುಬಿದ್ದವುಗಳಲ್ಲ.

ಕೇವಲ ತಾರ್ಕಿಕತೆಗೆ, ವಾಸ್ತವಿಕತೆಗೆ ಸೀಮಿತಗೊಳಿಸಿದವುಗಳಲ್ಲ. ಅದನ್ನು ಒಂದೇ ಮೂಲದಿಂದ ಗಳಿಸಿದವುಗಳಲ್ಲ. ತುಂಬ ಸಂಕೀರ್ಣವಾದ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಂನಿಂದ ಗುಜರಾತ್‌ವರೆಗೆ ಹರಡಿಕೊಂಡಿರುವ, ಪ್ರತಿ ಐವತ್ತು ಕಿಲೋ ಮೀಟರ್‌ಗೂ ಬದಲಾಗುವ ಜೀವನ ವಿಧಾನ, ಭಾಷೆ ಹೊಂದಿರುವ, ಒಂದು ಜಗತ್ತಿನಂತಹ ನಮ್ಮ ದೇಶದಲ್ಲಿ ಇವೆಲ್ಲವು ಗಳಿಗೂ ಅನ್ವಯಿಸುವ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಸುಲಭವಲ್ಲ. ನಮಗೆ ಗೊತ್ತಿದೆ. ಹೀಗಾಗಿಯೇ ಹೊಸ ಶಿಕ್ಷಣ ನೀತಿ ನಿರೂಪಣ ಸಮಿತಿಯ ಮುಂದೆ ಸುಮಾರು ಎರಡೂವರೆ ಲಕ್ಷ ವಿವಿಧ ರೀತಿಯ ಸಲಹೆ, ಸೂಚನೆಗಳು ಬಂದಿದ್ದವು.

ಇವೆಲ್ಲವನ್ನು ಹಾಗೂ ಉಳಿದ ವಿಷಯಗಳನ್ನು ಪರಿಗಣಿಸಿರುವ ಪರಿಶೀಲಿಸಿರುವ ಸಮಿತಿ ಸುದೀರ್ಘ‌ ಚರ್ಚೆ, ಚಿಂತನೆಗಳ ಅನಂತರ ಒಂದು ಬಹುಮುಖೀ ಶಿಕ್ಷಣ ನೀತಿಯ ಬೃಹತ್‌ ಕನಸನ್ನು ದೇಶದ ಮುಂದೆ ಇಟ್ಟಿದೆ. ನಿಜಕ್ಕೂ ಅಗಾಧವಾದ ಕೆಲಸ ಇದು.

