New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

ಚಾಲುಕ್ಯ ಉತ್ಸವ; ಪ್ರಾಧಿಕಾರಕ್ಕೆ ವೇಗ ಸಿಗಲಿ

Team Udayavani, Jan 1, 2025, 1:20 PM IST

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

ಹೊಸ ವರ್ಷ ಆರಂಭವಾಗಿದೆ. ನಿರೀಕ್ಷೆಗಳೂ ಗರಿಗೆದರಿವೆ. ಹತ್ತು-ಹಲವು ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುವುದನ್ನು ಜನತೆ ಎದುರು ನೋಡುತ್ತಿದ್ದಾರೆ. ಈ ವರ್ಷ ಜಿಲ್ಲೆಯ ಮಟ್ಟಿಗೆ ಆಗಲೇಬೇಕಾದ ಒಂದಷ್ಟು ಕಾರ್ಯಗಳ ಬಗ್ಗೆ ಶ್ರೀಶೈಲ ಕೆ. ಬಿರಾದಾರ ವಿವರಿಸಿದ್ದಾರೆ.

ಸ್ಥಳಾಂತರವಾಗಬೇಕಿದೆ ಐಹೊಳೆ
ದೇಶದ ಸಂಸತ್‌ ಭವನ ನಿರ್ಮಾಣಕ್ಕೆ ಪ್ರೇರಣೆ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಕಲೆಯ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಐಹೊಳೆ ಗ್ರಾಮ ಸ್ಥಳಾಂತರದ ಬೇಡಿಕೆ ಸುಮಾರು ನಾಲ್ಕು ದಶಕಗಳಿಂದ ಕೇಳಿ ಬರುತ್ತಿದೆ. ಕಳೆದ 2013ರಲ್ಲಿ ಇದಕ್ಕಾಗಿ ಆಗಿನ ಸಿಎಂ ಜಗದೀಶ ಶೆಟ್ಟರ ಭೂಮಿಪೂಜೆ ನಡೆಸಿದ್ದರಾದರೂ ಅದು ಈ ವರೆಗೆ ಈಡೇರಿಲ್ಲ. ಪ್ರತಿ ಬಾರಿ ವಿಧಾನಸಭೆ ಚುನಾವಣೆಗೊಮ್ಮೆ ಈ ವಿಷಯ, ರಾಜಕೀಯ ಸರಕಾಗಿ ಬಳಕೆಯಾಗುತ್ತಿದೆ ಹೊರತು ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಯಾರೂ
ಮಾಡಿಲ್ಲ ಎಂಬುದು ಜನರ ಅಸಮಾಧಾನ.

ಕಳೆದ ವರ್ಷ (2024ರಲ್ಲಿ) ಈ ಬೇಡಿಕೆಗೆ ಕೊಂಚ ಸ್ಪಂದನೆ ಸಿಕ್ಕಿದ್ದು, ಸ್ವತಃ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ, ಇದಕ್ಕಾಗಿ ಎರಡು ಹಂತದ ಯೋಜನೆ ಸಿದ್ಧಪಡಿಸಿದ್ದಾರೆ. ಮೊದಲ ಹಂತದಲ್ಲಿ ಐತಿಹಾಸಿಕ ಸ್ಮಾರಕದೊಳಗೆ ಹಾಗೂ
ಹತ್ತಿಕೊಂಡು ಇರುವ ಸುಮಾರು 132 ಮನೆಗಳ ಸ್ಥಳಾಂತರಕ್ಕೆ ಮೊದಲ ಹಂತ ರೂಪಿಸಿದ್ದರೆ, ಇನ್ನುಳಿದ ಮನೆಗಳ ಸ್ಥಳಾಂತರಕ್ಕೆ 2ನೇ ಹಂತದ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಅದು ಇದೇ ವರ್ಷ ಪೂರ್ಣಗೊಳ್ಳಲಿ ಎಂಬುದು ಐಹೊಳೆ ಜನರ ಆಶಯ.

