ಕೈಲಾಶಿಯನ್ ಡಾಲರ್ ರಿಲೀಸ್ ಮಾಡಿದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ
Team Udayavani, Aug 24, 2020, 1:27 PM IST
ಹೊಸದಿಲ್ಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, ತಾನೇ ಕಟ್ಟಿರುವುದಾಗಿ ಹೇಳಿಕೊಂಡಿರುವ ಕೈಲಾಸ ರಾಷ್ಟ್ರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಬ್ಯಾಂಕ್ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ. ಇದರ ಜತೆಗೆ ಪ್ರಮುಖ ಅಂಶವೇನೆಂದರೆ “ಕೈಲಾಶಿಯನ್ ಡಾಲರ್’ ಎಂಬ ಕರೆನ್ಸಿಯನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೈಲಾಸ ರಾಷ್ಟ್ರ ರಾಜ ತಾಂತ್ರಿಕವಾಗಿ ಒಪ್ಪಂದ ಮಾಡಿಕೊಳ್ಳುವ ರಾಷ್ಟ್ರದ ಜತೆಗೆ ಅದನ್ನು ಚಲಾವಣೆಗೆ ತರಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾನೆ.
77 ಬಂಗಾರದ ನಾಣ್ಯಗಳು: ರಿಸರ್ವ್ ಬ್ಯಾಂಕ್ ಆಫ್ ಕೈಲಾಸದಿಂದ ಎಂಟು ರೀತಿಯ ಮುಖಬೆಲೆಯುಳ್ಳ 77 ಬಂಗಾರದ ನಾಣ್ಯಗಳನ್ನು ಬಿಡುಗಡೆ ಮಾಡಲಾ ಗಿದೆ. ಒಂದು ಕೈಲಾಶಿಯನ್ ಡಾಲರ್ ನಾಣ್ಯವು 1 ತೊಲ ಬಂಗಾರಕ್ಕೆ ಸರಿಸಮನಾಗಿರಲಿದೆ. ಅಂದರೆ ಒಂದು ಕೈಲಾಶಿಯನ್ ಡಾಲರ್ನಲ್ಲಿ 11.66 ಚಿನ್ನ ಇರಲಿದ್ದು, ಕಾಲು ಭಾಗದ ಕೈಲಾಶಿಯನ್ ಡಾಲರ್ನಲ್ಲಿ 2.91 ಗ್ರಾಂ ಚಿನ್ನ, ಅರ್ಧ ಕೈಲಾ ಶಿಯನ್ ಡಾಲರ್ನಲ್ಲಿ 5.81 ಗ್ರಾಂ ಚಿನ್ನ ಹಾಗೂ ಮುಕ್ಕಾಲು ಭಾಗದ ಕೈಲಾಶಿಯನ್ ಡಾಲರ್ನಲ್ಲಿ 8.77 ಗ್ರಾಂನಷ್ಟು ಚಿನ್ನ ಇರಲಿದೆ. 2 ಕೈಲಾಶಿಯನ್ ಡಾಲರ್ಗಳು ಸೇರಿದರೆ ಒಟ್ಟು 23.32 ಗ್ರಾಂ ಚಿನ್ನವಾಗಲಿದೆ ಎಂದು ನಿತ್ಯಾನಂದ ವಿವರಿಸಿದ್ದಾನೆ. ತನ್ನ ಫೇಸ್ಬುಕ್ ಪುಟ KAILASA’s HDH Nithyananda Paramashivam ನಲ್ಲಿ ಈ ಕುರಿತಂತೆ ಪ್ರಕಟನೆೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.