ನಿರ್ವಹಣೆ ಇಲ್ಲದೇ ಒಣಗುತ್ತಿವೆ ಉದ್ಯಾನವನದ ಗಿಡಗಳು
Team Udayavani, Nov 30, 2020, 3:28 PM IST
ಕುಷ್ಟಗಿ: ಪಟ್ಟಣದ 1ನೇ ವಾರ್ಡ್ ಕೃಷ್ಣಗಿರಿ ಕಾಲೋನಿಯಲ್ಲಿ ಖಾಸಗಿ ಬಡಾವಣೆಗೆ ಹೊಂದಿಕೊಂಡಿರುವ ಉದ್ಯಾನವನದಲ್ಲಿ ಲೇಔಟ್ ಮಾಲೀಕರು ಹಾಗೂ ಪುರಸಭೆ ನಿರ್ವಹಣೆ ಇಲ್ಲದೇ ಗಿಡಗಳು ನೀರಿಲ್ಲದೇ ಒಣಗುತ್ತಿವೆ. ಕೃಷ್ಣಗಿರಿ ಕಾಲೋನಿಯಲ್ಲಿ ನಿವೇಶನಗಳನ್ನು ರಚಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಉದ್ಯಾನವನ ನಿರ್ಮಿಸಿ ಸುತ್ತಲೂ ಸಸಿಗಳ ರಕ್ಷಣೆ ಗ್ರಿಲ್, ದ್ವಾರ ಬಾಗಿಲು ಅಳವಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಉದ್ಯಾನವನದಲ್ಲಿ ಕಸ ಬೆಳೆದಿದ್ದು, ನಾಟಿ ಮಾಡಿದ್ದ ಗಿಡಗಳು ನೀರಿಲ್ಲದೇ ಒಣಗಲಾರಂಭಿಸಿದೆ. ಗಿಡಗಳಿಗೆ ಗ್ರಿಲ್ ರಕ್ಷಣೆ ಇದ್ದರೂ ನೀರಿಲ್ಲದೇ ಒಣಗುತ್ತಿದೆ. ಈ ಕುರಿತು ಪುರಸಭೆ ಸದಸ್ಯೆ ಗೀತಾ ಕೋಳೂರು ಪ್ರತಿಕ್ರಿಯಿಸಿ, ಉದ್ಯಾನವನನ್ನು
ಪುರಸಭೆಗೆ ಹಸ್ತಾಂತರಿಸಿಕೊಂಡಿಲ್ಲ. ಯಾಕೆಂದರೆ ಲೇಔಟ್ ಮಾಲೀಕರು ಚರಂಡಿ ಸಂಪರ್ಕ ಕೆಲಸ ಹಾಗೂ ಇತರೆ ಕೆಲಸ ಬಾಕಿ ಉಳಿಸಿಕೊಂಡಿದ್ದಾರೆ. ಉದ್ಯಾನವವನ್ನು ಪುರಸಭೆಗೆ ಹಸ್ತಾಂತರಿಸುವವರೆಗೂ ಲೇಔಟ್ ಮಾಲೀಕರು ಸಸ್ಯೆಗಳ ಸಂರಕ್ಷಣೆ ಕ್ರಮ
ಕೈಗೊಳ್ಳಬೇಕಿದೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಗೆ ಸುಳ್ಳೇ ‘ಮನೆ ದೇವರು’: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ಟೀಕೆ
ಪುರಸಭೆ ಹಾಗೂ ಲೇಔಟ್ ಮಾಲೀಕರ ಸಮನ್ವಯ ಕೊರತೆಯಿಂದ ಬೆಳೆಸಿದ್ದ ಗಿಡಗಳನ್ನು ಉದ್ಯಾನವನದಲ್ಲಿ ಒಣಗುತ್ತಿರುವುದು
ವಿಪರ್ಯಾಸವೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.