ಹೊಸ ಶಿಕ್ಷಣ ನೀತಿಯ ದರ್ಶನದ ವಿಸ್ತಾರವನ್ನು ಮತ್ತು ಆಳವನ್ನು ನೋಡಿಕೊಂಡು ಮುಂದೆ ಹೋಗೋಣ. ಮೊದಲ ಮಹತ್ವದ ವಿಷಯವೆಂದರೆ ಈ ನೀತಿ ಭಾರತೀಯ ಸಂಸ್ಕೃತಿಯನ್ನು ಹಾಗೂ ಆಧುನಿಕ ಜಗತ್ತನ್ನು ಜೋಡಿಸಿದೆ. ಏಕೆಂದರೆ ನಮ್ಮ ಪರಂಪರಾಗತ ಜ್ಞಾನದ ಮೂಲಗಳಾದ ಭಾರತೀಯ ಭಾಷೆಗಳು, ಕೌಶಲಗಳು ಹಾಗೂ ಸಂಸ್ಕೃತಿಗಳ ಅಧ್ಯಯನಕ್ಕೆ ಇದು ಒತ್ತು ನೀಡಿದೆ. ಮಾತೃಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಅಧ್ಯಯನದ ಮಾಧ್ಯಮವನ್ನಾಗಿ ಅದು ಗುರುತಿಸಿರುವುದು ತುಂಬ ಮಹತ್ವದ ವಿಷಯ. ಎರಡನೆಯ ಮಹತ್ವದ ವಿಷಯ ಲಿಬರಲ್‌ ಮಾನವಿಕಗಳ ಅಧ್ಯಯನಕ್ಕೆ ಅದು ನೀಡಿರುವ ಒತ್ತು.ಹಾಗೆಯೇ ಮಾನವಿಕಗಳ ಅಭಿವೃದ್ಧಿಯ ಜತೆಗೇ ನೀತಿ ಪರಂಪರಾಗತ ಭಾರತೀಯ ಕೌಶಲ ಅಭಿವೃದ್ಧಿಗೂ ಅದು ಒತ್ತು ನೀಡಿದೆ. ನಮಗೆ ಗೊತ್ತಿದೆ. ಏನೆಂದರೆ ಪ್ರಸ್ತುತದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆ ದೇಸೀ ಸಂಸ್ಕೃತಿ ಯನ್ನು ಶೈಕ್ಷಣಿಕ ವ್ಯವಸ್ಥೆಯ ಭಾಗವನ್ನಾಗಿ ಪರಿಗಣಿಸಿರಲಿಲ್ಲ. ನಮ್ಮ ಹಳ್ಳಿಗಳ, ಜನಪದೀಯ ಸಂಸ್ಕೃತಿ ನಮ್ಮ ಕಲಿಕೆಯ ಭಾಗವಾಗಿರಲಿಲ್ಲ. ಈ ನೀತಿಯ ಮಹತ್ವದ ಕೊಡುಗೆ ಇದು. ಏನೆಂದರೆ ಭಾರತವನ್ನು ಇಂಡಿಯಾದ ಶಿಕ್ಷಣ ವ್ಯವಸ್ಥೆಯ ಹಳಿಗೆ ಜೋಡಿಸಿರುವುದು. ದೇಸೀ ಕೌಶಲಗಳು, ಭಾಷೆ ಇನ್ನು ಮುಂದೆ ಶಿಕ್ಷಣದ ಭಾಗವಾಗಲಿವೆ. ಹಳ್ಳಿಗಳ ಜ್ಞಾನ ಕಲಿಸಲ್ಪಡಲಿದೆ. ಸಮಿತಿಯ ಸದಸ್ಯರು ಡಾ| ತೇಜಸ್ವಿ ಕಟ್ಟಿಮನಿ ಹೇಳಿರುವಂತೆ ಈ ನೀತಿಯಿಂದಾಗಿ ದೇಸೀ ಜ್ಞಾನ ಪದ್ಧತಿಗಳು ಶಿಕ್ಷಣ ವ್ಯವಸ್ಥೆಯ ಭಾಗವಾಗಲಿವೆ. ಇದು ಈ ನೀತಿಯ ದೊಡ್ಡ ಸಾಧನೆ. ನೀತಿಯ ಎರಡನೆಯ ಮಹತ್ವದ ಅಂಶ ಜಾಗತಿಕ ತಂತ್ರಜ್ಞಾನಕ್ಕೆ ಭಾರತದ ಕಿಟಿಕಿಗಳನ್ನು ತೆರೆಯುವುದು. 6ನೆಯ ಇಯತ್ತೆಯಿದಲೇ ಕೋಡಿಂಗ್‌ ಬರೆಯುವುದನ್ನು ಕಲಿಸಲು ಈ ನೀತಿ ಪ್ರಸ್ತಾಪಿಸಿದೆ. ನೀತಿಯ ಮಹತ್ಸಾಧನೆ ಹೀಗೆ ಪ್ರಾದೇಶಿಕ ಮತ್ತು ಜಾಗತಿಕ ಆವಶ್ಯಕತೆಗಳನ್ನು ಸಮರಸಗೊಳಿಸುತ್ತ ಸಾಗಿರುವುದು.