ಚಾಲುಕ್ಯ ಉತ್ಸವ; ಪ್ರಾಧಿಕಾರಕ್ಕೆ ವೇಗ ಸಿಗಲಿ
ಕಳೆದ 2016ರಲ್ಲೇ ಘೋಷಣೆಯಾಗಿದ್ದ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳು, 2024ರಲ್ಲಿ ಕೊಂಚ
ಆರಂಭಗೊಂಡಿವೆ. ಉಪ ವಿಭಾಗಾಧಿಕಾರಿಗಳು, ಇದರ ಅಧ್ಯಕ್ಷರಾಗಿದ್ದು, ಹಂಪಿ ಅಭಿವೃದ್ಧಿ ಪ್ರಾಧಿಕಾರದಂತೆ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೂ ವಾರ್ಷಿಕ 100 ಕೋಟಿ ಅನುದಾನ ನೀಡಬೇಕು ಎಂಬುದು ಇಲ್ಲಿಗೆ ಬರುವ ಪ್ರವಾಸಿಗರ ಒತ್ತಾಯವಾಗಿದೆ.

ಜಿಲ್ಲೆಯ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲ, ರಾಷ್ಟ್ರೀಯ ಸ್ಮಾರಕಗಳ ಪಟ್ಟಿಗೆ ಸೇರಿದ ಐಹೊಳೆ, ಬಾದಾಮಿ, ಪ್ರವಾಸಿ ತಾಣಗಳಾದ ಮಹಾಕೂಟ, ಕೂಡಲಸಂಗಮ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಒಂದೇ ಒಂದು
ಪ್ರಯತ್ನ ಕೂಡ ಈವರೆಗೆ ನಡೆದಿಲ್ಲ. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಗಳೂ ಇಲ್ಲ. ಪ್ರವಾಸಿ ತಾಣಗಳಿಗೆ ಬರುವ ದೇಶ-ವಿದೇಶಿಗರು, ಇದೇನಿದು ಪಕ್ಕಾ ಹಳ್ಳಿಯಂತಿವೆ ಎಂದು ಹೇಳಿ ಹೋಗುವ ಪ್ರಸಂಗ ಹಲವು ಬಾರಿ ನಡೆದಿವೆ. ಹೀಗಾಗಿ ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ, ಕನಿಷ್ಠ ಸೌಲಭ್ಯ ಒದಗಿಸಲು ಚಾಲುಕ್ಯ ಪ್ರಾಧಿಕಾರಕ್ಕೆ ಹಣಕಾಸು ಬಲ ದೊರೆಯಬೇಕಿದೆ. ಅಲ್ಲದೇ ಕಳೆದ 2014ರಿಂದ ಸ್ಥಗಿತಗೊಂಡಿರುವ ಚಾಲುಕ್ಯ ಉತ್ಸವಕ್ಕೆ ಈ ವರ್ಷವಾದರೂ ಚಾಲನೆ ದೊರೆಯುತ್ತಾ ಕಾದು ನೋಡಬೇಕಿದೆ.

ಜಲ ಸಾರಿಗೆಯಿಂದ ಪ್ರವಾಸೋದ್ಯಕ್ಕೆ ಬಲ
ಜಿಲ್ಲೆಯಲ್ಲಿ ಜಲ ಸಾರಿಗೆ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಇಂಬು ಕೊಡಲು ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್‌ ವರೆಗೆ ಜಲ ಸಾರಿಗೆ ಆರಂಭಿಸುವ ಪ್ರಸ್ತಾವನೆ ಈಗಾಗಲೇ ಸಿದ್ಧಗೊಂಡಿದೆ. ಈ ಯೋಜನೆ ಸಾಕಾರಗೊಂಡಲ್ಲಿ ಘಟಪ್ರಭಾ ನದಿ ಪಾತ್ರದ, ಆಲಮಟ್ಟಿ ಜಲಾಶದಯ ಹಿನ್ನೀರ ವ್ಯಾಪ್ತಿಯಲ್ಲಿ
ಬೋಟಿಂಗ್‌ ವ್ಯವಸ್ಥೆ ಆಗಲಿದ್ದು, ಪ್ರವಾಸಿಗರಿಗೆ ವರ್ಷದ 8 ತಿಂಗಳು ಹಬ್ಬ ಇದ್ದಂತಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ-ರಾಜ್ಯ ಸರ್ಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸಮಗ್ರ ಯೋಜನಾ ವರದಿಯೂ ಸಿದ್ಧಗೊಳ್ಳುತ್ತಿದೆ. ಈ ಯೋಜನೆ ತ್ವರಿತವಾಗಿ ಆರಂಭಿಸುವಂತೆ ರಾಜ್ಯಸಭೆ ಸದಸ್ಯರೂ ಆಗಿರುವ ನಾರಾಯಣಸಾ ಭಾಂಡಗೆ, ಕೇಂದ್ರದ ಜಲ ಸಾರಿಗೆ ಸಚಿವರಿಗೆ ಮನವಿ ಕೂಡ ಮಾಡಿದ್ದಾರೆ. ಇದು 2025ರಲ್ಲಿ ಸಾಕಾರಗೊಂಡರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ಬರುವುದರಲ್ಲಿ ಸಂಶಯವಿಲ್ಲ.

