ಕೋವಿಡ್ -19 ಎಫೆಕ್ಟ್: ನಾರ್ವೇಜಿಯನ್ ಅಂಗಸಂಸ್ಥೆ ಸಂಕಷ್ಟಕ್ಕೆ
Team Udayavani, Apr 21, 2020, 3:15 PM IST
ಮಣಿಪಾಲ: ಕೋವಿಡ್-19 ಜಗತ್ತಿನಾದ್ಯಂತ ನಷ್ಟದ ಮೇಲೆ ನಷ್ಟಗಳನ್ನು ತಂದು ಸುರಿಯುತ್ತಿದೆ. ಪ್ರತಿ ಕ್ಷೇತ್ರಗಳೂ ಇಂದು ಕೋವಿಡ್ ವೈರಸ್‌ನ ಭೀಕರ ನರ್ತನಕ್ಕೆ ತತ್ತರಿಸಿವೆ.
ಇದಕ್ಕೆ ವಿಮಾನಯಾನ ಕ್ಷೇತ್ರಗಳೂ ಹೊರತಾಗಿಲ್ಲ. ದೇಶಿಯ ಮತ್ತು ಅಂತಾರಾಷ್ಟ್ರೀಯ ವಾಯು ಮಾರ್ಗ ಬಂದ್ ಆದ ಕಾರಣ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತಿವೆ. ಕಡಿಮೆ ವೆಚ್ಚದ ವಿಮಾನ ಸೇವೆ ಎಂದು ಹೆಸರಾದ ನಾರ್ವೇಜಿಯನ್ ಸಂಸ್ಥೆಯು ತನ್ನ ಡೆನ್ಮಾರ್ಕ್ ಮತ್ತು ಸ್ವೀಡನ್‌ನಲ್ಲಿನ ಅಂಗ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ ಸರಿಸುಮಾರು ಮುಕ್ಕಾಲು ಭಾಗದಷ್ಟು (ಶೇ. 75ರಷ್ಟು) ಪೈಲಟ್‌ಗಳು, ಸಿಬಂದಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.
ನಷ್ಟವನ್ನು ತುಂಬುದು ಅಸಾಧ್ಯ
ಕೊರೊನಾ ವೈರಸ್ ವಿಮಾನಯಾನ ಉದ್ಯಮದ ಮೇಲೆ ಬೀರಿದ ನಷ್ಟವನ್ನು ತುಂಬುದು ಅಸಾಧ್ಯ. ಆದರೆ ಅನಿವಾರ್ಯವಾಗಿ ನಾವು ಈ ನಿರ್ಧಾರವನ್ನು ಪಾಲಿಸಬೇಕಾಯಿತು. ಈ ನಿರ್ಧಾರವನ್ನು ತಪ್ಪಿಸಲು ನಾವು ಎಲ್ಲವನ್ನು ಮಾಡಿದ್ದೇವೆ ಮತ್ತು ಸ್ವೀಡನ್ ಮತ್ತು ಡೆನ್ಮಾರ್ಕ್ ಸರಕಾರದ ಬೆಂಬಲವನ್ನು ಕೇಳಿದ್ದೇವೆ ಎಂದು ನಾರ್ವೇಜಿಯನ್ ಸಂಸ್ಥೆ ತಿಳಿಸಿದೆ.
ನಾರ್ವೆ ಸರಕಾರವು ಸ್ಥಳೀಯ ಸಹಕಾರ ನೀಡುತ್ತಿದ್ದು, ಇದೇ ಸಹಕಾರ ಸ್ವೀಡಿಷ್ ಮತ್ತು ಡೆನ್ಮಾರ್ಕ್ ಸರಕಾರಗಳು ನೀಡದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ.
ಈ ಬಿಕ್ಕಟ್ಟಿನಿಂದ ಹೊರಬರಲು ಮತ್ತು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಸಹೋದ್ಯೋಗಿಗಳನ್ನು ಮತ್ತೆ ನಾವು ಆಗಸದಲ್ಲಿ ಹಾರಾಡುವುದನ್ನು ನೋಡಲು ದಿನಪೂರ್ತಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ ಉಳಿದ ಸಿಬಂದಿ. ಈ ಕ್ರಮದಿಂದ 1,571 ಪೈಲಟ್‌ಗಳು ಮತ್ತು 3,134 ಕ್ಯಾಬಿನ್ ಸಿಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.