ಪ್ರವಾಸೋದ್ಯಮಕ್ಕೆ ಹೊಸ ರೂಪದ ನಿರೀಕ್ಷೆ : ಪ್ರವಾಸಿ ತಾಣಗಳಿದ್ದರೂ ಮೂಲ ಸೌಕರ್ಯಗಳ ಕೊರತೆ
Team Udayavani, Feb 25, 2021, 5:15 AM IST
ಪುತ್ತೂರು ಜಿಲ್ಲೆಯಾಗಿ ರೂಪುಗೊಂಡಲ್ಲಿ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಆಕರ್ಷಕ ತಾಣಗಳನ್ನು ಹೊಂದಿದ್ದರೂ ಹೊರ ಜಗತ್ತಿಗೆ ಇನ್ನೂ ಪರಿಚಿತವಾಗಿರದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದರೆ ಆರ್ಥಿಕತೆಯ ಉತ್ತೇಜನಕ್ಕೂ ಪೂರಕವಾಗಲಿದೆ. ಇದೆಲ್ಲ ನನಸಾಗಲು ಪುತ್ತೂರು ಜಿಲ್ಲೆಯಾಗುವುದು ಮುಖ್ಯ.
ಪುತ್ತೂರು: ನದಿ, ಝರಿ, ಬೆಟ್ಟ, ಗುಡ್ಡ ಸಹಿತ ನೂರಾರು ಆಕರ್ಷಕ ಪ್ರವಾಸಿ ತಾಣಗಳನ್ನು ಹೊಂದಿದ್ದರೂ ಮಂಗಳೂರಿಗೆ ಹೋಲಿಸಿದರೆ, ಅಷ್ಟೊಂದು ಪ್ರಸಿದ್ಧಿ ಪಡೆ ದಿಲ್ಲ. ಮೂಲ ಸೌಕರ್ಯವೂ ಇದಕ್ಕೆ ಕಾರಣ ವಾಗಿದೆ. ಇವುಗಳ ಅಭಿವೃದ್ಧಿಗೆ ಪುತ್ತೂರು ಜಿಲ್ಲೆ ಯಾಗುವುದು ಮುಖ್ಯ. ಪ್ರಸ್ತುತ ಪ್ರಮುಖ ಪ್ರವಾಸೋದ್ಯಮ ಪೂರಕ ಯೋಜನೆಗಳು ಮಂಗಳೂರು ಕೇಂದ್ರೀಕೃತ ವಾಗಿಯೇ ಇವೆ. ಆದುದರಿಂದ ಜನಾಕರ್ಷಣೆಯ ತಾಣಗಳು ಹೊರ ಜಗತ್ತಿಗೆ ಗ್ರಾಮೀಣ ಪ್ರದೇಶಕ್ಕೆ ಕಾಣಿಸಿಕೊಳ್ಳುತ್ತಿರುವ ಪ್ರಮಾಣ ಕಡಿಮೆ.
ಹೊಸ ಜಿಲ್ಲೆಯಾದರೆ ಇಲ್ಲಿನ ತೆರೆಮರೆ ಯಲ್ಲಿರುವ ತಾಣಗಳಿಗೆ ಹೊಸ ರೂಪ ನೀಡಿ ಜನಮನ ಸೆಳೆಯಬಹುದು. ಅಲ್ಲಿಗೆ ಬೇಕಾದ ಮೂಲ ಸೌಕರ್ಯಗಳು ದೊರೆತು ಜಿಲ್ಲೆಯ ಆರ್ಥಿಕತೆಗೂ ನೆರವಾಗಬಹುದು.
ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಕೃಷಿ, ಅರಣ್ಯ ಸಂಪತ್ತು ಆವರಿತ ಪ್ರದೇಶ. ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಯುಳ್ಳ ಅನೇಕ ಪ್ರದೇಶಗಳಿವೆ. ಊರಿಂದಾಚೆಗೆ ಪಸರಿಸದ ಪ್ರೇಕ್ಷಣೀಯ ಸ್ಥಳಗಳಿಗೆ ಹೊಸ ಜಿಲ್ಲೆಯ ಮೂಲಕ ಹೊಸ ಬೆಳಕು ಹರಿದು ಪ್ರವಾಸೋ ದ್ಯಮ ಕ್ಷೇತ್ರದ ಬೆಳವಣಿಗೆಗೆ ದಾರಿ ಕಂಡು ಕೊಳ್ಳುವ ಅವಕಾಶವೊಂದು ಸಿಗಲಿದೆ.
