ನೈಜೀರಿಯ: ಸೋಂಕಿಗಿಂತ ಹಸಿವಿನ ಭಯ ಹೆಚ್ಚು
Team Udayavani, May 18, 2020, 4:45 PM IST
ಮಣಿಪಾಲ: ಕೋವಿಡ್ ಹೋರಾಟದಲ್ಲಿ ಹಿಂದುಳಿದಿರುವ ಆಫ್ರಿಕ ಖಂಡದ ನೈಜಿರೀಯದ ಜನರು ಹೊಟ್ಟೆಗೆ ಹಿಟ್ಟಿಲ್ಲದೆ ಕಂಗಾಲಾಗಿದ್ದಾರೆ.
ಸದಾ ಜನಜಂಗುಳಿಯಿಂದ ಗಿಜುಗುಡುತ್ತಿದ್ದ ನೈಜೀರಿಯದ ಓರಿಲ್ ನಗರದಲ್ಲಿ ಸದ್ಯ ನೀರವ ಮೌನ ನೆಲೆಸಿದೆ. ಹೊಟ್ಟೆಪಾಡಿಗಾಗಿ ಕಟ್ಟಿಕೊಂಡ ತಗಡಿನ ಅಂಗಡಿಗಳ ಬಾಗಿಲುಗಳು ತುಕ್ಕು ಹಿಡಿಯುತ್ತಿದ್ದು, ಜನರ ಸುಳಿವು, ಆರ್ಥಿಕ ಚಟುವಟಿಕೆಗಳಿಲ್ಲದೆ ರಸ್ತೆಗಳು ಭಣಗುಡುತ್ತಿವೆ.
ವೈರಸ್‌ನಿಂದ ಭಯಾನಕ ಡಕಾಯಿತರು
ಜೀವನೋಪಾಯಕ್ಕಾಗಿ ನೈರ್ಮಲ್ಯ , ಕೂಲಿನಾಲಿ, ಮನೆಗೆಲಸ ಎಂಬಿತ್ಯಾದಿ ಅಸಂಘಟಿತ ವಲಯವನ್ನು ನಂಬಿಕೊಂಡಿದ್ದ ಇಲ್ಲಿನ ಸಾವಿರಾರು ಕುಟುಂಬಗಳು ಕೋವಿಡ್‌ನಿಂದಾಗಿ ಬೀದಿಗೆ ಬಿದ್ದಿವೆ. ಅಲ್ಲದೆ ಕ್ಷೀರೋತ್ಪನ್ನ ಕಾರ್ಖಾನೆಗಳು ಕೂಡ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರಿಂದ ಜನರು ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ನಡುವೆಯೇ ನಗರದಲ್ಲಿ ಗುಂಪು ಘರ್ಷಣೆ, ದರೋಡೆ ಮತ್ತು ಕೊಲೆಗಳಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹಗಲು ಗಳಿಕೆಗಾಗಿ ಏನು ಮಾಡುವುದು ಎಂಬ ಚಿಂತೆಯಾದರೆ, ರಾತ್ರಿ ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ. ಸದ್ಯ ರೋಗದ ವಿರುದ್ಧ ಹೋರಾಡುವುದೋ ಅಥವಾ ಡಕಾಯಿತರಿಂದ ರಕ್ಷಿಸಿಕೊಳ್ಳುವುದೋ ತಿಳಿಯುತ್ತಿಲ್ಲ ಎಂದು ಜನರು ತಮ್ಮ ದುಗುಡವನ್ನು ದಿ ಗಾರ್ಡಿಯನ್ ಜತೆ ಹಂಚಿಕೊಂಡಿದ್ದಾರೆ.
ಕರ್ತವ್ಯ ಮರೆತ ಅಧಿಕಾರಿಗಳು
ಸೋಂಕಿನಿಂದ ಆಫ್ರಿಕ ದೇಶಗಳ ಆರೋಗ್ಯ ವ್ಯವಸ್ಥೆ ಮತ್ತಷ್ಟು ದುರ್ಬಲವಾಗಿದ್ದು, ಮುಂಬರುವ ದಿನಗಳಲ್ಲಿ ಏಡ್ಸ್, ಟಿಬಿ , ದಡಾರದಂತಹ ಮಾರಣಾಂತಿಕ ಕಾಯಿಲೆಗಳಿಗೆ ತೆರೆದುಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ಆದರೂ ಎಚ್ಚೆತ್ತುಕೊಳ್ಳದ ಸರಕಾರ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಸಾಧನಗಳಿಲ್ಲದೆ ಜನರು ರೋಗಕ್ಕೆ ತಮ್ಮನ್ನು ಒಡ್ಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮಾಸ್ಕ್ ಗಳ ಬದಲಾಗಿ ಮುಖಕ್ಕೆ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡಿದ್ದಾರೆ.
ಲಾಕ್‌ಡೌನ್ ಕ್ರಮಗಳು ಬಿಗಿ ಆಗುತ್ತ ಹೋದಂತೆ ಲಾಗೋಸ್ ರಾಜ್ಯ ಸರಕಾರ ಬಡ ಪ್ರದೇಶಗಳಿಗೆ ಆಹಾರ ಸೇರಿದಂತೆ ಕೆಲ ಅಗತ್ಯ ಸಾಮಗ್ರಿಗಳನ್ನು ನೀಡುವುದಾಗಿ ಘೋಷಿಸಿತ್ತು. ಆದರೆ ವಾಸ್ತವದಲ್ಲಿ ಆ ನೆರವು ನಾಮಕಾವಸ್ಥೆಯ ಘೋಷಣೆಯಾಗಿದ್ದು, ಎಲ್ಲರಿಗೂ ಸಿಕ್ಕಿಲ್ಲ.
ಜನರು ಸೋಂಕಿನ ಭಯಕ್ಕಿಂತ ಹಸಿವಿನ ಸಂಕಟದಿಂದ ನರಳುತ್ತಿದ್ದಾರೆ. ನಮಗೆ ವೈರಸ್‌ನ ಹೆದರಿಕೆ ಇಲ್ಲ. ಆದರೆ ಅದು ಹುಟ್ಟು ಹಾಕಿದ ಹಸಿವಿನ ಭಯ ಕಾಡುತ್ತಿದೆ. ಮಕ್ಕಳು ಮರಿಗಳ ಹಸಿವಿನ ಆಕ್ರಂದನ ಸಹಿಸಲಾಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ತಾಯಂದಿರು.
ನೈಜೀರಿಯದಲ್ಲಿ ಕಳೆದ 10 ದಿನಗಳಲ್ಲಿ ದೇಶಾದ್ಯಂತ ಹೊಸ ಪ್ರಕರಣಗಳ ಪ್ರಮಾಣ ದುಪ್ಪಟ್ಟಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.