ಹೊಸ ಸುಂಕ ಹಳೆಯ ಎಂಆರ್‌ಪಿ

Team Udayavani, May 30, 2020, 5:54 AM IST

hosa-sumka-mrp

ಬೆಂಗಳೂರು: ಹಳೆಯ ಎಂಆರ್‌ಪಿ ಮೇಲೆ ವಿಧಿಸುತ್ತಿರುವ “ಹೊಸ ಸುಂಕ’ ಅಕ್ಷರಶಃ ಮದ್ಯಪ್ರಿಯರ ಜೇಬು ಸುಡುತ್ತಿದೆ! ಹಳೆಯ ದಾಸ್ತಾನಿನ ಮೇಲೆ ಈ ಹಿಂದಿದ್ದ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ಯೇ ಇದೆ. ಅದಕ್ಕೆ ಸರ್ಕಾರದ ಹೊಸ  ಸುಂಕವನ್ನು ವಿಧಿಸುವ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದೆ. ಆದರೆ, ಆ “ಹೆಚ್ಚುವರಿ ಹಣ’ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿಲ್ಲ. ಬದಲಿಗೆ ಮಾರಾಟಗಾರರ ಬೊಕ್ಕಸಕ್ಕೆ ಹೋಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದು  ಗ್ರಾಹಕರು ಹಾಗೂ ಮದ್ಯ ಮಾರಾಟಗಾರರ ನಡುವಿನ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಪ್ರಸ್ತುತ 2020-21ನೇ ಸಾಲಿನಿಂದ ಜಾರಿಗೆ ಬರುವಂತೆ ಭಾರತೀಯ ತಯಾರಿಕಾ ಮದ್ಯ (ಐಎಂಎ)ದ ದರದಲ್ಲಿ ಶೇ. 6ರಷ್ಟು ಅಬಕಾರಿ ಸುಂಕ ಹೆಚ್ಚಳವನ್ನು ಸರ್ಕಾರ ಬಜೆಟ್‌ನಲ್ಲೇ ಘೋಷಿಸಿತ್ತು.  ದಿಢೀರ್‌ ಲಾಕ್‌ಡೌನ್‌ ಜಾರಿಯಿಂದ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 4ರಿಂದ ವೈನ್‌ಶಾಪ್‌, ಎಂಆರ್‌ಪಿ ಮಳಿಗೆ ಗಳು (ಸಿಎಲ್‌- 2) ಹಾಗೂ  ಎಂಎಸ್‌ ಐಎಲ್‌ ಮದ್ಯದಂಗಡಿಗಳಲ್ಲಿ (ಸಿಎಲ್‌- 11ಸಿ) ಪಾರ್ಸೆಲ್‌ ಸೇವೆಗೆ ಅವಕಾಶ ನೀಡಲಾಗಿತ್ತು.

ಆದರೆ, ಆರಂಭದಲ್ಲಿ ಹಳೆಯ ದಾಸ್ತಾನನ್ನು ಹಿಂದಿನ ಅಬಕಾರಿ ಸುಂಕದ ದರದಲ್ಲೇ ಮಾರಾಟ ಮಾಡಬೇಕು ಎಂದು ಅಬಕಾರಿ ಇಲಾಖೆ  ಸೂಚಿ ಸಿತ್ತು. ಆ ಸಂದರ್ಭದಲ್ಲೂ ಹಲವು ಎಂಆರ್‌ಪಿ ಮಳಿಗೆ, ಎಂಎಸ್‌ಐಎಲ್‌ ಮಳಿಗೆಗಳಲ್ಲಿ ದುಬಾರಿ ದರಕ್ಕೆ ಮದ್ಯ ಮಾರಾಟದ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಹನುಮಂತನಗರ ಸೇರಿದಂತೆ ಕೆಲವೆಡೆ ಕ್ಯಾಶಿಯರ್‌ ಗಳ  ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ನಂತರ ಸರ್ಕಾರ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಸ್ಲಾಬ್‌ಗೆ ಅನುಗುಣವಾಗಿ ಶೇ. 17, ಶೇ. 21 ಹಾಗೂ ಶೇ. 25ರಷ್ಟು ಹೆಚ್ಚಳ ಮಾಡಿತು. ಎರಡು ಬಾರಿ ಅಬಕಾರಿ ಸುಂಕ ಹೆಚ್ಚಳ ದಿಂದ  ಸರಾಸರಿ ಶೇ. 25ರಷ್ಟು ಹೆಚ್ಚಳವಾದಂತಾಯಿತು.