ನಡೆಯಬೇಕಿದೆ ನದಿ ಒತ್ತುವರಿ ತೆರವು:
ನದಿಗಳು, ನಿಸರ್ಗ ನಮಗೆ ನೀಡಿದ ದೊಡ್ಡ ಕೊಡುಗೆ. ಆದರೆ, ಸ್ವಾರ್ಥದಾಸೆಗೆ ಬಿದ್ದು ಜಿಲ್ಲೆಯ ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ಎಂಬ ಮೂರು ನದಿಗಳು, ಬಹುತೇಕ ಕಡೆ ಒತ್ತುವರಿಯಾಗಿವೆ. ಅದರಲ್ಲೂ ಮಲಪ್ರಭಾ ನದಿ ಶೋಚನೀಯವಾಗಿದೆ. ಕನಿಷ್ಠ 40ರಿಂದ 80 ಮೀಟರ್‌ ಅಗಲದ ಕೆರೆ, ಸದ್ಯ ಹಳ್ಳದಂತಾಗಿದೆ. ಕೆಲವೆಡೆ ನದಿಯ ಪಾತ್ರ (ಬೆಳಗಾವಿ-ಬಾಗಲಕೋಟೆ ಗಡಿ ಮಧ್ಯೆ ಸಂಗಳ ಹತ್ತಿರ) 10 ಮೀಟರ್‌ ಅಗಲವೂ ಉಳಿದಿಲ್ಲ. ಒಂದೆಡೆ ಮರುಳು ಮಾಫಿಯಾ ವೀರರ ದಾಳಿ, ಮತ್ತೊಂ ದೆಡೆ ಒತ್ತುವರಿದಾರರ ಕಿರುಕುಳದಿಂದ ನದಿಯ ಒಡಲು ಬಗೆದಿದ್ದಾರೆ. ನದಿ ಒತ್ತುವರಿ ತೆರವು ಮಾಡುತ್ತೇವೆಂದು ಸಚಿವರು, ಶಾಸಕರು, ಪತ್ರಿಕಾ ಹೇಳಿಕೆಗೆ ಸಿಮೀತರಾಗಿದ್ದಾರೆ. ಈ ಕಾರ್ಯ ಮಾಡಲು ಮುಂದಾಗುವ ದಕ್ಷ ಅಧಿಕಾರಿಗಳೂ ಜಿಲ್ಲೆಯಲ್ಲಿಲ್ಲ ಎಂಬಂತಾಗಿದೆ. ಈ ನಿಟ್ಟಿನಲ್ಲಿ ನದಿ ಒತ್ತುವರಿ ತೆರವುಗೊಳಿಸಲೆಂದೇ ಭೂಮಾಪನ, ಕಂದಾಯ, ನೀರಾವರಿ ಇಲಾಖೆಯ ಖಡಕ್‌ ಅಧಿಕಾರಿಗಳ ತಂಡ ರಚನೆಗೊಳ್ಳಬೇಕಿದೆ. ಈ ವರ್ಷವಾದರೂ ಒತ್ತುವರಿಯಾದ ನದಿ ಒಡಲು ಮೊದಲಿನಂತಾಗಬೇಕಿದೆ.

