ಕೋವಿಡ್ 19ದಿಂದ ಐಪಿಎಲ್ ನಿಂತರೆ ವಿಮೆ ಸಿಗಲ್ಲ !
ಕೋವಿಡ್ 19 ಹಾವಳಿ ನಿರೀಕ್ಷೆಯನ್ನೇ ಮಾಡದ ಬಿಸಿಸಿಐ ಇದೀಗ ತಾಪತ್ರಯದಲ್ಲಿ
Team Udayavani, Apr 10, 2020, 6:42 AM IST
ಮುಂಬಯಿ: ಈ ಬಾರಿ ಐಪಿಎಲ್ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಒಳಗೊಳಗೇ ಸರ್ವಶಕ್ತಿಯನ್ನು ವಿನಿಯೋಗಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಏನೇ ಮಾಡಿದರೂ ಐಪಿಎಲ್ ನಡೆಸುವುದು ಬಹುತೇಕ ಸಾಧ್ಯವಿಲ್ಲ ಎನ್ನುವುದೂ ಸತ್ಯ.
ಇಷ್ಟರ ಮಧ್ಯೆ ಎಲ್ಲರಿಗೂ ಗೊತ್ತಿಲ್ಲದ ಅಚ್ಚರಿಯ ಸಂಗತಿಯೊಂದಿದೆ. ಒಂದು ವೇಳೆ ಕೋವಿಡ್ 19ದಿಂದ ಈ ಬಾರಿ ನಿಂತು ಹೋದರೆ, ಬೇರೆ ರೀತಿಯಲ್ಲಿ ಹಾನಿಯಾದರೆ ಬಿಸಿಸಿಐಗೆ ವಿಮಾ ಪರಿಹಾರ ಸಿಗುವುದಿಲ್ಲ. ಕಾರಣ ಕೋವಿಡ್ 19 ಬಂದು ಅಪ್ಪಳಿಸಬಹುದು ಎಂಬ ಅಂದಾಜು ಕೂಡ ಹೊಂದಿರದಿದ್ದ ಬಿಸಿಸಿಐ, ಆ ರೀತಿಯ ಒಂದು ವಿಮೆ ಮಾಡಿಸದಿರುವುದು! ಹೀಗೆಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಬಿಸಿಸಿಐ ವಿಮೆ ಮಾಡಿಸಿಲ್ಲವೆಂದು ಇದರರ್ಥವಲ್ಲ. ಈ ರೀತಿಯ ಒಂದು ಸಮಸ್ಯೆಯನ್ನು ಅದು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಅದರ ಪರಿಣಾಮ ಈಗ ಗೊತ್ತಾಗಿದೆ. ಸದ್ಯದ ಮಟ್ಟಿಗೆ ಐಪಿಎಲ್‌ನಲ್ಲಿ ಇರುವ ವಿಮೆಗಳು ಹೀಗಿವೆ: ಕೂಟದ ವಿಮೆ, ವೃತ್ತಿಪರ ನಷ್ಟ ಪರಿಹಾರ ಅಥವಾ ಭದ್ರತೆ, ವಾಣಿಜ್ಯ ಸಾಲಗಳು, ಅಪಹರಣ-ವಿಮೋಚನೆ ಹಣ, ಐಪಿಎಲ್ ಮಾಲಿಕರ ಸಾಲಗಳು, ಔದ್ಯಮಿಕ ತೊಂದರೆಗಳು, ವೈದ್ಯಕೀಯ ಮತ್ತು ಅಪಘಾತ ವಿಮೆಗಳೆಲ್ಲ ಪರಿಹಾರದಲ್ಲಿ ಸೇರಿವೆ ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲ ರಜತ್ ಮಿಶ್ರಾ ಹೇಳಿದ್ದಾರೆ.
ಬಹುಶಃ ವೈದ್ಯಕೀಯ ಕಾರಣದಿಂದ ತೊಂದರೆಯಾಗ ಬಹುದೆಂದು ಬಿಸಿಸಿಐ ನಿರೀಕ್ಷಿಸಿದ್ದರೂ, ಈ ಕಾರಣದಿಂದ ಐಪಿಎಲ್ ಕೂಟವೇ ನಿಂತುಹೋಗುತ್ತದೆ ಎಂದು ಭಾವಿಸಿರಲಿಲ್ಲ. ಅದರಲ್ಲೂ ಕೋವಿಡ್ 19 ಎಂಬ ವೈರಸ್ ಅನ್ನು ಅದು ನಿರೀಕ್ಷಿಸಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.