ಕರಾವಳಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ; ಬಿಗಿ ಭದ್ರತೆ
Team Udayavani, Dec 29, 2021, 7:05 AM IST
ಮಂಗಳೂರು/ಉಡುಪಿ: ಮಂಗಳೂರು, ಉಡುಪಿ ಸೇರಿದಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮಂಗಳವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಂಡಿದೆ.
ದಕ್ಷಿಣ ಕನ್ನಡದಲ್ಲಿ ರಾತ್ರಿ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿ ಪೊಲೀಸರು ಮಂಗಳವಾರ ಸಂಜೆಯಿಂದಲೇ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳ ವಡಿಸಿ ಸರಕಾರದ ಸೂಚನೆಯಂತೆ ರಾತ್ರಿ 10ರ ಅನಂತರ ತೀರಾ ಅಗತ್ಯದ ಉದ್ದೇಶಗಳಿಗೆ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ಲಾಕ್‌ಡೌನ್ ಸಂದರ್ಭ ಸುಮಾರು 15 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಅಲ್ಲಿ ವಿಶೇಷ ನಿಗಾ ವಹಿಸಲಾಗುವುದು. ಸರಕಾರದ ಆದೇಶ ಕಟ್ಟುನಿಟ್ಟು ಪಾಲನೆಗೆ ಇತರ ಅಗತ್ಯ ಕ್ರಮಗಳನ್ನು ಕೂಡಕೈಗೊಳ್ಳಲಾಗಿದೆ. ಒಂದು ವೇಳೆ ಅಂಗಡಿಮುಂಗಟ್ಟುಗಳನ್ನು ತೆರೆದಿದ್ದರೆ ಎಚ್ಚರಿಕೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆಆದೇಶ ಉಲ್ಲಂಘಿ ಸಿ ಓಡಾಟ ಕಂಡು ಬಂದರೆ ಪ್ರಕರಣ ದಾಖಲಿ ಸಲಾಗುವುದು ಎಂದು ಎಸ್‌ಪಿ ಹೃಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಉಡುಪಿ: ಪೊಲೀಸರಿಂದ ಪರಿಶೀಲನೆ ಆರಂಭ
ಉಡುಪಿ: ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನ ಜಾರಿ ಮತ್ತು ನಿಯಮ ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ 800ಕ್ಕೂ ಅಧಿಕ ಸಿಬಂದಿ ನಿಯೋಜನೆ ಮಾಡಿದೆ. ಸಿಬಂದಿ ವರ್ಗ ಮಂಗಳವಾರ ರಾತ್ರಿಯಿಂದಲೇ ಪರಿಶೀಲನೆ ಪ್ರಕ್ರಿಯೆ ಅರಂಭಿಸಿದ್ದಾರೆ.
ಉಡುಪಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳು ಸಹಿತವಾಗಿ ಹೆದ್ದಾರಿಗಳಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಡಿ. 28ರ ರಾತ್ರಿ 10ರಿಂದಲೇ ಪರಿಶೀಲನೆ ಪ್ರಕ್ರಿಯೆ ಅರಂಭಿಸಿದೆ. ಕರ್ಫ್ಯೂ ವೇಳೆ ಸಂಚಾರ ಮಾಡುವವರನ್ನು ತಡೆದು, ದಾಖಲೆಗಳನ್ನು ಪರಿಶೀಲಿಸಲಾಗಿದೆ. ತುರ್ತು ಸೇವೆ ಹೊರತುಪಡಿಸಿ, ಅನಗತ್ಯ ಸಂಚಾರ ಮಾಡುವವರಿಗೆ ಎಚ್ಚರಿಕೆ ನೀಡುವ ಜತೆಗೆ ಕಾನೂನಿನಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬಿಗಿ ಭದ್ರತೆ
ಈ ವಿಷಯವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಜಿಲ್ಲೆಯಲ್ಲಿ 25 ಚೆಕ್‌ಪೋಸ್ಟ್ ತೆರೆಯಲಾಗಿದೆ. ಇಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿರಂತರ ತಪಾಸಣೆ ಇರಲಿದೆ. 46 ಪಿಕೆಟಿಂಗ್ ಪಾಯಿಂಟ್ ಗುರುತಿಸಲಾಗಿದೆ. ಅಲ್ಲಿಯೂ ಬ್ಯಾರಿಕೇಡ್‌ಗಳನ್ನು ಹಾಕಿ, ತಪಾಸಣೆಗೆ ಸಿಬಂದಿ ನಿಯೋಜನೆ ಮಾಡಿದ್ದೇವೆ. ಒಟ್ಟಾರೆಯಾಗಿ 800ಕ್ಕೂ ಅಧಿಕ ಸಿಬಂದಿ, 70ಕ್ಕೂ ಅಧಿಕ ಅಧಿಕಾರಿಗಳು, ಐದು ಡಿಆರ್, ಒಂದು ಕ್ಷಿಪ್ರ ಪಡೆ ಹಾಗೂ ಮೂರು ಇಂಟರ್‌ಸೆಪ್ಟರ್ ವಾಹನಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದರು.
ರಾತ್ರಿ ಕರ್ಫ್ಯೂ ವೇಳೆ ಅನಿವಾರ್ಯ ಕಾರಣಗಳಿಗೆ ಸಂಚಾರ ಮಾಡುವವರು ಸೂಕ್ತ ದಾಖಲೆಗಳನ್ನು ಪೊಲೀಸರ ತಪಾಸಣೆ ಸಂದರ್ಭ ನೀಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭ ಸಾರ್ವಜನಿಕರು ಅನಗತ್ಯ ಓಡಾಟ ಮಾಡಬಾರದು. ಖಾಸಗಿ ಸಂಸ್ಥೆಯ ನೌಕರ ವರ್ಗ ಅಥವಾ ರಾತ್ರಿ ಪಾಳಿಯ ನೌಕರರು ತಮ್ಮ ಸಂಸ್ಥೆಯ ಗುರುತಿನ ಚೀಟಿಯನ್ನು ತೋರಿಸಿ, ಉದ್ಯೋಗಕ್ಕೆ ಹೋಗಿ ಬರಬಹುದು. ರೈಲು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವವರು, ಅಲ್ಲಿಂದ ವಾಪಸ್ ಬರುವವರು ಪ್ರಯಾಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲನೆ ವೇಳೆ ಪೊಲೀಸರಿಗೆ ತೋರಿಸಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.