ನ್ಯೂಯಾರ್ಕ್ ನಲ್ಲಿ ಹೊಸ ಕೋವಿಡ್ ಪ್ರಕರಣ ಕಡಿಮೆ
Team Udayavani, Jun 7, 2020, 5:13 PM IST
ನ್ಯೂಯಾರ್ಕ್: ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಕೇಂದ್ರ ವಲಯವಾಗಿದ್ದ ನ್ಯೂಯಾರ್ಕ್ ರಾಜ್ಯದಲ್ಲೀಗ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಇದೇ ಮೊದಲ ಬಾರಿಗೆ ಇಲ್ಲಿ ಕಡಿಮೆ ಸಂಖ್ಯೆಯ ಅಂದರೆ 42 ಸಾವುಗಳು ವರದಿಯಾಗಿದ್ದು, 2728 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇಲ್ಲಿ ಒಂದು ದಿನದಲ್ಲಿ 18825 ಪ್ರಕರಣಗಳು ವರದಿಯಾಗಿದ್ದು, ಸಾವಿನ ಪ್ರಮಾಣವೂ 800ರ ಮೇಲಿತ್ತು. ಆದರೆ ಗುರುವಾರದಿಂದೀಚೆಗೆ ಇದರ ಪ್ರಮಾಣ ಕಡಿಮೆಯಾಗಿದೆ.
ಕೋವಿಡ್ ಹರಡುವ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದಕ್ಕೆ ಕಾರಣ ಎಚ್ಚೆತ್ತ ಪ್ರಜೆಗಳು. ಅವರು ಸೂಕ್ತ ಸುರಕ್ಷತೆ ಮತ್ತು ಸಾಮಾಜಿಕ ಅಂತರ ಪಾಲಿಸುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ನ್ಯೂಯಾರ್ಕ್‌ನ ಗವರ್ನರ್ ಆಂಡ್ರೂ ಕೋಮೋ ಹೆಳಿದ್ದಾರೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಜನರ ವರ್ತನೆಗಳು ಮಹತ್ತರವಾಗಿ ಬದಲಾವಣೆಯಾಗಿದ್ದು, ಕೋವಿಡ್ ಹರಡದಂತೆ ತಡೆಯಲು ಕಾರಣವಾಗಿದೆ. ಇಂದಿನ ಈ ಕಡಿಮೆ ಸಂಖ್ಯೆಯು ನಾವು ಬದಲಾಗಲು ಸಾಧ್ಯವಿದೆ ಮತ್ತು ಒಂದಾಗಿ ನಡೆದಲ್ಲಿ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಈವರೆಗೆ 3.76 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಮೇ ತಿಂಗಳಿಂದ ಈವರೆಗೆ 100 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾದ ಉದಾಹರಣೆಯೇ ಇರಲಿಲ್ಲ. ಜತೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದೇ ವೇಳೆ ಜೂ.8ರಿಂದ ನ್ಯೂಯಾರ್ಕ್‌ನ ವ್ಯಾಪಾರ ವಹಿವಾಟುಗಳು ಸಹಜ ಸ್ಥಿತಿಗೆ ಬರಲಿದೆ ಎನ್ನಲಾಗಿದೆ. ಸುಮಾರು 40 ಲಕ್ಷ ಮಂದಿ ಮತ್ತೆ ಕೆಲಸಕ್ಕೆ ತೆರಳಲಿದ್ದಾರೆ.
ಮಾರ್ಚ್ ಮಧ್ಯಭಾಗದ ನಂತರದಿಂದ ಇಲ್ಲಿ ಲಾಕ್ ಡೌನ್ ಅನ್ನು ಹೇರಲಾಗಿತ್ತು. ಇನ್ನು ನ್ಯೂಯಾರ್ಕ್ ಹೊರವಲಯದಲ್ಲಿ ಈಗಾಗಲೇ ಚಟುವಟಿಕೆಗಳು ಅಲ್ಪ ಪ್ರಮಾಣದಲ್ಲಿ ಶುರುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.