ಸೋಂಕು ಮರೆತ ಜನ; ಪಾಲನೆ ಆಗದ ನಿಯಮ
ಮಾಸ್ಕ್ ಧರಿಸಲ್ಲ, ಸಾಮಾಜಿಕ ಅಂತರ ಇಲ್ಲವೇ ಇಲ್ಲ ; ಜಿಲ್ಲೆಯಲ್ಲಿ ಎಂದಿನಂತೆ ಸವಾರರ ಸಂಚಾರ
Team Udayavani, Aug 13, 2021, 5:47 PM IST
ಕಲ್ಪತರು ನಾಡಿನಲ್ಲಿ ಕೋವಿಡ್ ಕಡಿಮೆಯಾಗಿ ಪಾಸಿವಿಟಿದರ ಶೇ.1 ಕ್ಕಿಂತ ಕಡಿಮೆ ಆಗಿ ಸದ್ಯ 2ನೇ ಅಲೆ ಕಡಿಮೆಯಾಗಿತು ಎಂದು ಸಮಾಧಾನಗೊಳ್ಳುತ್ತಿರುವಲ್ಲೇ ಅಕ್ಕ ಪಕ್ಕದ ರಾಜ್ಯಗಳಲ್ಲಿ ಮತ್ತು ಬೆಂಗಳೂರು ಸೇರಿ ಇತರೆ ಜಿಲ್ಲೆಗಳಲ್ಲಿ ಕೋವಿಡ್ ಮತ್ತೆ ಏರಿಕೆಯಾಗುತ್ತಿದೆ. ಜನಆತಂಕ ಪಡುತ್ತಿದ್ದು 3ನೇ ಅಲೆಯಭೀತಿ ನಡುವೆ ಮಾಸ ಆರಂಭವಾಗಿದೆ. ಸಾಲು..ಸಾಲು ಹಬ್ಬ ದೇವರ ದರ್ಶನಕ್ಕೆ ಜನ ಕೋವಿಡ್ ಮರೆತು ಮುಗಿಬೀಳುತ್ತಿದ್ದು ಸೋಂಕು ತಡೆಗೆ ದೇಗುಲಗಳಲ್ಲಿ ಜನಸೇರುವುದಕ್ಕೂ ಜಿಲ್ಲಾಡಳಿತ ನಿರ್ಬಂಧ ಹೇರಿದೆ
ತುಮಕೂರು: ಮಹಾಮಾರಿ ಕೋವಿಡ್ ಅಕ್ಕ ಪಕ್ಕದ ರಾಜ್ಯ, ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಜಿಲ್ಲೆಯ ಜನತೆಗೂ
ಆತಂಕ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ಜನ ಕೋವಿಡ್ ನಿಯಮ ಮೀರಿ ಎಗ್ಗಿಲ್ಲದೇ ವಾಹನಗಳಲ್ಲಿ ಸಂಚಾರ ಹೆಚ್ಚಿದೆ. ಪ್ರವಾಸಿ ಕೇಂದ್ರ,
ದೇಗುಲಗಳಿಗೆ ಭೇಟಿ ಸಾಮಾನ್ಯವಾಗಿದೆ.
ಆತಂಕ: ಕಳೆದ 2-3 ದಿನಗಳಿಂದ ಕೋವಿಡ್ ಪಾಸಿವಿಟಿ ದರ ಕಡಿಮೆಯಾಗಿ ಶೇ.1ರ ಒಳಗೆ ಬರುತ್ತಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ಏರುಪೇರು ಆಗುತ್ತಿದೆ. ಸರ್ಕಾರ ಸೋಂಕು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿತ್ತು. ಆದರೆ,3ನೇ ಅಲೆ ಅಬ್ಬರ ಆತಂಕ ತಂದೊಡ್ಡಿದೆ.
ಸರ್ಕಾರ ಕೋವಿಡ್ 2ನೇ ಅಲೆ ಕಡಿಮೆಯಾಯಿತು ಎಂದು ಲಾಕ್‌ಡೌನ್ ಅನ್ನು ಜಿಲ್ಲಾಡಳಿತ ತೆಗೆದ ಮೇಲೆ ಜನ ಕೋವಿಡ್ ದೂರವಾಗಿದೆ ಎನ್ನುವ ಭಾವನೆಯಿಂದ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರಕಾಯ್ದುಕೊಳ್ಳದೇ ಕೋವಿಡ್ ಮರೆತು ಲೀಲಾ ಜಾಲವಾಗಿ ವಾಹನ
ಗಳಲ್ಲಿ ಎಂದಿನಂತೆ ಸಂಚಾರ ಮಾಡುತ್ತಿದ್ದರು.
