![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 5, 2020, 3:08 PM IST
ಅಡಹಳ್ಳಿ: ಅಥಣಿ ತಾಲೂಕಿನ ಕೊಕಟನೂರ-ಕೊಡಗಾನೂರ ಗ್ರಾಮ ಹಾಗೂ ಯಲ್ಲಮ್ಮನವಾಡಿ-ಐಗಳಿ ಕ್ರಾಸ್ ರಸ್ತೆ ಡಾಂಬರಿಕರಣ ಹಾಗೂ ದುರಸ್ತಿಗಾಗಿ ಅಡಿಗಲ್ಲಾಗಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣವಾಗದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ವರ್ಷ 2019-20ರಲ್ಲಿ ಈ ಎರಡು ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಹು ದಿನಗಳ ಬೇಡಿಕೆಯಾಗಿದ್ದ ಈ ರಸ್ತೆಗಳ ನಿರ್ಮಾಣ ಸುದ್ದಿ ಕೇಳಿ ಈ ಭಾಗದ ರೈತರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಸಂತೋಷಗೊಂಡಿದ್ದರು, ಆದರೆ ವರ್ಷ ಕಳೆದರೂ ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಕಾರಣ ಈಗ ಕೆಸರುಗದ್ದೆಯಂತಾಗಿರುವ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರ ಗತಿ ಅಧೋಗತಿಯಾಗಿದೆ.
ಕೆ,ಆರ್,ಐ,ಡಿ,ಎಲ್ ಮೇಲೆ ಜನ ಗರಂ: ಯಲ್ಲಮ್ಮನವಾಡಿಯಿಂದ ಐಗಳಿ ಕ್ರಾಸ್‌ವರೆಗಿನ 2.3 ಕಿ.ಮೀ ರಸ್ತೆಗೆ 98.44 ಲಕ್ಷ ಮೊತ್ತದಲ್ಲಿ ಹಾಗೂ ಕೊಕಟನೂರದಿಂದ ಕೊಡಗಾನೂರ ಗ್ರಾಮದವರೆಗೆ 3.25 ಕಿ.ಮೀ ರಸ್ತೆಗೆ 1.26 ಕೋಟಿ ಮೊತ್ತದಲ್ಲಿ ಕರ್ನಾಟಕ ಗ್ರಾಮಾಭಿವೃದ್ಧಿ ನಿಗಮ (ಕೆ,ಆರ್,ಐ,ಡಿ,ಎಲ್-ಹಿಂದಿನ ಭೂಸೇನಾ ನಿಗಮ) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇಲ್ಲಿಯವರೆಗೆ ಮುರಂ ಹಾಕಿ ಕೈಬಿಡಲಾಗಿದ್ದು, ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಮಳೆ ಸುರಿದು ರಸ್ತೆಯೆಲ್ಲ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಇದನ್ನೂ ಓದಿ:ಉಪಚುನಾವಣೆ ಹೊಸ್ತಿಲಲ್ಲಿ ಸಿಬಿಐ ದಾಳಿ: ರಾಜಕೀಯ ಚದುರಂಗದಾಟದಲ್ಲಿ ಲಾಭ ಯಾರಿಗೆ?
ಈ ರಸ್ತೆ ಮೇಲೆ ಸಂಚರಿಸುವ ದ್ವಿಚಕ್ರವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇಲ್ಲಿಯ ಜನರ ಒತ್ತಾಯದ ಮೇರೆಗೆ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಆ ಎರಡು ಕಾಮಗಾರಿಗಳಿಗೆ ಮಂಜೂರಾತಿ ಈಗ ದೊರೆತಿದ್ದು, ಮಳೆಗಾಲ ಇರುವುದರಿಂದ ಡಾಂಬರೀಕರಣ ಮಾಡಿಲ್ಲ. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಪ್ರಾರಂಭಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
– ಎ.ಜಿ. ಷಣ್ಮುಗಪ್ಪ, ಸಹಾಯಕ ನಿರ್ದೇಶಕರು, ಕೆಆರ್‌ಐಡಿಎಲ್-ಅಥಣಿ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.