China: ನ್ಯುಮೋನಿಯಾ ಕ್ಷಿಪ್ರವಾಗಿ ಹಬ್ಬುತ್ತಿರುವ ಹಿನ್ನೆಲೆ- ಸನ್ನದ್ಧತೆಗೆ ಸೂಚನೆ
- ಮುನ್ನೆಚ್ಚರಿಕೆ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ನಿರ್ದೇಶನ
Team Udayavani, Nov 26, 2023, 10:09 PM IST
ಹೊಸದಿಲ್ಲಿ: ಚೀನದಲ್ಲಿ ನಿಗೂಢ ನ್ಯುಮೋನಿಯಾ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ತತ್‌ಕ್ಷಣವೇ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ನ್ಯುಮೋನಿಯಾದಂಥ ಪ್ರಕರಣಗಳು ದೇಶದಲ್ಲಿ ವ್ಯಾಪಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲ ಮೂಲಸೌಕರ್ಯಗಳನ್ನು ಆಸ್ಪತ್ರೆಗಳು ಹೊಂದಿವೆಯೇ ಎಂಬ ಬಗ್ಗೆ ಪರಿಶೀಲಿಸಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಬರೆದ ಪತ್ರದಲ್ಲಿ ಸೂಚಿಸಲಾಗಿದೆ.
ಏನೇನು ಪರಿಶೀಲನೆ?
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಇನ್‌ಫ್ಲುಯೆಂಜಾಗೆ ನೀಡಲಾಗುವ ಔಷಧಗಳು ಮತ್ತು ಲಸಿಕೆಗಳು, ವೈದ್ಯಕೀಯ ಆಮ್ಲಜನಕ, ಆ್ಯಂಟಿಬಯಾಟಿಕ್‌ಗಳು, ಪಿಪಿಇ (ವೈಯಕ್ತಿಕ ಸುರಕ್ಷ ಸಾಧನ)ಗಳು, ಪರೀಕ್ಷಾ ಕಿಟ್‌ಗಳ ಲಭ್ಯತೆ ಬಗ್ಗೆ ಪರಿಶೀಲಿಸಬೇಕು. ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಕೂಡ ತಮ್ಮ ಆಮ್ಲಜನಕದ ಸ್ಥಾವರಗಳು ಹಾಗೂ ವೆಂಟಿಲೇಟರ್‌ಗಳ ಸಮರ್ಪಕ ಕಾರ್ಯನಿರ್ವಹಣೆಯನ್ನು ದೃಢಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ.
ಮಾದರಿ ರವಾನೆಗೆ ಸೂಚನೆ
ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಗಂಭೀರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಇರುವಂಥ ರೋಗಿಗಳು ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೂಗಿನ ಮತ್ತು ಗಂಟಲಿನ ದ್ರವ ಮಾದರಿಗಳನ್ನು ಕಳುಹಿಸಿಕೊಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಈ ಮಾದರಿಗಳನ್ನು ವಿಆರ್‌ಡಿಎಲ್ (ವೈರಸ್ ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲಯ)ಗಳಿಗೆ ಕಳುಹಿಸಿ, ಶ್ವಾಸಕೋಶ ಸಂಬಂಧಿ ರೋಗಕಾರಕಗಳಿವೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ಸಂಭಾವ್ಯ ಅಪಾಯವನ್ನು ತಡೆಯುವ ಸಲುವಾಗಿ ತತ್‌ಕ್ಷಣದಿಂದಲೇ ಈ ಮುನ್ನೆಚ್ಚರಿಕೆ ಕ್ರಮವನ್ನು ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಅಗತ್ಯ ಮಾರ್ಗಸೂಚಿ
ಚೀನದಲ್ಲಿ ಶ್ವಾಸಕೋಶ ಸಂಬಂಧಿ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿದೆ. ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ನ. 27ರಂದು ಆರೋಗ್ಯ ಇಲಾಖೆ ತಾಂತ್ರಿಕ ಸಮಿತಿಯ ಜತೆಗೆ ಸಭೆ ನಡೆಸಿ, ಅಗತ್ಯವಿರುವ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ.