ಬರಲಿ ವಂದೇ ಭಾರತ; ಮುಗಿಯಲಿ ಕುಡಚಿ ಮಾರ್ಗ
ಜಿಲ್ಲೆಗೆ ಬೆಂಗಳೂರು, ಮುಂಬೈದಿಂದ ನೇರ ಸಂಪರ್ಕ ಕಲ್ಪಿಸುವ ಒಂದೇ ಒಂದು ರೈಲು ಸೇವೆ ಇಲ್ಲ. ವಿಮಾನಯಾನ ಸೇವೆಯಂತೂ ದೂರದ ಮಾತು. ಕನಿಷ್ಠ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಂದೇ ಭಾರತ ರೈಲು ಸೇವೆ ಬಾಗಲಕೋಟೆಗೂ ಸಿಗಲಿ ಎಂಬುದು ಹಲವರ ಕೂಗು. ಇದಕ್ಕೆ ನೈರುತ್ಯ ರೈಲ್ವೆ ಇಲಾಖೆ ಸ್ಪಂದಿಸಬೇಕಿದೆ. ಇನ್ನು ಕಳೆದ 2009ರಿಂದ ಆರಂಭಗೊಂಡ ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಕುಂಟುತ್ತಲೇ ಸಾಗುತ್ತಿದೆ. ಕಳೆದ 2023ರಿಂದ ಕೊಂಚ ವೇಗ ಸಿಕ್ಕಿದ್ದು, ಭೂಸ್ವಾಧೀನ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ಲೋಕಾಪುರವರೆಗೆ ಮಾರ್ಗ ನಿರ್ಮಾಣಗೊಂಡಿದ್ದು, ಈ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಬೇಕಿದೆ. ಮುಖ್ಯವಾಗಿ ಲೋಕಾಪುರದಿಂದ ಕುಡಚಿವರೆಗೆ ಏಕಕಾಲಕ್ಕೆ ಕಾಮಗಾರಿ ಆರಂಭಗೊಳಿಸಿ 2025ರಲ್ಲೇ ಅದನ್ನು ಪೂರ್ಣಗೊಳಿಸಿ ಪ್ರಯಾಣಿಕರ ಸೇವೆಗೆ ಲೋಕಾರ್ಪಣೆಗೊಳ್ಳಬೇಕಿದೆ.

ನೇಯ್ಗೆಯ ನೇಕಾರರಿಗೆ ಪಾರ್ಕ್‌ ಸಿಗಲಿ
ರಾಜ್ಯದಲ್ಲೇ ಅತಿ ಹೆಚ್ಚು ನೇಕಾರರು ಹೊಂದಿರುವ ಜಿಲ್ಲೆ ಬಾಗಲಕೋಟೆ. ಇಲ್ಲಿನ ಇಳಕಲ್ಲ ಸೀರೆ, ಗುಳೇದಗುಡ್ಡ ಖಣ, ದೇಶದಲ್ಲೇ ಗಮನ ಸೆಳೆದಿವೆ. ಇಳಕಲ್ಲ, ರಬಕವಿ-ಬನಹಟ್ಟಿಯಲ್ಲಿ ಅತಿಹೆಚ್ಚು ನೇಕಾರರಿದ್ದಾರೆ. ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬದುಕುವ ಸಾವಿರಾರು ಕುಟುಂಬಗಳೂ ಇವೆ. ನೇಕಾರರಿಗೆ ಸ್ಥಳೀಯವಾಗಿ ಕಚ್ಚಾ ವಸ್ತುಗಳು ಸಿಗುವಂತೆ ಮಾಡುವ ಜತೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜವಳಿ ಪಾರ್ಕ್‌ ನಿರ್ಮಿಸಬೇಕೆಂಬ ಕೂಗಿಗೆ ಇಂದಿಗೂ ಮನ್ನಣೆ ಸಿಕ್ಕಿಲ್ಲ. ಈ ಕುರಿತು ಹಲವು ಅಧಿವೇಶನದಲ್ಲಿ ಚರ್ಚೆಯಾಗಿದೆ.

ಸರ್ಕಾರದಿಂದ ಭರವಸೆಗಳೂ ಸಿಕ್ಕಿವೆ. ವಿಧಾನಸಭೆ ಚುನಾವಣೆ ವೇಳೆ ಜಮಖಂಡಿಗೆ ಬಂದಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಭಾಷಣದಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ್ದರು. ಹಾಲಿ ಸಿಎಂ ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿದ್ದಾಗ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್‌ ನಿರ್ಮಿಸಬೇಕೆಂದು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ, ಆ ಬಳಿಕ ಸಿಎಂ ಆದ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಪತ್ರ ಕೊಟ್ಟಿದ್ದರಾದರೂ ಈಗ ಅವರೇ ಸಿಎಂ ಆಗಿದ್ದರಿಂದ ಈ ವರ್ಷವಾದರೂ ನೇಕಾರರ ಕೂಗಿಗೆ ಸ್ಪಂದನೆ ಸಿಗಬೇಕಿದೆ.