ಹಳೆಯ ಎಂಆರ್‌ಪಿ ನಮೂದು: ಅಬಕಾರಿ ಸುಂಕ ಹೆಚ್ಚಾದರೂ ಹಳೆಯ ಮದ್ಯದ ದಾಸ್ತಾನಿನ ಮೇಲೆ ಹಳೆಯ ಎಂಆರ್‌ಪಿ ದರ ಇರುವುದು ಸನ್ನದು  ದಾರರು ಹಾಗೂ ಗ್ರಾಹಕರ ನಡುವೆ ವಾಗ್ವಾದ, ಕಿತ್ತಾ  ಟಕ್ಕೆ ಕಾರಣವಾಗಿದೆ. ಸರ್ಕಾರ  ಎರಡು ಬಾರಿ ಅಬ  ಕಾರಿ ಸುಂಕ ಹೆಚ್ಚಳ ಮಾಡಿದ್ದರೂ ಕಳೆದ ಮಾ. 31ಕ್ಕೂ ಮೊದಲಿನ ಎಂಆರ್‌ಪಿ ದರವೇ ಮದ್ಯದ ಬಾಟಲಿಗಳ ಮೇಲಿದೆ. ಸನ್ನದುದಾರರೇ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.

ಹೆಚ್ಚಿನ ದರಕ್ಕೆ ಮಾರಾಟ: ಅಬಕಾರಿ ಸುಂಕ ಹೆಚ್ಚಳದಿಂದ ಹೈರಾಣಾಗಿರುವ ನಡುವೆ ಕೆಲವೆಡೆ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದು ಮದ್ಯಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಷ್ಕೃತ ಎಂಆರ್‌ಪಿಗೆ ಕ್ರಮ: ದಿಢೀರ್‌ ಲಾಕ್‌ಡೌನ್‌ನಿಂದ ಮದ್ಯ ಮಾರಾಟ 42 ದಿನ ಸ್ಥಗಿತಗೊಂಡಿದ್ದರಿಂದ ಹಳೆಯ ಮದ್ಯದ ದಾಸ್ತಾನಿನ ಮೇಲೆ ಹಿಂದಿನ ಎಂಆರ್‌ಪಿ ದರವೇ ಇದೆ. ಆದರೆ ಎರಡು ಬಾರಿ ಅಬಕಾರಿ ಸುಂಕ  ಹೆಚ್ಚಳವಾಗಿದೆ. ಹಳೆಯ ದಾಸ್ತಾನು ಬಹುತೇಕ ಮಾರಾಟವಾಗುತ್ತಿದ್ದು, ಹೊಸದಾಗಿ ತಯಾರಾಗುತ್ತಿರುವ ಮದ್ಯಕ್ಕೆ ಪರಿಷ್ಕೃತ ಎಂಆರ್‌ಪಿ ದರವನ್ನೇ ಮುದ್ರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಇಲಾಖೆ  ಮೂಲಗಳು ತಿಳಿಸಿವೆ.

ವಾರದಲ್ಲಿ ಪರಿಷ್ಕೃತ ಎಂಆರ್‌ಪಿ ಭರವಸೆ: ಮದ್ಯದ ಬಾಟಲಿ ಮೇಲೆ ಹಳೆಯ ಎಂಆರ್‌ಪಿ ದರವೇ ಇರುವುದರಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ. ಎಂಆರ್‌ಪಿ ದರ ಕ್ಕಿಂತಲೂ ಹೆಚ್ಚಿನ ದರ ಸಂಗ್ರಹಿಸುತ್ತಿರುವ ಆರೋಪಕ್ಕೆ ಮದ್ಯ ಮಾರಾಟಗಾರರು ಗುರಿಯಾಗುವಂತಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದ್ದು, ವಾರದಲ್ಲಿ ಪರಿಷ್ಕೃತ ಎಂಆರ್‌ಪಿ ದರಪಟ್ಟಿ ಇರುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ  ವೈನ್‌ ಮಾರಾಟ ಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ತಿಳಿಸಿದರು.

* ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.