ನ್ಯೂಯಾರ್ಕ್: ಸಮಾಧಿ ಮಾಡಲು ಜಾಗವೇ ಇಲ್ಲ
Team Udayavani, May 1, 2020, 2:44 PM IST
ನ್ಯೂಯಾರ್ಕ್ : ಕೋವಿಡ್-19ಗೆ ತತ್ತರಿಸಿ ಹೋಗಿರುವ ನ್ಯೂಯಾರ್ಕ್‌ನಲ್ಲಿ ವಿಚಿತ್ರ ಘಟನೆ ನಡೆದಿದ್ದು,
ಬ್ರೂಕ್ಲಿನ್ ನಗರದ ಸ್ಮಶಾನ ಸಮೀಪದಲ್ಲಿ ಶವಗಳು ತುಂಬಿದ ಟ್ರಕ್ ಪತ್ತೆಯಾಗಿದೆ. ಈ ಕುರಿತು ಸ್ಥಳೀಯರು
ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ವೇಳೆ ಟ್ರಕ್ ತುಂಬಾ ಶವಗಳಿರುವುದು ದೃಢಪಟ್ಟಿದೆ.
ಎಷ್ಟು ದಿನಗಳಿಂದ ಮೃತ ದೇಹಗಳನ್ನು ಹೀಗೆ ಇಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಜತೆಗೆ ಇವರು
ಕೋವಿಡ್-19 ಸೋಂಕಿನಿಂದ ಮೃತಪಟ್ಟವರೇ ಎಂಬ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಶವಗಳ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಆದರೆ ತನಿಖಾ ವೇಳೆ ಬ್ರೂಕ್ಲಿನ್ ನಗರದ ಸ್ಮಶಾನ ಕೇಂದ್ರ ಶವಗಳನ್ನು ಇಡಲು ನಾಲ್ಕು ಟ್ರಕ್‌ಗಳನ್ನು ಬಾಡಿಗೆ ಪಡೆದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಹಿಂದೆ ಬಲವಾದ ಕಾರಣವೂ ಇದೆ ಎಂದು ಹೇಳಿದ್ದಾರೆ ಎಂದು
ಅಲ್ ಜಜೀರಾ ವರದಿ ಮಾಡಿದೆ.
ಸಂಸ್ಕಾರ ಮಾಡಲು ಸ್ಥಳದ ಅಭಾವ
ನ್ಯೂಯಾರ್ಕ್‌ನಲ್ಲಿ ಸದ್ಯ ಶವಗಳನ್ನು ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ. ಸತ್ತವರನ್ನು ಸಮಾಧಿ ಮಾಡಲು ಅಥವಾ ಅಂತ್ಯಸಂಸ್ಕಾರ ಮಾಡಲು ವಾರಗಳವರೆಗೆ ಕಾಯುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದ್ದು, ಹೆಣಗಳನ್ನು ಬಾಡಿಗೆ ಟ್ರಕ್‌ಗಳಲ್ಲಿ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳವನ್ನು ಪರಿಶೀಲಿಸಿರುವ ಬ್ರೂಕ್ಲಿನ್ ಬರೋ ಅಧ್ಯಕ್ಷ ಎರಿಕ್ ಆಡಮ್ಸ್ ಕೂಡ ಯಾವುದನ್ನೂ ಬಹಿರಂಗ ಪಡಿಸಲು ಹಿಂದೇಟು ಹಾಕಿದ್ದಾರೆ. ಈ ವಿಚಾರದ ಕುರಿತು ತನಿಖೆ ನಡೆಯುತ್ತಿದ್ದು, ಈಗ ನಾನು ಏನನ್ನೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಇದೇ ಮಾರ್ಗವನ್ನೇ ಪೊಲೀಸ್ ಇಲಾಖೆ ಮತ್ತು ವೈದ್ಯಕೀಯ ಇಲಾಖೆ ಅನುಸರಿಸುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಲು ಹಿಂದೇಟು ಹಾಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.