ನೋಕಿಯ 2110
Team Udayavani, Jul 6, 2020, 4:35 AM IST
ನೋಕಿಯ, ಫಿನ್ಲಂಡ್ ಮೂಲದ ಕಂಪನಿ. ಸ್ಮಾರ್ಟ್‌ಫೋನುಗಳು ಲಗ್ಗೆಯಿಡುವುದಕ್ಕೂ ಮೊದಲು ಎಲ್ಲರ ಜೇಬುಗಳಲ್ಲಿ ಇದ್ದಿದ್ದು ನೋಕಿಯ ಸಂಸ್ಥೆಯ ಮೊಬೈಲುಗಳೇ. “ನಿಮ್ಮ ಪ್ರಥಮ ಮೊಬೈಲು ಯಾವ ಕಂಪನಿಯಯಾಗಿತ್ತು?’ ಎಂದು ಯಾರನ್ನು ಕೇಳಿದರೂ, ಹೆಚ್ಚಿನವರ ಉತ್ತರ ನೋಕಿಯ ಎಂದೇ ಆಗಿರುತ್ತದೆ. ಅಷ್ಟು ಪ್ರಖ್ಯಾತವಾಗಿದ್ದ ಕಂಪನಿ, ಭಾರತದಲ್ಲಿ ಬಿಡುಗಡೆಗೊಳಿಸಿದ ಪ್ರಪ್ರಥಮ ಮೊಬೈಲು ನೋಕಿಯ 2110.
ಜನಪ್ರಿಯ ನೋಕಿಯಾ ಟ್ಯೂನನ್ನು ಹೊತ್ತ ಪ್ರಥಮ ಮೊಬೈಲ್ ಫೋನು ಕೂಡಾ ಇದೇ. ಆಗ 10 ಡಯಲ್ಡ್ ಕಾಲ್, 10 ಮಿಸ್ಡ್ ಕಾಲ್ ಸೇವ್ ಮಾಡಿಟ್ಟುಕೊಳ್ಳುವ ಸಾಮರ್ಥ್ಯವನ್ನು ಮೊಬೈಲು ಹೊಂದಿತ್ತು. ಇದರ ಚಿಕ್ಕ ಗಾತ್ರ ಮತ್ತು ದೊಡ್ಡ ಪರದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೊಬೈಲು ಕ್ರಾಂತಿಕಾರಕ ಬದಲಾವಣೆಗೆ ಪ್ರೇರಣೆಯಾಗಿದ್ದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.
ಅದೇನೆಂದರೆ, ಈ ಮೊಬೈಲಿನಲ್ಲಿ ಎರಡು ಅಪ್ ಮತ್ತು ಡೌನ್ ಬಟನ್‌ಗಳನ್ನು ನೀಡಲಾಗಿತ್ತು. ಇದೇ ಮುಂದೆ ನ್ಯಾವ್ ಬಟನ್‌ಗಳಿಗೆ ಪ್ರೇೆರಣೆಯಾಯಿತು. ‘ನ್ಯಾವ್’ ಎಂದರೆ ಅಪ್, ನ್, ಎಡ ಮತ್ತು ಬಲ ಬಟನ್‌ಗಳು. ಪ್ರಖ್ಯಾತವಾಗಿದ್ದ ನೋಕಿಯ ಕಂಪನಿ, ದೀರ್ಘ ಬಾಳಿಕೆಯ, ಹೆಚ್ಚು ಬ್ಯಾಟರಿ ಚಾರ್ಜ್ ಹೊಂದಿದ್ದ ಮೊಬೈಲು ಇಂದು ಸ್ಮಾರ್ಟ್ ಫೋನ್ ಭರಾಟೆಯ ನಡುವೆ ಹಿನ್ನೆಲೆಗೆ ಸರಿದದ್ದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.