ನೀತಿಯ ಇನ್ನೂ ಕೆಲವು ಪ್ರಮುಖ ಅಂಶಗಳನ್ನು ಗುರುತಿಸಿ ಕೊಂಡು ಮುಂದೆ ಹೋಗೋಣ. ಪ್ರಾಥಮಿಕ ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅದು ಯುನಿಟೈಸ್‌ ಮಾಡಿರುವ ರೀತಿ ಒಂದು ಹೊಸ ಹೆಜ್ಜೆ. ಹಾಗೆಯೇ ವಿನೂತನವಾಗಿರುವುದು ಪದವಿ ಶಿಕ್ಷಣಕ್ಕೆ ಹೊಸ ಚೈತನ್ಯ ನೀಡಲು ಅದು ಪ್ರಯತ್ನಿಸಿರುವ ವಿಧಾನ. ಆರ್ಟ್ಸ್, ಸೈನ್ಸ್‌ ಮತ್ತು ಕಾಮ ರ್ಸ್‌ ಎಂದು ಮೂರು ಭಾಗವಾಗಿದ್ದ ಪದವಿ ಅಧ್ಯಯನವನ್ನು ತೆಗೆದುಹಾಕಿ ವಿದ್ಯಾರ್ಥಿ ಗಳಿಗೆ ತಮಗಿಷ್ಟದ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶ ವನ್ನು ಅದು ಒದಗಿಸಿದೆ. ಎರಡು ವಿಧದ ಡಿಗ್ರಿಗಳನ್ನು ಪ್ರಸ್ತಾವಿಸಿದೆ. ಅಫಿಲಿಯೇಶನ್‌ ವ್ಯವಸ್ಥೆಯನ್ನು ತೆಗೆದುಹಾಕಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲು ಅದು ಯೋಚಿಸಿದೆ. ನ್ಯಾಕ್‌ ಗ್ರೇಡ್‌ ಆಧರಿಸಿ ಫೀ ನಿಗದಿಪಡಿಸಲು ಅದು ಉದ್ದೇಶಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಖ್ಯಾತಿಯ ನೂರು ಸಂಸ್ಥೆಗಳನ್ನು ದೇಶಕ್ಕೆ ಕರೆತರುವ ಪ್ರಯತ್ನದ ಕುರಿತು ಅದು ಹೇಳಿದೆ. ದೇಶದಲ್ಲಿ ಶ್ರೇಷ್ಠತೆಯಲ್ಲಿರುವ ಉನ್ನತ ಶಿಕ್ಷಣವನ್ನು ವಿಸ್ತರಿಸುವ ಕುರಿತು ಅದು ಹೇಳಿದೆ. ಒಟ್ಟಾರೆಯಾಗಿ ನೀತಿ ದೇಸೀ ಸಂಸ್ಕೃತಿ ಮತ್ತು ಜಾಗತಿಕ ತಂತ್ರಜ್ಞಾನ ಎರಡನ್ನೂ ದೇಶದಲ್ಲಿ ಸಮರಸಗೊಳಿಸುವ, ಮೇಳೈ ಸುವ ಪ್ರಯತ್ನ ಇದು. ಶಿಕ್ಷಣವನ್ನು ವಸಾಹತುಶಾಹಿ ಸಂಸ್ಕೃತಿ ಯಿಂದ ಹೊರ ತರುವುದರತ್ತ ಪ್ರಯತ್ನಿಸಿರುವ ಈ ಶಿಕ್ಷಣ ನೀತಿ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆ.

ಈ ಬೃಹತ್‌ ಪರಿಕಲ್ಪನೆಯನ್ನು ಯಶಸ್ವಿಯಾಗಿ ವಾಸ್ತವವಾ ಗಿಸುವುದು ಹೇಗೆ ಎನ್ನುವುದನ್ನೂ ನಾವು ಈ ಸಂದರ್ಭದಲ್ಲಿ ಯೋಚಿಸಬೇಕು. ಈ ದಿಶೆಯಲ್ಲಿ ಮೂರು ಪ್ರಮುಖ ಸವಾಲು ಗಳಿವೆ. ಒಂದನೆಯದು ಇಂತಹ ನೀತಿಯ ಆಶಯಗಳಿಗ ನುಸಾರ ವಾಗಿ ಕರಿಕ್ಯುಲಂಗಳನ್ನು ಅಭಿವೃದ್ಧಿಪಡಿಸುವ ಮತ್ತು ಕ್ಲಾಸು ರೂಮಿನ ಒಳಗಿನ ಶಿಕ್ಷಣದ ಮೈಕ್ರೊ ನಿರ್ವಹಣೆಯ ಸವಾಲು.