ಇದನ್ನೂ ಓದಿ:250 ಅಭ್ಯರ್ಥಿಗಳಿಗೆ ಸೇನಾ ತರಬೇತಿ; 225 ಬಾಲಕ-25 ಬಾಲಕಿಯರು ಆಯ್ಕೆ
ಜಿಲ್ಲಾಡಳಿತ ಏನೇ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿ ಮಾಡಿದರೂ ಸೊಪ್ಪು ಹಾಕದೇ ತಮಗಿಷ್ಟ ಬಂದಂತೆ ಅಡ್ಡಾಡುತ್ತಿರುವುದು ನಿಯಂತ್ರಣಕ್ಕೆ ಬರುತ್ತಿರುವ ಕೋವಿಡ್ ಸೋಂಕು ಮತ್ತೆ ಹೆಚ್ಚಾಗುವ ಲಕ್ಷಣ ಹೆಚ್ಚು ಗೋಚರಿಸುತ್ತಿವೆ. ಬೆಳಗ್ಗೆಯಿಂದಲೇ ಆಟೋ ರಿಕ್ಷಾ, ಕಾರು, ಬೈಕ್ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಯಾರ ಭಯವೂ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.
ಮುಗಿ ಬಿದ್ದಿದ್ದಾರೆ:ಇನ್ನು ಆಟೋ ರಿಕ್ಷಾಗಳಿಗೆ ಕೋವಿಡ್ ಮರೆತು ಮಾಸ್ಕ್ ಇಲ್ಲದೇ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಆಟೋ ತುಂಬಾ
ನಾಲ್ಕೆದು ಜನರನ್ನು ಕೂರಿಸಿಕೊಂಡು ಸಂಚಾರ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇನ್ನು ದಿನಸಿ,ಹಾಲು, ತರಕಾರಿ, ಮಾಂಸದ ಅಂಗಡಿಗಳು ವ್ಯಾಪಾರ ವಹಿವಾಟು ಎಂದಿನಂತೆ ಇದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಇರುವ ಹಿನ್ನಲೆ ಬಟ್ಟೆ, ದಿನಸಿ ಅಂಗಡಿಗಳಲ್ಲಿ ಜನಖರೀದಿಗೆ ಮುಗಿಬಿದ್ದಿದ್ದಾರೆ.
ನಗರದ ಎಂ.ಜಿ.ರಸ್ತೆ,ಬಿ.ಎಚ್. ರಸ್ತೆ, ಮಂಡಿ ಪೇಟೆ, ಎಸ್. ಎಸ್.ಪುರಂ, ಸೇರಿದಂತೆ ವಿವಿಧ ರಸ್ತೆ, ಮಾರುಕಟ್ಟೆಗಳಲ್ಲಿ ಜನವೋ ಜನ ಕಂಡು ಬರುತ್ತಿದ್ದಾರೆ. ಖಾಸಗಿ, ಸಾರಿಗೆ ಬಸ್, ನಗರ ಸಾರಿಗೆ ಬಸ್‌ಗಳ ಸಂಚಾರ ಹೆಚ್ಚಿಸಿವೆ. ಆಟೋರಿಕ್ಷಾ, ಕಾರು, ಬೈಕ್ ಸಂಚಾರದಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಂಚಾರ ದಟ್ಟಣೆ ಗಮನಿಸಿದರೆ ನಗರದಲ್ಲಿ ಯಾವಾಗ ಮತ್ತೆ ಕೋವಿಡ್ ಹೆಚ್ಚಿಬಿಡುತ್ತೋ ಎನ್ನುವ ಆತಂಕ ಎದುರಾಗಿದೆ.