ಕೃಷ್ಣಾಮೇಲ್ದಂಡೆಗೆ ಸಿಗಲಿ ಅನುದಾನ:
ರಾಜ್ಯದಲ್ಲೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಯುಕೆಪಿಗೆ ಈವರೆಗೆ ಆಡಳಿತಕ್ಕೆ ಬಂದ ಬಹುತೇಕ ಸರ್ಕಾರಗಳು
ನಿರ್ಲಕ್ಷé ಮಾಡುತ್ತಲೇ ಬಂದಿವೆ. ಚುನಾವಣೆಗೊಮ್ಮೆ, ಎಲ್ಲ ರಾಜಕೀಯ ಪಕ್ಷಗಳು ಕೃಷ್ಣೆಗೆ ತೋರುವ ಅಕ್ಕರೆ-ಕಾಳಜಿ
ನೋಡಿದರೆ ಅಧಿಕಾರಕ್ಕೆ ಬಂದ ವರ್ಷವೇ ಎಲ್ಲವೂ ಮಾಡಿ ಮುಗಿಸುತ್ತಾರೆ ಎಂಬಂತೆ ನಂಬಿಸಿ ಮತ ಪಡೆಯುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಕೃಷ್ಣೆಗೆ ಮಲತಾಯಿಯಂತೆ ನೋಡುವ ಪರಂಪರೆ ಇಂದಿಗೂ ಮುಂದುವರಿದಿದೆ. ಇದಕ್ಕಾಗಿ ಸರ್ಕಾರವನ್ನು ಎಚ್ಚರಿಸಲು ಕಳೆದ ತಿಂಗಳಷ್ಟೇ ದೊಡ್ಡ ಹೋರಾಟವೇ ಸಂತ್ರಸ್ತರು ನಡೆಸಿದ್ದಾರೆ. ಇದಕ್ಕೆ ಸರ್ಕಾರ ಭರವಸೆ ಕೂಡ ನೀಡಿದೆ. ಆದರೆ ಕೊಟ್ಟ ಭರವಸೆಯಂತೆ ಸರ್ಕಾರ ನಡೆದುಕೊಳ್ಳಬೇಕು. ಈ ವರ್ಷದ ಮಾರ್ಚ್‌-ಏಪ್ರಿಲ್‌ ನಲ್ಲಿ ನಡೆಯುವ ಬಜೆಟ್‌ನಲ್ಲಿ ಕನಿಷ್ಠ 25 ಸಾವಿರ ಕೋಟಿ ಯುಕೆಪಿಗೆ ಕೊಡಬೇಕು ಎಂಬುದು ಈ ಭಾಗದ ಒಕ್ಕೊರಲಿನ ಒತ್ತಾಯವಿದೆ. ಇದಕ್ಕೆ ಸರ್ಕಾರ ನುಡಿದಂತೆ ನಡೆಯುತ್ತಾ ಕಾದು ನೋಡಬೇಕಿದೆ.

ಈ ವರ್ಷವಾದ್ರೂ ನಡೆಯಲಿ ಚುನಾವಣೆ:
ಜಿ.ಪಂ, ತಾ.ಪಂ.ಗಳಿಗೆ ಐದು ವರ್ಷಗಳ ಒಂದು ಇಡೀ ಅವಧಿಯೇ ಚುನಾವಣೆ ನಡೆಯದೇ ಮುಂದೂಡುತ್ತ ಬಂದಿದ್ದು, ಈ ವರ್ಷವಾದರೂ ಆಡಳಿತ ಮಂಡಳಿ ಬರಲಿ ಎಂಬುದು ಹಲವರ ಒತ್ತಾಯ. ವಿಧಾನಸಭೆ ಚುನಾವಣೆ ಮುಗಿದ ಬಳಿ ನಡೆಯುತ್ತವೆ, ಲೋಕಸಭೆ ಚುನಾವಣೆ ಬಳಿ ನಡೆಯುತ್ತವೆ ಎಂಬುದು ಸುಳ್ಳಾಗಿದೆ. ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಗೆದ್ದು ಹಳ್ಳಿ, ಹೋಬಳಿ ಮಟ್ಟದಲ್ಲಿ ನಾಯಕರಾಗಬೇಕೆಂಬ ಕನಸು ಹೊತ್ತ, ಎಲ್ಲ ಪಕ್ಷಗಳ ಕಿರಿಯ ನಾಯಕರು, ನಿರಾಶೆಗೊಂಡಿದ್ದಾರೆ. ಕಾರ್ಯಕರ್ತರ ಕೈಗೆ ಅಧಿಕಾರ ನೀಡುವುದೆಂದರೆ ನಿಗಮ-ಮಂಡಳಿಗೆ ನೇಮಕ ಮಾಡುವುದಷ್ಟೇ ಅಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಿಸಿ, ಅವರಿಗೆ ಜನಸೇವೆಗೆ ಹಚ್ಚುವುದೂ ಒಂದು ಭಾಗ. ಜಿ.ಪಂ, ತಾ.ಪಂ. ಚುನಾವಣೆಗಳು ಈ ವರ್ಷ ನಡೆಯಲಿ ಎಂಬ ಆಶಯ 2 ಮತ್ತು 3ನೇ ಹಂತದ ನಾಯಕರದ್ದಾಗಿದೆ. ಅದು ಸಾಕಾರಗೊಳ್ಳುತ್ತಾ ಕಾದು ನೋಡಬೇಕಿದೆ.