ಏನನ್ನು, ಹೇಗೆ ಕಲಿಸಬೇಕು ಎನ್ನುವ ವಿಷಯ. ನಿಜವಾಗಿ ಗುಣಮಟ್ಟದ ಶಿಕ್ಷಣದ ಹೂರಣ ಇದು. ದೇಸೀ ಮತ್ತು ಜಾಗತಿಕ ಕೌಶಲಗಳನ್ನು ಸಿಲೆಬಸ್‌ನಲ್ಲಿ ಗ್ರೇಡೆಡ್‌ ವಿಧಾನದಲ್ಲಿ ತರುವ ಮತ್ತು ಅವುಗಳ ಗುಣಮಟ್ಟದ ಬೋಧನೆಯ ಪ್ರಶ್ನೆ. ಕೌಶಲಗಳ ಕಲಿಕೆಯ ಜತೆಯೇ ಸಾಂಸ್ಕೃತಿಕ ಪರಂಪರೆಯ ಅಂಶಗಳನ್ನು ಸಮರಸಗೊಳಿಸುವ ವಿಧಾನ. ಸಿಲೆಬಸ್‌ನ್ನು ನಿರೂಪಿಸುವುದು ಇಲ್ಲಿ ನಮಗಿರುವ ಮೊದಲ ಸವಾಲು. ಅನಂತರದ ಸವಾಲು ಕರಿಕ್ಯುಲಂ ಅನ್ನು ಕ್ಲಾಸುರೂಮಿಗೆ ಕೊಂಡೊಯ್ಯುವ ವಿಷಯ:

ಶಿಕ್ಷಕರ ತರಬೇತಿ, ಮೋಟಿವೇಷನ್‌ ಮತ್ತು ಟೀಚಿಂಗ್‌ ಸ್ಕಿಲ್‌ಗ‌ಳ ಅಭಿವೃದ್ಧಿಯ ವಿಷಯಗಳು. ಇಲ್ಲಿ ಭಾರೀ ಪ್ರಮಾಣದಲ್ಲಿ ಪುನರ್‌ ತರಬೇತಿ ಮತ್ತು ಪುನರ್ಮನನಗಳ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಶಿಕ್ಷಣ ಅಧ್ಯಯನ ಮತ್ತು ರಿಸರ್ಚ್‌ ಕೇಂದ್ರಗಳನ್ನು ಬಲಪಡಿಸಿ ಗುಣಮಟ್ಟದ ಬೋಧನೆಗೆ ಒತ್ತು ನೀಡುವ ಅಗತ್ಯ ನಮ್ಮ ಮುಂದಿದೆ. ಇನ್ನೊಂದು ಮಹತ್ವದ ವಿಷಯ ಭಾಷಾ ಕಲಿಕೆಯದು ಕೂಡ. ಭಾಷೆ ಸಂಸ್ಕೃತಿಯ ವಾಹಕ. ನೀತಿ ಮಾತೃಭಾಷಾ ಮಾಧ್ಯಮಕ್ಕೆ ಒತ್ತು ನೀಡಿದೆ. ನಿಜ. ಆದರೆ ಈಗಾಗಲೇ ಸುಪ್ರೀಂ ಕೋರ್ಟ್‌ ಕಲಿಯುವಿಕೆಯ ಭಾಷೆಯ ಆಯ್ಕೆ ವಿದ್ಯಾರ್ಥಿಯ ಹಕ್ಕು ಎಂದು ಹೇಳಿಬಿಟ್ಟಿದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಿದೆ.