ನೆಗೆಟಿವ್ ವರದಿ ಕಡ್ಡಾಯ
ಹೊರ ರಾಜ್ಯಗಳಲ್ಲಿ ಕೋವಿಡ್ ಮಹಾಮಾರಿ ತೀವ್ರವಾಗುತ್ತಿರುವ ಹಿನ್ನಲೆ ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಪತ್ರ ಕಡ್ಡಾಯ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ. ಹೊರ ರಾಜ್ಯದವರು ಜಿಲ್ಲೆಯ ವಸತಿ ಗೃಹಗಳಲ್ಲಿ ತಂಗಲು72 ಗಂಟೆಯೊಳಗೆ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪತ್ರ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಜಾ ದಿನ ನಿರ್ಬಂಧ
ಶ್ರಾವಣಮಾಸ ಹಿನ್ನಲೆ ದೇವಾಲಯಗಳಿಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಕೋವಿಡ್ ಮೂರನೇ ಅಲೆಭೀತಿ ಕಾಡುತ್ತಿದೆ. ಹೀಗಾಗಿ ಜಿಲ್ಲೆಯ ದೇಗುಲ, ಪ್ರೇಕ್ಷಣೀಯ ಸ್ಥಳಗಳಿಗೆ ಶ್ರಾವಣ ಮಾಸದ ವಿಶೇಷ ದಿನ, ರಜಾ ದಿನಗಳಂದು ಪ್ರವೇಶ ನಿರ್ಬಂಧಿಸಲಾಗಿದೆ. ಶನಿವಾರ,ಭಾನುವಾರ, ಸೋಮವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಮುಜರಾಯಿ,ಖಾಸಗಿ ಸೇರಿ ಜಿಲ್ಲೆಯ ಎಲ್ಲಾ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕ್ರಮಕ್ಕೆ ಸೂಚನೆ
ದೇಶದವಿವಿಧ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ 3ನೇ ಅಲೆ ಅಬ್ಬರಿಸುತ್ತಿದೆ. ಎರಡನೇ ಅಲೆ ಕಡಿಮೆಯಾದ ಹಿನ್ನಲೆಯಲ್ಲಿ ಸರ್ಕಾರಜನರಿಗೆ ತೊಂದರೆ ಯಾಗಬಾರದು ಎಂದು ರಾಜ್ಯವನ್ನು ಅನ್‌ಲಾಕ್ ಮಾಡಿದೆ. ಜನ ಕೋವಿಡ್ ಮರೆತು ನಿಯಮ ಪಾಲಿಸದೇ ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ದಿನೇ ದಿನೆ ಕಡಿಮೆ ಯಾಗುತ್ತಿರುವ ಕೋವಿಡ್, ಮತ್ತೆ ತನ್ನ ಆರ್ಭಟತೋರದೇಬಿಡದು.ಈ ಬಗ್ಗೆ ಜಿಲ್ಲಾಡಳಿತ
ಕ್ರಮ ವಹಿಸಬೇಕಿದೆ. ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲೇಬೇಕಾಗಿದೆ. ಕೊರೊನಾ ನಿಯಮ ಪಾಲಿಸಲು ಅಗತ್ಯ ಕ್ರಮ ಮಹಿಸಲು ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆಕಡಿಮೆಯಾಗುತ್ತಿದೆ. ಪ್ರತಿ ದಿನವೂ ಪರೀಕ್ಷೆ ಮಾಡುತ್ತಿದ್ದೇವೆ. ಕೋವಿಡ್ ಪಾಸಿವಿಟಿ ದರ
ಶೇ.1. ಇದ್ದು ಜನ ನಿಯಮ ಪಾಲಿಸದಿದ್ದರೆ ಹೆಚ್ಚಾಗುವ ಸಾಧ್ಯತೆ ಇದೆ. ಜನ ಸಂದಣಿ ಸೇರಬಾರದು. ನಿತ್ಯ 7ಸಾವಿರ ಪರೀಕ್ಷೆ ಮಾಡಲಾಗುತ್ತಿದ್ದು ಜನ ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸಬೇಕು.
-ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಕೋವಿಡ್ ಹೆಚ್ಚಳವಾಗುವ ಭೀತಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ನಿಷೇಧ ಅದೇಶವನ್ನು ಉಲ್ಲಘಿಸಿ ನಿರ್ಬಂಧಿತ ದಿನಗಳಂದು ಪ್ರೇಕ್ಷಣೀಯ ಸ್ಥಳ,ಮಂದಿರಗಳಿಗೆ ತೆರಳಿದ್ದೇ ಆದಲ್ಲಿ ವಿಪತ್ತು ನಿರ್ವಹಣಾಕಾಯ್ದೆ ಅನ್ವಯಕ್ರಮ ಜರುಗಿಸಲಾಗವುದು
– ವೈ.ಎಸ್.ಪಾಟೀಲ್,ಜಿಲ್ಲಾಧಿಕಾರಿ
-ಚಿ.ನಿ.ಪುರುಷೋತ್ತಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.