– ಡಾ| ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ
ಚೀನದಲ್ಲಿ ಸೋಂಕಿನ ಅಲೆ
“ಉಸಿರಾಟದ ಸಮಸ್ಯೆ’ ಎಂಬ ಹೊಸ ಸೋಂಕಿನ ಅಲೆ ಚೀನದಾದ್ಯಂತ ವ್ಯಾಪಿಸುತ್ತಿದೆ. ನ್ಯುಮೋನಿಯಾ ಸೋಂಕು ಶೈಕ್ಷಣಿಕ ಸಂಸ್ಥೆಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಹರಡುತ್ತಿದೆ. ಕೊರೊನಾ ಸೋಂಕಿನ ಕರಾಳತೆಯನ್ನು ಇದು ನೆನಪಿಸಿದ್ದು, ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸೋಂಕಿತ ಮಕ್ಕಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಪ್ರತೀ ದಿನ ಸರಾಸರಿ 1,200ರಷ್ಟು ರೋಗಿಗಳು ತುರ್ತು ನಿಗಾ ಘಟಕಗಳಿಗೆ ದಾಖಲಾಗುತ್ತಿದ್ದಾರೆ ಎಂದು ಬೀಜಿಂಗ್‌ನ ಪ್ರಮುಖ ಆಸ್ಪತ್ರೆಯೊಂದು ಮಾಹಿತಿ ನೀಡಿದೆ. ಅಲ್ಲದೆ ಚೀನದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಭಾರೀ ಪ್ರಮಾಣದಲ್ಲಿ ಕುಸಿದಿದೆ.
ಕೆಲವು ಕಡೆ ವಾರಗಟ್ಟಲೆ ಶಾಲೆಗಳನ್ನು ಮುಚ್ಚಿದ ನಿದರ್ಶನಗಳೂ ವರದಿಯಾಗುತ್ತಿವೆ. ಚಳಿಗಾಲವೂ ಆಗಿರುವ ಕಾರಣ ಸೋಂಕಿನ ವ್ಯಾಪಿಸುವಿಕೆ ವೇಗ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಂತೆ ಚೀನಕ್ಕೆ ಇತ್ತೀಚೆಗೆ ಸೂಚಿಸಿದೆ. ಕೊರೊನಾ ನಿರ್ಬಂಧಗಳು ತೆರವುಗೊಂಡ ಹಿನ್ನೆಲೆಯಲ್ಲಿ ಸಾಮಾನ್ಯ ಫ್ಲೂ ಕಾಣಿಸಿಕೊಳ್ಳುತ್ತಿದೆ ಅಷ್ಟೆ ಎಂದು ಚೀನದ ಕೆಲವು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ, ಈ ಸೋಂಕಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗದೇ ಇರುವುದು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿದೆ.
ಹೊಸ ವೈರಸ್ ಅಲ್ಲ: ಚೀನ
ನಮ್ಮಲ್ಲಿ ಹಬ್ಬುತ್ತಿರುವ ಶ್ವಾಸಕೋಶ ಸಂಬಂಧಿ ಸಮಸ್ಯೆಯು ಫ್ಲು ಹಾಗೂ ಹಾಲಿ ಇರುವ ರೋಗಕಾರಕಗಳಿಂದ ಉಂಟಾದ ಅಸ್ವಾಸ್ಥವೇ ವಿನಾ ಇದಕ್ಕೆ ಹೊಸ ವೈರಸ್ ಕಾರಣವಲ್ಲ ಎಂದು ಚೀನ ಸ್ಪಷ್ಟಪಡಿಸಿದೆ. ಬೀಜಿಂಗ್‌ನಲ್ಲಿ ವ್ಯಾಪಿಸುತ್ತಿರುವ ಉಸಿರಾಟ ಸಂಬಂಧಿ ಸಮಸ್ಯೆಯು ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದಿರುವಂತೆಯೇ ರವಿವಾರ ಚೀನದಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಇನ್‌ಫ್ಲುಯೆಂಜಾ ವೈರಸ್, ರೈನೋವೈರಸ್‌ಗಳು, ರೆಸ್ಪಿರೇಟರಿ ಸಿನ್ಸಿಶಿಯಲ್ ವೈರಸ್ (ಆರ್‌ಎಸ್‌ವಿ), ಅಡೆನೋವೈರಸ್‌ನಂತಹ ಸಾಮಾನ್ಯ ವೈರಸ್‌ಗಳಿಂದ ಹಾಗೂ ಮೈಕೋಪ್ಲಾಸ್ಮಾ ನ್ಯೂಮೋನಿಯೇದಂಥ ಬ್ಯಾಕ್ಟೀರಿಯಾಗಳಿಂದ ಉಸಿರಾಟದ ಸೋಂಕು ಹಬ್ಬುತ್ತಿದೆ. ಈ ಸೋಂಕಿಗೆ ಯಾವುದೇ ಹೊಸ ವೈರಸ್ ಕಾರಣವಲ್ಲ ಎಂದು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಆದರೆ ಸಾರ್ಸ್ ಮತ್ತು ಕೋವಿಡ್-19 ಕೂಡ ಅಸಾಮಾನ್ಯ ನ್ಯುಮೋನಿಯಾದಿಂದಲೇ ಆರಂಭವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.