ಇಲ್ಲಿ ಇನ್ನೂ ಹಲವು ಸಮಸ್ಯೆಗಳಿವೆ. ಪ್ರಸ್ತುತ ಎಲ್ಲ ಹಂತಗಳ ಲ್ಲಿಯೂ ಇರುವ ಶಿಕ್ಷಕರಲ್ಲಿ ದೊಡ್ಡ ಪ್ರಮಾಣದಲ್ಲಿರುವವರು ಖಾಸಗಿ ಶಿಕ್ಷಕರು. ಅವರೆಲ್ಲರನ್ನೂ ಈ ಬೃಹತ್‌ ನೀತಿಯ ಭಾಗವ ನ್ನಾಗಿ ಸ್ವೀಕರಿಸಲೇಬೇಕು. ಇಲ್ಲವಾದರೆ ನೀತಿ ನಿರೀಕ್ಷಿತ ಫ‌ಲ ನೀಡದೇ ಹೋಗಬಹುದು. ಜನರಲ್‌ ಎಜುಕೇಶನ್‌ ಕಾಲೇಜು ಗಳ ಪರಿಸ್ಥಿತಿಯೂ ಸ್ಥೂಲವಾಗಿ ಹೀಗೆಯೇ ಇದೆ. ಹಾಗಾಗಿ ಕರಿಕ್ಯುಲಂ ಮತ್ತು ಶಿಕ್ಷಕರನ್ನು ಸಿದ್ಧಗೊಳಿಸಿ ಅವರನ್ನು ಜವಾ ಬ್ದಾರಿಯ ಪಾಲುದಾರರನ್ನಾಗಿಸುವುದು ಹೊಸ ನೀತಿಯ ಮುಂದಿನ ಮಹತ್ವದ ಸವಾಲು. ಜತೆಗೇ ಇರುವುದು ಮೂಲಭೂತ ಸೌಲಭ್ಯಗಳ ಪ್ರಶ್ನೆ. ಕನಿಷ್ಠ ಗುಣಮಟ್ಟ ಹೊಂದಿರದ ಶಾಲೆಗಳು ಹೊಸ ಶಿಕ್ಷಣ ನೀತಿಯ ಗುರಿ ಗಳನ್ನು ಸೋಲಿಸಿ ಬಿಡುವ ಸಾಧ್ಯತೆ ಇರುತ್ತದೆ. ಮೂಲಭೂತ ಸೌಕರ್ಯ ಒದಗಿಸುವ, ಹಾಗೆಯೇ ಶಿಕ್ಷಕರನ್ನು ಕ್ಲಾಸ್‌ ರೂಂ ಶಿಕ್ಷಣದ ಗುಣಮಟ್ಟಕ್ಕೆ ಜವಾಬ್ದಾರರ ನ್ನಾಗಿಸುವ ಮಾರ್ಗೋಪಾಯ ನಿರ್ವಹಣೆ ಹೊಸ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯ ಸವಾಲು.

ಮತ್ತೂಂದು ಪ್ರಮುಖ ಸವಾಲು ಇರುವುದು ಹಣಕಾಸಿನದು. ಉದಾಹರಣೆಗೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಅನಂತರದ ಶಿಕ್ಷಣದ ಮರು ನಿರ್ಮಾಣ ಭಾರೀ ಪ್ರಮಾಣದ ಸಂಪನ್ಮೂಲಗಳನ್ನು ಬೇಡುತ್ತದೆ. ಹಾಗೆಯೇ ಉನ್ನತ ಶಿಕ್ಷಣದಲ್ಲಿ ಸದ್ಯದಲ್ಲಿ ಇರುವ ಒಟ್ಟಾರೆ ಗ್ರಾಸ್‌ ಎನ್ರೊàಲ್ಮೆಂಟ್‌ ರೇಶಿಯೊವನ್ನು ಸದ್ಯದಲ್ಲಿರುವ ಪ್ರತಿಶತ ಇಪ್ಪತ್ತೆಂಟರಿಂದ ಐವತ್ತಕ್ಕೇರಿಸುವ ಗುರಿ, ಪದವಿ ಶಿಕ್ಷಣದಲ್ಲಿ ಮುಕ್ತ ಅಯ್ಕೆಯ ಗುರಿ, ಸಂಶೋಧನೆಗೆ ಒತ್ತು ಈ ಎಲ್ಲ ಯೋಜನೆಗಳನ್ನು ಸಾಕಾರಗೊಳಿಸಲು ನಮಗೆ ಈಗಿರುವ ಬಜೆಟ್‌ ಹತ್ತು ಪಟ್ಟು ಹೆಚ್ಚು ಹಣ ಬೇಕಾಗುತ್ತದೆ. ಕಟ್ಟಡಗಳು ಪರಿಕರಗಳು, ವ್ಯಾಪಕ ತರಬೇತಿ,ಸ್ಕಾಲರ್‌ಶಿಪ್‌ಗ್ಳು ಇತ್ಯಾದಿಗೆ ಹಣ ಬೇಕಾಗುತ್ತದೆ. ಈ ಕುರಿತಂತೆ ಮಣಿಪಾಲ್‌ ಗ್ಲೋಬಲ್‌ನ ಮೋಹನ್‌ದಾಸ್‌ ಪೈ ಸೂಚಿರುವ ಕಾರ್ಯ ವಿಧಾನಗಳಾದ ಒಂದು ರಾಷ್ಟ್ರೀಯ ಸ್ಕಾಲರ್‌ಶಿಪ್‌ ಫ‌ಂಡ್‌ನ‌ ನಿರ್ಮಿತಿ ತುಂಬ ಮಹತ್ವದ ಸೂಚನೆ. ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟ ಆಧರಿತ ಫೀಸ್‌ ತೆಗೆದು ಕೊಳ್ಳಬಹುದೆಂದು ಆಯೋಗವೇ ಮಾಡಿರುವ ಸೂಚನೆ ಸಂಸ್ಥೆಗಳ ಹಣಕಾಸು ಆರೋಗ್ಯದ ದೃಷ್ಟಿಯಿಂದ ತುಂಬ ಒಳ್ಳೆಯದು.

