ಗೆಲುವಿನ ನಿರೀಕ್ಷೆಯಲ್ಲಿ ಬಾಂಗ್ಲಾದೇಶ
Team Udayavani, Jan 5, 2022, 4:45 AM IST
ಮೌಂಟ್ ಮೌಂಗನಿ: ಆತಿಥೇಯ ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಬಾಂಗ್ಲಾದೇಶ ಹೊಸ ವರ್ಷಕ್ಕೆ ಗೆಲುವಿನ ನಿರೀಕ್ಷೆಯೊಂದನ್ನು ಮೂಡಿಸಿದೆ.
130 ರನ್ ಮುನ್ನಡೆ ಸಾಧಿಸಿದ ಬಳಿಕ ನ್ಯೂಜಿಲ್ಯಾಂಡಿನ 5 ವಿಕೆಟ್‌ಗಳನ್ನು 147ಕ್ಕೆ ಉಡಾಯಿಸಿರುವ ಬಾಂಗ್ಲಾದೇಶ, ಅಂತಿಮ ದಿನ ಬೌಲಿಂಗ್ ದಾಳಿಯನ್ನು ಹರಿತಗೊಳಿಸಿದರೆ ಐತಿಹಾಸಿಕ ಗೆಲುವನ್ನು ಎದುರು ನೋಡಬಹುದು. ಸದ್ಯ ಕಿವೀಸ್ 17 ರನ್ ಮುನ್ನಡೆಯಲ್ಲಿದೆ. ಅನುಭವಿ ರಾಸ್ ಟೇಲರ್ 37 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಿನದಾಟದ ಕೊನೆಯ ಹಂತದಲ್ಲಿ ಮಧ್ಯಮ ವೇಗಿ ಇಬಾದತ್ ಹೊಸೇನ್ 7 ಎಸೆತಗಳ ಅಂತರದಲ್ಲಿ 3 ವಿಕೆಟ್ ಉಡಾಯಿಸಿ ಕಿವೀಸ್ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಎರಡಕ್ಕೆ 136 ರನ್ ಮಾಡಿ ಸುಸ್ಥಿತಿಯಲ್ಲಿದ್ದ ಲ್ಯಾಥಂ ಪಡೆ, ಈಗ 5ಕ್ಕೆ 136 ಎಂಬ ಸ್ಥಿತಿಗೆ ತಲುಪಿದೆ. ಉತ್ತಮವಾಗಿ ಆಡುತ್ತಿದ್ದ ವಿಲ್ ಯಂಗ್ (69) ಅವರನ್ನು ಬೌಲ್ಡ್ ಮಾಡಿದ ಇಬಾದತ್, ಬಳಿಕ ಹೆನ್ರಿ ನಿಕೋಲ್ಸ್ ಮತ್ತು ಟಾಮ್ ಬ್ಲಿಂಡೆಲ್ ಅವರನ್ನು ಶೂನ್ಯಕ್ಕೆ ಮರಳಿಸಿದರು. ಇದಕ್ಕೂ ಮುನ್ನ ಡೇವನ್ ಕಾನ್ವೆ (13) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದ್ದರು. ಇಬಾದತ್ ಸಾಧನೆ 39ಕ್ಕೆ 4.
6ಕ್ಕೆ 401 ರನ್ ಗಳಿಸಿದ್ದ ಬಾಂಗ್ಲಾದೇಶ, ಮಂಗಳವಾರದ ಆಟ ಮುಂದುವರಿಸಿ 458ಕ್ಕೆ ಆಲೌಟ್ ಆಯಿತು.
ಇದನ್ನೂ ಓದಿ:ಪ್ರೊ ಕಬಡ್ಡಿ: ಯು ಮುಂಬಾ ಟೈ; ತಮಿಳ್ ತಲೈವಾಸ್ ಜೈ
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-328 ಮತ್ತು 5 ವಿಕೆಟಿಗೆ 147 (ಯಂಗ್ 69, ಟೇಲರ್ ಬ್ಯಾಟಿಂಗ್ 37, ಇಬಾದತ್ 39ಕ್ಕೆ 4). ಬಾಂಗ್ಲಾದೇಶ-458 (ಮೊಮಿನುಲ್ 88, ದಾಸ್ 86, ಹಸನ್ ಜಾಯ್ 78, ನಜ್ಮುಲ್ 64, ಬೌಲ್ಟ್ 85ಕ್ಕೆ 4, ವ್ಯಾಗ್ನರ್ 101ಕ್ಕೆ 3, ಸೌಥಿ 114ಕ್ಕೆ 2).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.