ಪೊಲೀಸರ ಕ್ರಮಗಳಿಂದ ರೈತರ ಸಾವಾಗಿಲ್ಲ

ರಾಜ್ಯಸಭೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವಿವರಣೆ

Team Udayavani, Dec 11, 2021, 7:15 AM IST

ಪೊಲೀಸರ ಕ್ರಮಗಳಿಂದ ರೈತರ ಸಾವಾಗಿಲ್ಲ

ಹೊಸದಿಲ್ಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ನಾನಾ ಭಾಗಗಳಲ್ಲಿ ನಡೆದಿದ್ದ ರೈತರ ಪ್ರತಿಭಟನೆ ವೇಳೆ, ಪೊಲೀಸರು ಜಾರಿಗೊಳಿ­ಸಿದ ಕ್ರಮಗಳಲ್ಲಿ ಯಾವುದೇ ರೈತರು ಸಾವಿಗೀಡಾಗಿಲ್ಲ ಎಂದು ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.

ಶುಕ್ರವಾರದ ರಾಜ್ಯಸಭಾ ಕಲಾಪದಲ್ಲಿ, ಕಾಂಗ್ರೆಸ್‌ನ ಧೀರಜ್‌ ಪ್ರಸಾದ್‌ ಸಾಹು ಹಾಗೂ ಆಮ್‌ ಆದ್ಮಿ ಸಂಸದ ಸಂಜಯ್‌ ಸಿಂಗ್‌ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರೈತರ ಪ್ರತಿಭಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿದ್ದ ಕ್ರಮಗಳಲ್ಲಿ ಯಾವುದೇ ರೈತರು ಸಾವಿಗೀಡಾಗಿಲ್ಲ. ಇದರ ಹೊರತಾಗಿಯೂ ನಡೆದಿರುವ ಪ್ರತಿಭಟನ ಸಂಬಂಧಿತ ಘಟನೆಗಳಲ್ಲಿ ರೈತರು ಸಾವಿಗೀಡಾಗಿದ್ದರೆ ಅವರಿಗೆ ಆರ್ಥಿಕ ಪರಿಹಾರ ಕೊಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದೇ ಆಗಿರುತ್ತದೆ’ ಎಂದು ತಿಳಿಸಿದರು.

ರೈಲುಗಳಲ್ಲಿ ಶಯನ ವ್ಯವಸ್ಥೆ ಪರಿಶೀಲನೆ­ಯಲ್ಲಿ: ಹಿರಿಯ ನಾಗರಿಕರಿಗೆ ನೀಡಲಾಗು­ತ್ತಿದ್ದ ರೈಲು ಟಿಕೆಟ್‌ ಶುಲ್ಕ ವಿನಾಯಿತಿ ಸೌಲಭ್ಯವನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿ‌ನ್‌ ವೈಷ್ಣವ್‌, ರಾಜ್ಯಸಭೆಗೆ ತಿಳಿಸಿದ್ದಾರೆ. ಇತ್ತೀಚೆಗೆ ರೈಲುಗಳಲ್ಲಿ ಆಹಾರ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯದಲ್ಲೇ ಹಿರಿಯ ನಾಗರಿ­ಕರಿಗೆ ಟಿಕೆಟ್‌ ಶುಲ್ಕ ರಿಯಾಯಿತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಜತೆಗೆ ಸ್ಲಿàಪರ್‌ ಕೋಚ್‌ಗಳಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಹಾಸಿಗೆ, ದಿಂಬು ನೀಡುವಿಕೆಯನ್ನೂ ಪುನಃ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೊರೊನಾ­ದಿಂದಾಗಿ ಸ್ಲಿàಪರ್‌ ಕೋಚ್‌ಗಳಲ್ಲಿ ಹಾಸಿಗೆ, ದಿಂಬು ನೀಡುವಿಕೆಯನ್ನು ನಿಲ್ಲಿಸಲಾಗಿತ್ತು.

ಇದನ್ನೂ ಓದಿ:ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ

ಅಭಿಯಾನಕ್ಕೆ 446 ಕೋಟಿ ರೂ. ಖರ್ಚು!
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಬೇಟಿ ಪಢಾವೊ, ಬೇಟಿ ಬಚಾವೊ’ ಗಾಗಿ ಮೀಸಲಿರಿಸಿದ್ದ ಹಣದಲ್ಲಿ ಶೇ. 80ರಷ್ಟು ಹಣವನ್ನು ಮಾಧ್ಯಮಗಳ ಜಾಹೀರಾತಿಗೆ ಖರ್ಚು ಮಾಡಲಾಗಿದೆ ಎಂದು ಮಹಿಳಾ ಸಶಕ್ತೀಕರಣ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ. ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಾಧ್ಯಮಗಳ ಮೂಲಕ ಚಾಲನೆ ನೀಡಲಾಗಿದ್ದ ಅಭಿಯಾನಕ್ಕೆ ಬರೋಬ್ಬರಿ 446.72 ಕೋಟಿ ರೂ.ಗಳಷ್ಟು ಹಣ ಖರ್ಚು ಮಾಡಲಾಗಿದೆ. ಇದು ಈ ಯೋಜನೆಗಾಗಿ ಮೀಸರಿಸಿದ ಒಟ್ಟಾರೆ ಹಣದ ಶೇ. 80ರಷ್ಟು ಹಣವಾಗಿದ್ದು, ಇನ್ನು ಮುಂದೆ, ಯೋಜನೆಯ ಹಣವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಕುರಿತಾದ ಯೋಜನೆಗಳಿಗೆ ವ್ಯಯಿಸಬೇಕು ಎಂದು ಸಮಿತಿ ಕೇಂದ್ರಕ್ಕೆ ಕಿವಿಮಾತು ಹೇಳಿದೆ.

 

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WMA: Record temperatures in 2025 too: Heat index has been rising for 10 years

WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ

Wayanad landslide a major natural disaster: Central government declares it a disaster after 5 months

Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ

Telgi stamp paper scam: 5 people, including one from Karnataka, sentenced

Telgi stamp paper scam: ಕರ್ನಾಟಕದ ಓರ್ವ ಸೇರಿ 5 ಮಂದಿಗೆ ಸಜೆ

Assam; 4 villages in Chahar district child marriage free: CM himanta biswa

Assam; ಚಹಾರ್‌ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್‌

50 vehicles get punctured simultaneously on Mumbai-Nagpur highway

Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್‌ ಪಂಕ್ಚರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.