Maternity: ಮಹಿಳಾ ಯೋಧರಿಗೂ ಇನ್ನು ಹೆರಿಗೆ ರಜೆ
Team Udayavani, Nov 6, 2023, 1:00 AM IST
ಹೊಸದಿಲ್ಲಿ: ದೇಶದ ಮೂರು ಸಶಸ್ತ್ರ ಸೇನೆಯಲ್ಲಿರುವ ಮಹಿಳಾ ಯೋಧರಿಗೆ ಇನ್ನು ಮುಂದೆ ಹೆರಿಗೆ ರಜೆ, ಶಿಶು ಆರೈಕೆ ರಜೆ ಮತ್ತು ಮಗು ದತ್ತು ರಜೆ ಸೌಲಭ್ಯ ಸಿಗಲಿದೆ. ಇದುವರೆಗೆ ಈ ಸೌಲಭ್ಯ ಕೇವಲ ಭೂ, ವಾಯು ಮತ್ತು ನೌಕಾ ಸೇನೆಯಲ್ಲಿನ ಹಿರಿಯ ಅಧಿಕಾರಿಗಳಿಗೆ ಮಾತ್ರ ಇತ್ತು. ಉಳಿದ ಮಹಿಳಾ ಯೋಧರಿಗೂ ನೀಡುವ ಪ್ರಸ್ತಾವನೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ.
ಈ ನಿಯಮಾವಳಿಗಳ ಬದಲಾವಣೆಯಿಂದಾಗಿ ಇನ್ನು ಮುಂದೆ ಸೇನೆಯಲ್ಲಿರುವ ಎಲ್ಲ ಮಹಿಳೆಯರೂ ಒಂದೇ ರೀತಿಯ ಸೌಲಭ್ಯ ಪಡೆಯಲಿದ್ದಾರೆ. ಅದು ಅಧಿಕಾರಿ ಶ್ರೇಣಿಯಿಂದ ಇತರ ಎಲ್ಲ ಶ್ರೇಣಿಗೆ ಸಮಾನ ಸೌಲಭ್ಯ ಸಿಗಲಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸದ್ಯ ಮಹಿಳಾ ಅಧಿಕಾರಿಗಳಿಗೆ 180 ದಿನ ವೇತನ ಸಹಿತ ರಜೆ ಸಿಗುತ್ತಿದೆ. ಇದು ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಶಿಶು ಆರೈಕೆಗಾಗಿ ಒಟ್ಟಾರೆ ಸೇವಾ ಅವಧಿಯಲ್ಲಿ 360 ದಿನಗಳ ಕಾಲ ರಜೆ ನೀಡಲಾಗುತ್ತದೆ. ಅಂದರೆ ಆ ಮಗುವಿಗೆ 18 ವರ್ಷ ತುಂಬುವ ಮುನ್ನ ಬಳಕೆ ಮಾಡಿಕೊಳ್ಳಬೇಕು. ಉಳಿದಂತೆ ಒಂದು ವರ್ಷದೊಳಗಿನ ಮಗುವೊಂದನ್ನು ದತ್ತು ಪಡೆದ ಪ್ರಕ್ರಿಯೆ ಮುಗಿದ ಅನಂತರ 180 ದಿನಗಳ ಕಾಲ ರಜೆ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.