ಪ್ರಾಕೃತಿಕ ಸಂಪತ್ತಿರುವ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಜಲಪಾತಗಳ ಸಂಖ್ಯೆ ಹೆಚ್ಚಿವೆ. ದೇವರಗುಂಡಿ, ಸೋಣಂಗೇರಿ, ಕೆಮ್ಮನ ಬಳ್ಳಿ, ಚಾಮಡ್ಕ, ಬೆಳ್ತಂಗಡಿ ತಾಲೂಕಿನ ಎರ್ಮಾಯಿ, ಬಂಡಾಜೆ, ಬಡಾಮನೆ, ದಿಡುಪೆ ಫಾಲ್ಸ್ ಮೊದಲಾದವು ಪ್ರೇಕ್ಷಕ ರನ್ನು ಸೆಳೆಯಬಲ್ಲವು. ಸ್ಥಳೀಯವಾಗಿ ಪ್ರಚಲಿ ತವಿರುವ ಈ ತಾಣ ಗಳನ್ನು ಪ್ರವಾಸಿಗರ ಪ್ರದೇಶವಾಗಿ ರೂಪಿಸಬಹುದು.
ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆ ಇರುವುದು ಪುತ್ತೂರು ತಾಲೂಕಿನ ಬೆಂದ್ರ್ ತೀರ್ಥದಲ್ಲಿ. ಪ್ರಖ್ಯಾತ ಸಾಹಿತಿ ಡಾ| ಶಿವರಾಮ ಕಾರಂತರ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಕರ್ಮಭೂಮಿ ಪರ್ಲಡ್ಕದ ಬಾಲವನ, ಬೀರಮಲೆ, ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ, ಬೆಳ್ತಂಗಡಿ ತಾಲೂಕಿನಲ್ಲಿ 1,700 ಅಡಿ ಎತ್ತರದ ಗಡಾಯಿಕಲ್ಲು, ಚಾರ್ಮಾಡಿ ಘಾಟಿ, ಅಳ ದಂಗಡಿ ಅರಮನೆ, ಕಡಬ ತಾಲೂಕಿನ ಕುಮಾರ ಪರ್ವತ ಸಹಿತ ಐದು ತಾಲೂಕುಗಳಲ್ಲಿ ಹತ್ತಾರು ಕ್ಷೇತ್ರಗಳನ್ನು ಪ್ರವಾಸೋದ್ಯಮದ ನೆಲೆಗಳಾಗಿ ಪರಿವರ್ತಿಸಲು ಹೊಸ ಜಿಲ್ಲೆಯ ಉದಯದಿಂದ ಸಾಧ್ಯವಾಗಲಿದೆ.
ಧಾರ್ಮಿಕ ಕ್ಷೇತ್ರ
ಪ್ರೇಕ್ಷಣಿಯ ಸ್ಥಳಗಳ ಜತೆಗೆ ಧಾರ್ಮಿಕ ನೆಲೆಯಲ್ಲಿ ಈ ಐದು ತಾಲೂಕುಗಳು ಪ್ರಸಿದ್ಧಿ ಹೊಂದಿದ್ದು ರಾಜ್ಯ, ದೇಶದ ನಾನಾ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡು ತ್ತಾರೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಬೆಳ್ತಂಗಡಿ ತಾ|ನ ಧರ್ಮಸ್ಥಳ ಹೊಸ ಜಿಲ್ಲೆಗೆ ಮುಕುಟಪ್ರಾಯದಂತೆ ಕಾಣಿಸಬಲ್ಲವು. ಅವು ಈಗಾಗಲೇ ಪ್ರಖ್ಯಾತಿ ಹೊಂದಿದ್ದು ಅದರೊಂದಿಗೆ ತುಳುನಾಡಿನ ಹಿನ್ನೆಲೆಯುಳ್ಳ ಕ್ಷೇತ್ರಗಳು ಪ್ರವರ್ಧಮಾನಕ್ಕೆ ಬರಲು ಸಾಧ್ಯ.
