ಲಸಿಕೆ ಸಂಶೋಧನೆ ಲಾಭಕ್ಕೋ, ಪ್ರತಿಷ್ಠೆಗೋ?
Team Udayavani, May 6, 2020, 1:30 PM IST
ನ್ಯೂಯಾರ್ಕ್: ಸುಮಾರು 2 ತಿಂಗಳಿಂದ ಪ್ರಪಂಚ ನಿಂತ ನೀರಾಗಿದ್ದು, ನಾಲ್ಕು ತಿಂಗಳ ಹಿಂದೆ ಚೀನದಲ್ಲಿ ಕಾಣಿಸಿಕೊಂಡ ಕೋವಿಡ್-19 ಎಂಬ ಸೋಂಕಿನಿಂದಾಗಿ ಲೆಕ್ಕವಿಲ್ಲದಷ್ಟು ತೊಂದರೆ-ತಾಪತ್ರಯಗಳು ಎದುರಾಗಿವೆ.
ಈ ವೈರಸ್‌ನ ವಿರುದ್ಧ ಹೋರಾಡಲು ಸಂಶೋಧಕರ ತಂಡಗಳು ನಾ ಮುಂದು ತಾ ಮುಂದು ಎಂದು ಅಸ್ತ್ರವಾದ ಲಸಿಕೆ ಆನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಆದರೆ ಹೀಗೆ ಸಂಶೋಧನೆ ನಡೆಸುತ್ತಿರುವ ಪ್ರತಿ ದೇಶಗಳೂ ಪ್ರಾಮಾಣಿಕವಾಗಿ ಸಮಸ್ಯೆಗೆ ಪರಿಹಾರ ಹುಡುಕುತ್ತಿವೆಯೇ ಅಥವಾ ತಮ್ಮ ಪರಿಣಿತರ ಸಾಮರ್ಥ್ಯ ಪ್ರದರ್ಶನಕ್ಕೆ, ಪ್ರತಿಷ್ಟೆಗೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಕಾರ್ಯೋನ್ಮುಖವಾಗಿವೆಯೋ ಎಂಬುದೀಗ ಚರ್ಚೆಗೀಡಾಗಿದೆ. ಈ ಕುರಿತು ವಾಷಿಂಗ್ಟನ್ ಪೋಸ್ಟ್ ಸಹ ವರದಿ ಮಾಡಿದೆ.
ಲಸಿಕೆ ಆನ್ವೇಷಣೆಗೆ ಮುನ್ನವೇ ಹತ್ತಾರು ಕಂಪೆನಿಗಳು ಭರವಸೆಗಳು ನೀಡುತ್ತಿವೆ. ಆದರೆ ಇದರ ಹಿಂದೆ ವ್ಯಾವಹಾರಿಕ ಲಾಭ ಪಡೆಯುವ ಉದ್ದೇಶ ಇದೆ ಎನ್ನಲಾಗುತ್ತಿದೆ.
ಉದ್ಯಮವಾಗಿ ಪರಿಗಣನೆ
ಸರಕಾರಗಳು, ಔಷಧೀಯ ತಯಾರಿಕಾ ಘಟಕಗಳು, ಬಯೋಟೆಕ್ ಉದ್ಯಮದಾರರು ಸೇರಿದಂತೆ ಶೈಕ್ಷಣಿಕ ಪ್ರಯೋಗಾಲಯಗಳು ಲಸಿಕೆ ಸಂಶೋಧನೆಯಲ್ಲಿ ನಿರತವಾಗಿವೆ. ಇಂತಹ ಸುಮಾರು 90 ಯೋಜನೆಗಳು ಕಾರ್ಯಾಚರಿಸುತ್ತಿದ್ದು, ಇದುವರೆಗೆ ಕೇವಲ ಏಳು ಯೋಜನೆಗಳು ಮಾತ್ರ ಕ್ಲಿನಿಕಲ್ ಪ್ರಾಯೋಗಿಕ ಹಂತವನ್ನು ತಲುಪಿವೆ.
ಪ್ರತಿಷ್ಟತೆಯ ಗೀಳು
ಇದಕ್ಕೆ ಪೂರಕವೆಂಬಂತೆ ಪ್ರತಿಷ್ಠಿತೆಯ ಗೀಳಿಗೆ ಬಿದ್ದಿರುವ ಔಷಧ ತಯಾರಕರು ಮತ್ತು ಸಂಶೋಧಕರು ಲಕ್ಷಾಂತರ ಜನರ ಪ್ರಾಣ ಹಿಂಡುತ್ತಿರುವ ಸೋಂಕಿಗೆ ಅತ್ಯಲ್ಪ ಅವಧಿಯಲ್ಲಿ ಲಸಿಕೆ ಕಂಡು ಹಿಡಿಯಲು ಯೋಚಿಸುತ್ತಿಲ್ಲ ಎನ್ನುವ ಟೀಕೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಯೋಗದ ನಂತರದ ಸುರಕ್ಷತೆಯ ಬಗೆಗೆ ಕಡಿಮೆ ಗಮನ ಕೊಡುತ್ತಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ. ಹಾಗಾಗಿ ಲಾಭದ ದೃಷ್ಟಿಯೇ ಹೆಚ್ಚಿದೆ ಎನ್ನಲಾಗುತ್ತಿದೆ.
ವಿಶ್ವದ ಸಮಸ್ಯೆ ಎಂದು ಪರಿಗಣಿಸಿಲ್ಲ
ಸದ್ಯದ ಪರಿಸ್ಥಿತಿಯಲ್ಲಿ ಕೆಲ ವಿಜ್ಞಾನಿಗಳು ಮತ್ತು ವೈದ್ಯರು ಜಾಗತಿಕವಾಗಿ ಎದುರಾಗಿರುವ ಸಮಸ್ಯೆಗೆ ಲಸಿಕೆಯನ್ನು ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ.
ಆದರೆ ರಾಜಕೀಯ ನಾಯಕರು ಇದು ಕೇವಲ ತಮ್ಮ ರಾಷ್ಟ್ರದ ಸಮಸ್ಯೆ ಎಂದು ಪರಿಗಣಿಸಿದ್ದು, ಮೊದಲು ತಮ್ಮ ಪ್ರಜೆಗಳನ್ನು ಸಂರಕ್ಷಿಸಿಕೊಳ್ಳಲು ಮಾತ್ರ ಕಾಳಜಿ ಪ್ರದರ್ಶಿಸುತ್ತಿದ್ದಾರೆ. ಈ ಪೈಪೋಟಿಯಲ್ಲಿ ಅಮೆರಿಕ ಮಾತ್ರವಲ್ಲ; ಚೀನ ಸಹಿತ ಹಲವರು ರಾಷ್ಟ್ರಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.