LPG ಕೆವೈಸಿಗೆ ಗಡುವು ವಿಧಿಸಿಲ್ಲ: ಸರಕಾರ ಸ್ಪಷ್ಟನೆ
Team Udayavani, Dec 29, 2023, 11:47 PM IST
ಬೆಂಗಳೂರು: ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಆದರೆ ಅದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಹಾಗಾಗಿ ಈ ವಿಚಾರದಲ್ಲಿ ಗ್ರಾಹಕರಿಗೆ ಆತಂಕ, ಅನಗತ್ಯ ಗೊಂದಲ ಬೇಡ ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ. 31ರ ಒಳಗೆ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ರದ್ದಾಗಲಿದೆ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದರಿಂದ ಆತಂಕಗೊಂಡ ಜನ ರಾಜ್ಯದ ಹಲವು ಭಾಗಗಳಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ಮುಗಿಬೀಳುತ್ತಿದ್ದಾರೆ. ಇದನ್ನು ಗಮನಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
“ತೈಲ ನಿಗಮಗಳಿಂದ ಆಧಾರ್ ಲಿಂಕ್ ಮೂಲಕ ಇ-ಕೆವೈಸಿ ಬಗ್ಗೆ ಜಾಗೃತಿ, ಕೆವೈಸಿ ಅಭಿಯಾನ ನಡೆದಿರುವುದು ನಿಜ.
ಇದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಇದಕ್ಕೂ ಸಬ್ಸಿಡಿಗೂ ಸಂಬಂಧ ಇಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಈಗಾಗಲೇ ಬಹುತೇಕ ಗ್ರಾಹಕರು ಇ-ಕೆವೈಸಿ ಮಾಡಿಕೊಂಡಿದ್ದಾರೆ. ಆ ಪೈಕಿ ಕೆಲವರ ಆಧಾರ್ ಸಂಖ್ಯೆ ಮತ್ತಿತರ ದಾಖಲಾತಿಗಳ ಅಪ್‌ಡೇಟ್ ಆಗುವುದು ಬಾಕಿ ಇರುತ್ತದೆ. ಅದು ಸೇರಿದಂತೆ ಉಜ್ವಲ ಯೋಜನೆ ಫಲಾನುಭವಿಗಳು, ಇನ್ನೂ ಕೆವೈಸಿ ಮಾಡಿಕೊಳ್ಳದವರನ್ನು ವ್ಯವಸ್ಥೆಯ ವ್ಯಾಪ್ತಿಗೆ ತರಲು ತೈಲ ನಿಗಮಗಳಿಂದ ಆಯಾ ಏಜೆನ್ಸಿಗಳ ಮೂಲಕ ಅಭಿಯಾನದ ರೀತಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಇದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಈ ಸಂಬಂಧ ಸ್ವತಃ ಇಲಾಖೆ ಭಾರತೀಯ ತೈಲ ನಿಗಮದ ಕರ್ನಾಟಕ ವಲಯದ ಮುಖ್ಯಸ್ಥರೊಂದಿಗೂ ಚರ್ಚಿಸಲಾಗಿದ್ದು, ಕೆವೈಸಿಗೆ ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಿಗಮಗಳಿಗೆ ಇಲಾಖೆ ಪತ್ರ
ಇದಲ್ಲದೆ ತೈಲ ನಿಗಮಕ್ಕೆ ಇಲಾಖೆ ಯಿಂದ ಪತ್ರವನ್ನೂ ಬರೆಯಲಾಗಿದೆ. ಇ-ಕೆವೈಸಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನ ಇಲಾಖೆ ಗಮನಕ್ಕೆ ತರಬೇಕು. ಇದರಿಂದ ಪೂರಕ ಮಾಹಿತಿ ಜತೆಗೆ ಅಗತ್ಯ ನೆರವು ನೀಡಬಹುದು. ಜತೆಗೆ ಪ್ರಸ್ತುತ ಉಂಟಾಗಿರುವ ಗೊಂದಲವನ್ನೂ ತಪ್ಪಿಸಬಹುದು. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಭಾರತೀಯ ತೈಲ ನಿಗಮದ ರಾಜ್ಯ ಸಮನ್ವಯ ಅಧಿಕಾರಿಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.