ವೆನ್ಲಾಕ್ ಆಸ್ಪತ್ರೆ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಯೋಜನೆ

ಕೋವಿಡ್‌-19 ಹೋರಾಟಕ್ಕೆ "ಸ್ಮಾರ್ಟ್‌ ಸಿಟಿ' ಸಾಥ್‌

Team Udayavani, Jun 18, 2020, 6:03 AM IST

ವೆನ್ಲಾಕ್ ಆಸ್ಪತ್ರೆ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಯೋಜನೆ

ವಿಶೇಷ ವರದಿ-ಮಹಾನಗರ: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಕೋವಿಡ್‌-19 ವಾರಿಯರ್ ಜತೆ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಕೂಡ ಕೈಜೋಡಿಸಿದೆ. ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿರುವ ವೆನ್ಲಾಕ್ ಆಸ್ಪತ್ರೆಯ ಮೂಲ ಸೌಕರ್ಯ ಅಭಿವೃದ್ಧಿಗೆ 33 ಕೋ.ರೂ. ಗಳಿಗೂ ಅಧಿಕ ಮೊತ್ತದ ಯೋಜನೆ ಸಿದ್ಧಪಡಿಸಿದೆ.

ವೆನ್ಲಾಕ್ ಕೋವಿಡ್‌ ಆಸ್ಪತ್ರೆಗೆ ಈಗಾಗಲೇ 3.46 ಕೋ.ರೂ. ವೆಚ್ಚದಲ್ಲಿ 37 ಬೆಡ್‌ಗಳ ಅತ್ಯಾಧುನಿಕ ಐಸಿಯು ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಈ ಐಸಿಯು ಬ್ಲಾಕ್‌ ಸದ್ಯ ಕೋವಿಡ್‌-19 ಸೋಂಕಿತರ ಚಿಕಿತ್ಸೆಗೆ ಹಾಗೂ ಮುಂದಿನ ದಿನಗಳಲ್ಲಿ ಇತರ ರೋಗಿಗಳ ಚಿಕಿತ್ಸೆಗೆ ಬಳಕೆಯಾಗಲಿದೆ. ಆಸ್ಪತ್ರೆಗೆ ಐಸಿಯು ಒದಗಿಸುವ ಯೋಜನೆ ಮೊದಲೇ ಸಿದ್ಧವಾಗಿತ್ತು. ಆದರೆ ಕೋವಿಡ್‌ ಆಸ್ಪತ್ರೆಯಾದ ಅನಂತರ ತುರ್ತಾಗಿ ಐಸಿಯು ವ್ಯವಸ್ಥೆ ಬೇಕೆಂಬ ಬೇಡಿಕೆ ಬಂದಿತ್ತು. ಹಾಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಕೇವಲ 21 ದಿನಗಳಲ್ಲೇ ಹೊಸ ಬ್ಲಾಕ್‌ ಸಿದ್ಧಮಾಡಿಕೊಡಲಾಗಿದೆ.

5.50 ಕೋ.ರೂ.
ವೆನ್ಲಾಕ್ ಆಸ್ಪತ್ರೆ ಮುಂದಿನ ಹಲವು ಸಮಯದವರೆಗೆ ಕೋವಿಡ್‌ ಆಸ್ಪತ್ರೆ ಯಾಗಿ ಉಳಿಯುವ ಸಾಧ್ಯತೆಗಳು ಹೆಚ್ಚಾಗಿ ರುವುದರಿಂದ ಅಲ್ಲಿ ಮೂಲಸೌಕರ್ಯಗಳ ಆವಶ್ಯಕತೆಯೂ ಅಧಿಕ. ಹಾಗಾಗಿ ಆಸ್ಪತ್ರೆಗೆ ಹಲವು ರೀತಿಯ ಮೂಲಸೌಕರ್ಯ ಒದಗಿಸಿಕೊಡಲು ಸ್ಮಾರ್ಟ್‌ ಸಿಟಿ ಯೋಜನೆ ಮುಂದಾಗಿದೆ. ಸುಮಾರು 5.50 ಕೋ.ರೂ ವೆಚ್ಚದಲ್ಲಿ ಆಸ್ಪತ್ರೆಯ ಹಳೆಯ ಬ್ಲಾಕ್‌ ಮತ್ತು ಹೊಸ ಬ್ಲಾಕ್‌ಗಳ ನಡುವೆ ನೇರ ಮತ್ತು ಸುಲಭ ಸಂಪರ್ಕ ವ್ಯವಸ್ಥೆ, ಕಾಂಕ್ರೀಟ್‌ ರಸ್ತೆ, ಲ್ಯಾಂಡ್‌ ಸ್ಕೇಪ್‌, ಇಂಟರ್‌ಲಾಕ್‌ ಮೊದಲಾದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆದಿದ್ದು ವಾರದೊಳಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಸ್ಮಾರ್ಟ್‌ ಕಂಟ್ರೋಲ್‌ ರೂಮ್‌
ಕೋವಿಡ್‌-19 ಸೋಂಕು ನಿಯಂತ್ರಣ ಕಾರ್ಯದಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ನಿಯಂತ್ರಣ ಕೊಠಡಿ ತೊಡಗಿಕೊಂಡಿದೆ. ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸುವ್ಯವಸ್ಥಿತವಾದ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಇದು ಲಾಕ್‌ಡೌನ್‌ ಆರಂಭದಿಂದ ಇದು ವರೆಗೂ ಹಗಲಿರುಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿ, ಸಿಬಂದಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

38 ಕೋ.ರೂ. ವೆಚ್ಚದ ಹೊಸ ಸರ್ಜಿಕಲ್‌ ಬ್ಲಾಕ್‌
ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಸರ್ಜಿಕಲ್‌ ಬ್ಲಾಕ್‌ ಇಲ್ಲದಿ ರುವುದರಿಂದ 38 ಕೋ.ರೂ. ವೆಚ್ಚದಲ್ಲಿ ಹೊಸ ಸರ್ಜಿ ಕಲ್‌ ಬ್ಲಾಕ್‌ ಕೂಡ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಾ ಣಗೊಳ್ಳಲಿದೆ. ಇದು 5 ಅಂತ ಸ್ತಿನ ಕಟ್ಟಡವಾಗಿರುತ್ತದೆ. ಪ್ರಸ್ತುತ ಕೋವಿಡ್‌ ಚಿಕಿತ್ಸೆ ಯ ಜವಾ ಬ್ದಾರಿಯೂ ಇರುವು ದರಿಂದ ಪ್ರತ್ಯೇಕ ಸರ್ಜಿಕಲ್‌ ವಾರ್ಡ್‌ ಇತರೆ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದಕ್ಕೆ ಒಂದು ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

ತುರ್ತು ಸ್ಪಂದನೆ
ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ, ಅಂಡರ್‌ಪಾಸ್‌ ಮೊದಲಾದ ಕಾಮಗಾರಿಗಳಲ್ಲದೆ ಆರೋಗ್ಯ, ಶಿಕ್ಷಣ, ಕ್ರೀಡೆ ಮೊದಲಾದವುಗಳಿಗೂ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಕೂಡ ಮಾಡಲು ಅವಕಾಶವಿದೆ. ಆದರಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಸದ್ಯ ಕೋವಿಡ್‌ ಆಸ್ಪತ್ರೆಯಾಗಿರುವುದರಿಂದ ತುರ್ತಾಗಿ ಸ್ಪಂದಿಸಿ ಕೆಲವು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
 - ಮೊಹಮ್ಮದ್‌ ನಝೀರ್‌, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ ಸಿಟಿ ಯೋಜನೆ ಮಂಗಳೂರು

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.