ನಮ್ಮ ಮುಂದಿರುವ ಮೂರನೆಯ ಸವಾಲು ಶೈಕ್ಷಣಿಕ ಆಡಳಿತದ್ದು. ನಮಗೆ ತಿಳಿದಿರುವಂತೆ ಪ್ರಸ್ತುತದಲ್ಲಿ ಸಾಧಾರಣವಾಗಿ ಆಡಳಿತದ ಮಾದರಿಗಳಿಗೆ, ಆಡಳಿತಗಾರರಿಗೆ ಓಬೀರಾಯನ ಕಾಲದ ಮೈಂಡ್‌ಸೆಟ್‌ ಇದೆ. ಸೀನಿಯಾರಿಟಿ ಹಾಗೂ ರಿಸರ್ವೇ ಷನಿಸ್ಟ್‌ ಮನೋಭೂಮಿಕೆಗಳು ಅಲ್ಲಿ ತಾಂಡವವಾಡುತ್ತಿವೆ. ಅಲ್ಲದೆ ಸರಕಾರ ನಿಯಂತ್ರಿತ ಶಿಕ್ಷಣದಲ್ಲಿ ಹೆಚ್ಚಾಗಿ ಆಡಳಿತದ ಹುದ್ದೆಗೆ ಬರುವ ವ್ಯಕ್ತಿಗಳು ರಿಟೈಮೆಂìಟ್‌ ಅಂಚಿನಲ್ಲಿರುತ್ತಾರೆ. ಹಾಗಾಗಿ ಹೆಚ್ಚಾಗಿ ಗುಣಮಟ್ಟದ ಸವಾಲುಗಳು ಕೇವಲ ಕಾನೂನು ಪಾಲನೆಯ ಮಟ್ಟದಲ್ಲಿ ಉಳಿದುಬಿಡುತ್ತವೆ. ಮುಖ್ಯವಾಗಿ ಕೆಳಹಂತಗಳಲ್ಲಿ ಶಿಕ್ಷಣದ ಆಡಳಿತ ಕುರಿತಂತೆ ನಮ್ಮ ದೇಶ ಹೆಚ್ಚು ಹೆಚ್ಚು ಯೋಚಿಸಬೇಕಿದೆ.

ಗಮನಿಸಬೇಕು. ನಮ್ಮ ದೇಶದಲ್ಲಿ ಶಿಕ್ಷಣ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದಾದ ಕ್ಷೇತ್ರಗಳಲ್ಲೊಂದು. ಶಿಕ್ಷಣ ಚೈತನ್ಯ ಗೊಂಡರೆ ದೇಶ ಉತ್ಸಾಹಗೊಳ್ಳುತ್ತದೆ.

– ಡಾ| ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.