ಸೌಹಾರ್ದ ಸಹಕಾರಿ ಪ್ರಾಥಮಿಕ ಸೊಸೈಟಿಗೆ ಹಸ್ತಕ್ಷೇಪ ಮಾಡಲ್ಲ: ಕೃಷ್ಣಾ ರೆಡ್ಡಿ
Team Udayavani, Nov 9, 2021, 12:39 PM IST
ಶಿರಸಿ: ಯಾವುದೇ ಕಾರಣಕ್ಕೂ ಪ್ರಾಥಮಿಕ ಪತ್ತಿನ ಸೇವಾ ಸಹಕಾರಿ ಸಂಘಗಳ ವ್ಯಾಪ್ತಿಯಲ್ಲಿ ಸೌಹಾರ್ದ ಸಹಕಾರಿ ಹಸ್ತ ಕ್ಷೇಪ ಮಾಡುವುದಿಲ್ಲ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯ ಅಧ್ಯಕ್ಷ ಬಿ.ಎಚ್.ಕೃಷ್ಣ ರೆಡ್ಡಿ ಹೇಳಿದರು.
ಮಂಗಳವಾರ ನಗರದ ಮಧು ವನದಲ್ಲಿ ಸುದ್ದಿಗೋಷ್ಡಿ ನಡೆಸಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಇರುವ ಆದಾಯ ತೆರಿಗೆ ವಿನಾಯಿತಿ ವ್ಯಾಪ್ತಿಗೆ ಮಾತ್ರ ಸೌಹಾರ್ದ ಸಹಕಾರಿ ಸೇರಿದೆ. ಉಳಿದಂತೆ ಅವುಗಳ ಕಾರ್ಯ, ನಮ್ಮ ಕಾರ್ಯಗಳೇ ಬೇರೆ. ಸಹಕಾರ ಭಾರತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವುದರಿಂದ ಪ್ರಾಥಮಿಕ ಸಹಕಾರಿ, ಮಾರ್ಕೇಟಿಂಗ್ ಸಹಕಾರಿಗಳ ಸಮಸ್ಯೆ ಕೂಡ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರ ಬಳಿ ಸಮಾಲೋಚನೆ ನಡೆಸುತ್ತೇವೆ. ಈಗಿರುವ ಗೊಂದಲ ನಿವಾರಿಸಿ ಕೆಲಸ ಮಾಡುವುದಾಗಿ ಹೇಳಿದರು.
ಪಂಜಾಬ್, ಮಹಾರಾಷ್ಟ್ರ ಸಹಕಾರ ಬ್ಯಾಂಕ್, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ನಂತರ ರಾಜ್ಯದ ಸಹಕಾರ ಕ್ಷೇತ್ರದ ವಿಶ್ವಾಸದ ಕೊರತೆ ಎದುರಿಸುತ್ತಿದೆ. ಸಹಕಾರ ಕ್ಷೇತ್ರದ ವಿಶ್ವಾಸ ಮರು ಸ್ಥಾಪನೆ, ಠೇವಣಿದಾರರ ಹಿತರಕ್ಷಣೆಗೆ ಸೌಹಾರ್ದ ಸಹಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವಿವರಿಸಿದ ಅವರು, ಸೌಹಾರ್ದ ಸಹಕಾರಿ ದೂರು ನೀಡಲು, ಹಾಗೂ ಹಣಕಾಸು ಅವ್ಯವಹಾರದಲ್ಲಿ ತೊಡಗಿದ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜಾರಿಗೊಳಿಸಲು ಉನ್ನತ ಅಧಿಕಾರಿಗಳ ವಿಶೇಷ ಕಾರ್ಯಪಡೆ ಜಾರಿಗೆ ತರಲಾಗಿದೆ ಎಂದೂ ವಿವರಿಸಿದರು.
ಇದನ್ನೂ ಓದಿ: ಬೆಳ್ತಂಗಡಿ: ಹಳ್ಳ ದಾಟುವ ವೇಳೆ ಕಾಲು ಜಾರಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು
ಆರಂಭಿಕ ಹಂತದಲ್ಲೇ ಸಹಕಾರಿ ಅವ್ಯವಹಾರ ತಡೆಗಟ್ಟಲು ಆರಂಭದಲ್ಲೇ ಪ್ರಯತ್ನ ಮಾಡಲಾಗುತ್ತದೆ. ಅದಕ್ಕಾಗಿ ಈ ವಿಶೇಷ ಟಾಸ್ಕ್ ಫೊರ್ಸ್ ಎಂದ ಅವರು, ಬೆಂಗಳೂರಿನ ಕೇಂದ್ರ ಕಛೇರಿ ಕಟ್ಟಡವನ್ನು ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟಿಸಲು ಡಿಸೆಂಬರ್ ಗೆ ಬರಲಿದ್ದಾರೆ. ಕಲಬುರ್ಗಿ, ಬೆಳಗಾವಿಯಲ್ಲಿ ಸ್ವಂತ ಕಟ್ಟಡ ಆಗಿದ್ದು, ಮೈಸೂರಿನಲ್ಲೂ ಶೀಘ್ರ ಆಗಲಿದೆ ಎಂದರು.
ರಾಜ್ಯದಲ್ಲಿ 5300ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. 50 ಲಕ್ಷಕ್ಕೂ ಅಧಿಕ ಸದಸ್ಯರು ಇದ್ದಾರೆ. 60 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಕ್ಕಿದೆ. 750 ಕೋಟಿ ರೂ.ಗಳ ಪಾಲು ಬಂಡವಾಳ, 15000 ಕೋಟಿ ರೂ. ಠೇವಣಿ, 100 ಕೋ.ರೂ.ನಿಧಿ, 230 ಕೋಟಿ ರೂ ಲಾಭ ಆಗಿದೆ. 1300ಕ್ಕೂ ಅಧಿಕ ಕೇಂದ್ರ ಗಳಲ್ಲಿ ಇ ಸ್ಟಾಂಪಿಂಗ್ ಸೇವೆ ಇದೆ ಎಂದರು.
ಈ ವೇಳೆ ರಾಜ್ಯ ನಿರ್ದೇಶಕಿ ಸರಸ್ವತಿ ಎನ್.ರವಿ, ಸಹಕಾರ ಭಾರತಿ ರಾಜ್ಯ ನಿರ್ದೇಶಕ ಶಂಭುಲಿಂಗ ಹೆಗಡೆ, ಸೌಹಾರ್ದ ಫೆಡರಲ್ ಜಿಲ್ಲಾ ಅಧ್ಯಕ್ಷ ಪ್ರಮೋದ ಹೆಗಡೆ, ಕಾರ್ಯದರ್ಶಿ ಕೆ.ವಿ.ನಾಯ್ಕ ಇತರರು ಇದ್ದರು.
ಸಹಕಾರಿ ಭಾರತಿ, ಸೌಹಾರ್ದ ಸಹಕಾರಿ ಎರಡೂ ಬೇರೆ. ಇಲ್ಲಿ ಸಮ್ಮಿಶ್ರ ಮಾಡುವುದಿಲ್ಲ. ಸಹಕಾರಿ ಭಾರತಿ ಕೂಡ ರಾಜಕೀಯೇತರ ಸಂಸ್ಥೆ. -ಕೃಷ್ಣಾ ರೆಡ್ಡಿ, ಅಧ್ಯಕ್ಷರು ಸೌಹಾರ್ದ ಸಹಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.