ತುಳುನಾಡಿನ ಅವಳಿ ವೀರಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಾನ ಹೊಂದಿರುವ ಪುತ್ತೂರು ತಾಲೂಕಿನ ಪಡುಮಲೆ, ಮೂಲಸ್ಥಾನ ಗೆಜ್ಜೆಗಿರಿ, ಕೋಟಿ-ಚೆನ್ನೆಯ ಸಮಾಧಿ ಸ್ಥಳ ಇರುವ ಕಡಬ ತಾಲೂಕಿನ ಎಣ್ಮೂರು ಇವೆಲ್ಲವು ಪುಣ್ಯ ನೆಲೆಯಾಗಿ ಗುರುತಿಸಿದ್ದು ಹತ್ತೂರಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈಶ್ವರಮಂಗಲದ ಹನುಮಗಿರಿ ಕ್ಷೇತ್ರ, ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರವು ಪ್ರಸಿದ್ಧಿ ಹೊಂದಿದೆ. ಕಡಬ ತಾಲೂಕಿನ ಕೂರ ಮಸೀದಿ, ಬಂಟ್ವಾಳ ತಾಲೂಕಿನ ನರಹರಿ ಪರ್ವತ, ನಂದಾವರ, ಅಜಿಲಮೊಗೇರು ಮಸೀದಿ, ಕಾರಿಂಜ, ಒಡಿಯೂರು, ಮಾಣಿಲ, ಪಣೋಲಿಬೈಲು, ವೇಣೂರು ಬಾಹುಬಲಿ ಬೆಟ್ಟ, ಸೌತಡ್ಕ ಕ್ಷೇತ್ರ, ಕಾಜೂರು ದರ್ಗಾ, ಶಿಶಿಲೇಶ್ವರ ಮತ್ಸÂ ಕ್ಷೇತ್ರ, ನಾರಾವಿ ಸೂರ್ಯನಾರಾಯಣ ದೇವಾಲಯ ಮೊದಲಾದವು ಕೂಡ ಧಾರ್ಮಿಕ ನೆಲೆಯಲ್ಲಿ ಮಹತ್ವ ಪಡೆದಿದ್ದು, ಮಂಗಳೂರು ಜಿಲ್ಲಾ ಕೇಂದ್ರದಿಂದಲೂ ಜನರು ಸಂಪರ್ಕಿಸುತ್ತಾರೆ.
ಧಾರ್ಮಿಕ ಕ್ಷೇತ್ರವನ್ನು ಯಾತ್ರಾಸ್ಥಳ ವನ್ನಾಗಿ ಅಭಿವೃದ್ಧಿ ಪಡಿಸಲು ಹೊಸ ಜಿಲ್ಲೆ ಸಹಕಾರಿ. ಇದರಿಂದ ಸಂಚಾರ, ಸಂಪರ್ಕ ವ್ಯವಸ್ಥೆ ಸುಧಾರಣೆಗೊಳ್ಳುತ್ತದೆ. ಉದಾಹರಣೆಗೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಜನರಿಗೆ ಎತ್ತರದ ಚಾರಣ ತಾಣ ಕುಮಾರಪರ್ವತವನ್ನು ಒಂದು ಪ್ರಾಕೃತಿಕ ಸಂಪತ್ತನ್ನು ಕಣ್ಮನ ತುಂಬುವ ಪ್ರೇಕ್ಷಣಿಯ ಸ್ಥಳವಾಗಿಯೂ ಬಳಸಬಹುದು. ಇಂತಹ ಹಲವು ಆಯಾಮಗಳಲ್ಲಿ ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರಗಳ ತಾಣವಾಗಿ ರೂಪುಗೊಳ್ಳಲು ಜಿಲ್ಲೆ ಸಕಾಲ ಎಂದು ಪರಿಭಾವಿಸಬಹುದು.
ರೈಲು ಸಂಪರ್ಕದ ಸೌಲಭ್ಯ
ಸರ್ವಧರ್ಮಗಳ ಆರಾಧಾನಾಲಯ ಹೊಂದಿರುವ ಪುತ್ತೂರು ವ್ಯಾಪ್ತಿಗೆ ರೈಲು ಸೇವೆಯೂ ಇರುವುದು ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ. ಮಂಗಳೂರು-ಬೆಂಗಳೂರು ರೈಲು ಪ್ರಸ್ತುತ ಬಂಟ್ವಾಳ, ಪುತ್ತೂರು, ಕಡಬ ತಾಲೂಕು ಮೂಲಕ ಸಾಗುತ್ತಿದೆ. ಇಲ್ಲಿನ ನಿಲ್ದಾಣಗಳ ಆಸುಪಾಸಿನಲ್ಲಿ ಹಲವಾರು ಪ್ರಕೃತಿ ರಮಣೀಯ ತಾಣಗಳೂ ಇರುವುದರಿಂದ ದೂರದ ಪ್ರವಾಸಿಗರು ಭೇಟಿ ನೀಡುವುದೂ ಸುಲಭವಾಗಲಿದೆ. ಇವೆಲ್ಲವುದರ ನಡುವೆ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗಿರುವ ವಿಸಾxಡೋಮ್ (ಗಾಜಿನ ಪರದೆ ಹೊಂದಿರುವ) ಬೋಗಿ ಹೊಂದಿರುವ ರೈಲು ಕೆಲವೇ ಸಮಯದಲ್ಲಿ ಈ ಮಾರ್ಗದಲ್ಲಿಯೇ ಓಡಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.