ಹತ್ಯೆಗೊಳಗಾದ ನಿಶಾ ತಂದೆ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್!
Nisha Dahiya,ಸಿಆರ್‌ಪಿಎಫ್ ,ಇನ್‌ಸ್ಪೆಕ್ಟರ್,
Team Udayavani, Nov 12, 2021, 4:14 AM IST
ಸೋನೆಪತ್ (ಹರ್ಯಾಣ): ಇಲ್ಲಿನ ಹಲಾಲ್ಪುರದಲ್ಲಿರುವ ಕುಸ್ತಿ ಅಕಾಡೆಮಿಯಲ್ಲಿ ಬುಧವಾರ ಸ್ಥಳೀಯ ಕುಸ್ತಿಪಟು ನಿಶಾ ದಹಿಯಾ, ಆಕೆಯ ಸಹೋದರ ಸೂರಜ್ ದಹಿಯಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಗುಂಡು ಹಾರಿಸಿದ್ದಾರೆ ಎನ್ನಲಾಗಿರುವ ಕೋಚ್ ಪವನ್ ಪರಾರಿಯಾಗಿದ್ದಾನೆ. ಆತನನ್ನು ಹುಡುಕಲಾಗುತ್ತಿದೆ.
ವಿಶೇಷವೆಂದರೆ, ಹತ್ಯೆಗೊಳಗಾಗಿರುವ ನಿಶಾ ಅವರ ತಂದೆ ಶ್ರೀನಗರದಲ್ಲಿ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಕೋಚ್ ಪವನ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ನಿಶಾ ಆರೋಪಿಸಿದ್ದರು. ಇದರಿಂದ ಸಿಟ್ಟಾದ ಪವನ್ ಗುಂಡು ಹಾರಿಸಿದ್ದಾನೆ ಎಂದು ವರದಿಗಳು ಹೇಳಿವೆ. ನಿಶಾ ಅವರ ತಾಯಿ ತೀವ್ರವಾಗಿ ಗಾಯಗೊಂಡು ರೋಹrಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಮುಂದಿನ ವರ್ಷ 5 ಜಿ ಸ್ಪೆಕ್ಟ್ರಂ ಹರಾಜು: ಸಚಿವ ಅಶ್ವಿನಿ ವೈಷ್ಣವ್
ಸುಶೀಲ್‌ಗೆ ಸಂಬಂಧವಿಲ್ಲ
ವಿಚಿತ್ರವೆಂದರೆ, ಹಲಾಲ್ಪುರದಲ್ಲಿರುವ ಕುಸ್ತಿ ಅಕಾಡೆಮಿಗೆ ಸುಶೀಲ್ ಕುಮಾರ್ ಹೆಸರಿಡಲಾಗಿದೆ. ಆದರೆ ಇದಕ್ಕೂ ವಿಶ್ವವಿಖ್ಯಾತ ಕುಸ್ತಿಪಟು ಸುಶೀಲ್‌ಗೆ ಯಾವುದೇ ಸಂಬಂಧವಿಲ್ಲ! ಇದರ ಮಾಲಕ, ಕೋಚ್ ಎಲ್ಲವೂ ಪವನ್ ಅವರೇ. ಇವರು ರೋಹrಕ್‌ನ ಬಲಂದ್‌ನವರು. ಘಟನೆಯ ಬಳಿಕ ಈ ಅಕಾಡೆಮಿ ಕಟ್ಟಡವನ್ನು ರೊಚ್ಚಿಗೆದ್ದ ಹಳ್ಳಿಗರು ಸುಟ್ಟು ಬೂದಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.