ಕುದುರೆಮುಖ ರಕ್ಷಕರಿಗೆ ಸೋಲಾರ್-ಇ-ಬೈಕ್
Team Udayavani, Nov 17, 2021, 7:05 AM IST
ಸುರತ್ಕಲ್: ಕುದುರೆಮುಖದ ಜೀವ ವೈವಿಧ್ಯ ರಕ್ಷಣೆಗಾಗಿ ಅಲ್ಲಿನ ಅರಣ್ಯ ರಕ್ಷಕರಿಗೆ ಹೆಚ್ಚಿನ ಸವಲತ್ತು ಹೊಂದಿರುವ ಶೇಕಡ ಶೂನ್ಯ ಮಾಲಿನ್ಯ ಹೊಂದಿರುವ ಸೋಲಾರ್ ಇ ಬೈಕ್ ವಿದ್ಯುಗ್ 4.0 ಆನೆ ಬಲ ನೀಡಲಿದೆ.
ಕುದುರೆಮುಖ ವನ್ಯಜೀವಿ ವಿಭಾಗವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭ ಯಾರಣ್ಯ ಎಂಬ ಮೂರು ಸಂರಕ್ಷಿತ ಪ್ರದೇಶಗಳ ಸಂಯೋಜನೆಯಾಗಿದೆ. ಬಹು ವಿಸ್ತಾರವಾದ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿಗಳ ರಕ್ಷಣೆ, ಅಗ್ನಿ ಅವಘಡಗಳಾಗದಂತೆ ಕಣ್ಗಾವಲು ಮತ್ತಿತರ ಭದ್ರತೆ ನೋಡಿಕೊಳ್ಳಲು ರಕ್ಷಕರು ಅನಿರೀಕ್ಷಿತವಾಗಿ ಅರಣ್ಯ ಪ್ರವೇಶಿಸಬೇಕಾಗುತ್ತದೆ. ಭದ್ರತಾ ಸಿಬಂದಿಗೆ ಕಾರ್ಯಾಚರಣೆ ಸಂದರ್ಭ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಎನ್‌ಐಟಿಕೆಯೊಂದಿಗೆ ಕುದುರೆಮುಖ ನ್ಯಾಶನಲ್ ಪಾರ್ಕ್ ಒಪ್ಪಂದ ಮಾಡಿಕೊಂಡಿದೆ. ಇದರಂತೆ ಎನ್‌ಐಟಿಕೆಯು ಕುದುರೆಮುಖದ ಜೀವ ವೈವಿಧ್ಯ ರಕ್ಷಣಾ ವಿಭಾಗಕ್ಕೆ ನೂತನ ತಂತ್ರಜ್ಞಾನ ಆಧಾರಿತ ಸೋಲಾರ್ ಇ ಬೈಕ್ ಅವಿಷ್ಕಾರ ಮಾಡಿದೆ.
ಇದನ್ನೂ ಓದಿ:ಇಂಟರ್ನೆಟ್ ಸ್ಟಾರ್ ಆದ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ
ಸೋಲಾರ್ ಇ ಬೈಕ್ ವಿಶೇಷತೆ
ಎನ್‌ಐಟಿಕೆಯ ಸೆಂಟರ್ ಫಾರ್ ಸ್ಟಿಸ್ಟಮ್ ಡಿಸೈನ್ ತಯಾರಿಸಿದ ಈ ವಿದ್ಯುಗ್ 4.0 ತಂತ್ರಜ್ಞಾನವು ಬಿಎಲ್‌ಡಿಸಿ 2 ಕಿ.ವ್ಯಾ. ಮೋಟಾರ್, 72 ವೋಲ್ಟ್ 33ಎ.ಎಚ್. ಲಿಥಿಯಂ ಬ್ಯಾಟರಿ ಹೊಂದಿದೆ. ಬೈಕಿನಲ್ಲಿ ಅಳವಡಿಸಲಾದ 400 ವಾಟ್ಸ್‌ನ ಮೋನೋ ಕ್ರಿಸ್ಟಲ್ ಸೋಲಾರ್ ಪ್ಯಾನಲ್ ನೆರವಿನಿಂದ ಮತ್ತು 1.5 ಯುಪಿಎಸ್ ಸಹಾಯದಿಂದ ಕಾಡಿ ನಲ್ಲಿಯೇ 3-4 ಗಂಟೆಯ ಒಳಗೆ ಫುಲ್ ಚಾರ್ಜ್ ಮಾಡಬಹುದಾಗಿದೆ. ಶಕ್ತಿ ಯುತವಾದ ಟಾರ್ಚ್, ಹೆಡ್‌ಲೈಟ್, ಮೊಬೈಲ್ ಚಾರ್ಜ್, ಸ್ಟೋರೇಜ್ ವ್ಯವಸ್ಥೆ, ನೀರು ಸಂಗ್ರಹ ಕ್ಯಾನ್‌ಗಳ ಅಳವಡಿಕೆ ಮತ್ತಿತರ ಸೌಲಭ್ಯವಿದೆ. ಅಗತ್ಯ ಬಿದ್ದಾಗ ಹೆಡ್‌ಲೈಟ್ ಅನ್ನು ಟಾರ್ಚ್ ಆಗಿ ಬಳಕೆ ಮಾಡುವ ಸೌಲಭ್ಯವಿದೆ. ರಕ್ಷಿತ್, ಸ್ಟೀವನ್, ರಜತ್, ಸಂದೇಶ್, ಅನುರಾಧಾ, ಲತೀಶ್ ಅವರನ್ನು ಒಳಗೊಂಡ ತಂಡ ಇದನ್ನು ಸಂಶೋಧಿಸಿದೆ.
ವಿದ್ಯುಗ್ 4.0 ಫಾರೆಸ್ಟ್ ಇ-ಬೈಕ್ ಟ್ರೆಂಡ್ ಸೆಂಟರ್ ಆಗಲಿದೆ. ಭವಿಷ್ಯದಲ್ಲಿ ಇನ್ನಷ್ಟು ಬ್ಯಾಟರಿ ಚಾಲಿತ ವಾಹನಗಳ ವಿನ್ಯಾಸಗಳಿಗೆ ಇದು ಬಲತುಂಬಲಿದೆ ಎಂದು ಇ-ಮೊಬಿಲಿಟಿ ಸಂಶೋಧನ ವಿಭಾಗದ ಮುಖ್ಯಸ್ಥ ಪೃಥ್ವಿರಾಜ್ ಯು. ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.