ಬರಲಿ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆ;
ವೈದ್ಯಕೀಯ ಕಾಲೇಜು ‌ಕಳೆದ 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಿದೆ. ಇದೇ ಸಿಎಂ ಸಿದ್ದರಾಮಯ್ಯ, ಕಳೆದ ವಿಧಾನಸಭೆ ಚುನಾವಣೆ ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ತನ್ನಿ, ವೈದ್ಯಕೀಯ ಕಾಲೇಜಿಗೆ ನಾನೇ ಭೂಮಿಪೂಜೆ ಮಾಡುವೆ, ನಾನೇ ಉದ್ಘಾಟನೆ ಮಾಡುವೆ ಎಂದು ಹೇಳಿದ್ದರು. ಆದರೆ ಈಚೆಗೆ ಸಹಕಾರಿ ಸಪ್ತಾಹಕ್ಕೆ ಬಂದಾಗ ಅವರಾಡಿದ ಮಾತುಗಳು, ಜಿಲ್ಲೆಯ ಜನರಿಗೆ ಬಹಳಷ್ಟು ನಿರಾಶೆ ತಂದಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಸ್ವತಃ ಸಿಎಂ ಹೇಳಿದ್ದಾರೆ. ಹಾಗಾದರೆ ಈಗಿರುವ 400 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ರೂಪಿಸುವುದು ಸರ್ಕಾರಕ್ಕೆ ದೊಡ್ಡ ಸವಲೇ ? ಎಂಬುದು
ಹಲವರ ಪ್ರಶ್ನೆ. ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರಬೇಕಿದೆ. ಅದು ಈ ವರ್ಷವಾದರೂ ಈಡೇರಲಿ ಎಂಬುದು ಹಲವರ ಒತ್ತಾಸೆ.

ಕೆರೆಗಳಿಗೆ ನೀರುಸದ್ಭಳಕೆಯಾಗಲಿ ಹಿನ್ನೀರು
ಕೃಷ್ಣಾ ನ್ಯಾಯಾಧಿಕರಣ-2ರ ಪ್ರಕಾರ ನಮ್ಮ ಪಾಲಿಗೆ ದೊರೆತ 130 ಟಿಎಂಸಿ ನೀರು, ಕಳೆದ 10 ವರ್ಷಗಳಿಂದ ಪಕ್ಕದ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಇದಕ್ಕಾಗಿ 9 ಉಪಯೋಜನೆಗಳ ಮೂಲಕ ನೀರು ಬಳಸಿ ಕೊಳ್ಳುವ ಜವಾಬ್ದಾರಿ ಸರ್ಕಾರ ನಿಭಾಯಿಸಬೇಕಿದೆ. ಅಲ್ಲಿಯ ವರೆಗೂ ಹಿನ್ನೀರು ಬಳಸಿಕೊಂಡು ಕಾಲುವೆ, ನದಿ ಪಕ್ಕದಲ್ಲಿಯೇ ಇರುವ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯಬೇಕಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 64, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ವ್ಯಾಪ್ತಿಯಲ್ಲಿ 162 ಕೆರೆಗಳಿವೆ. ಇದರಲ್ಲಿ ಶೇ.60 ಕೆರೆಗಳು, ನದಿ- ಕಾಲುವೆ ಪಕ್ಕದಲ್ಲೇ ಇದ್ದರೂ ಮಳೆಗಾಲದಲ್ಲಿ ಪ್ರವಾಹ ಬಂದರೂ ಈ ಕೆರೆಗಳಲ್ಲಿ ಹನಿ ನೀರೂ ಇರಲ್ಲ ಎಂಬುದು ದುರ್ದೈವ. ಈ ನಿಟ್ಟಿನಲ್ಲಿ ಸಮಗ್ರ ಕೆರೆಗಳಿಗೆ ನೀರು ತುಂಬಿಸುವ ಬದ್ಧತೆ, ಜಿಲ್ಲೆಯ ಜನಪ್ರತಿನಿಧಿಗಳು ತೋರಬೇಕಿದೆ.

ಟಾಪ್ ನ್ಯೂಸ್

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.