![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 24, 2023, 10:54 PM IST
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಆದೇಶವೊಂದನ್ನು ತಡೆಹಿಡಿದಿದೆ. ಆ.2ರಂದು 2023ರ ನೋಂದಾಯಿತ ವೈದ್ಯರ ನಿಯಮಾವಳಿಗಳನ್ನು ಅದು ಹೊರಡಿಸಿತ್ತು. ಈ ವೇಳೆ ನೋಂದಾಯಿತ ವೈದ್ಯರು ಜನರಿಕ್ ಔಷಧಿಗಳನ್ನು ಬರೆಯಬೇಕು, ಔಷಧ ಕಂಪನಿಗಳಿಂದ ಯಾವುದೇ ಕಾಣಿಕೆಗಳನ್ನು ಪಡೆಯುವಂತಿಲ್ಲ. ಒಂದು ವೇಳೆ ಈ ನಿಯಮಗಳಿಗೆ ತಪ್ಪಿದರೆ ಅವರ ಪರವಾನಗಿಗಳನ್ನೇ ರದ್ದು ಮಾಡಲಾಗುವುದು ಎಂದು ತಿಳಿಸಿತ್ತು.
ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯರನ್ನು ಭೇಟಿಯಾಗಿದ್ದ ಐಎಂಎ (ಭಾರತೀಯ ವೈದ್ಯಕೀಯ ಸಂಸ್ಥೆ), ಐಪಿಎಗಳು (ಭಾರತೀಯ ಔಷಧೀಯ ಮೈತ್ರಿ), ಮೇಲಿನ ನಿಯಮಾವಳಿಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿದ್ದವು. ಜನೆರಿಕ್ ಔಷದಿಗಳ ಗುಣಮಟ್ಟವೇ ಇನ್ನೂ ಖಾತ್ರಿಯಾಗದಿರುವಾಗ, ಅವನ್ನು ಹೇಗೆ ಸೂಚಿಸುವುದು ಎಂದು ಪ್ರಶ್ನಿಸಿದ್ದವು. ವೈದ್ಯರು ಔಷಧ ಕಂಪನಿಗಳ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿರುವ ಈ ಸಂಸ್ಥೆಗಳು, ಆದೇಶದಿಂದ ಐಎಂಎ, ಐಪಿಎಗಳನ್ನು ಹೊರಗಿಡಬೇಕೆಂದು ಕೇಳಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿರುವ ಎನ್‌ಎಂಸಿ, ಮುಂದಿನ ಆದೇಶ ಬರುವವರೆಗೆ ಹಿಂದಿನ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.