![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 1, 2023, 7:00 AM IST
ಜಿಎಸ್‌ಟಿ:
100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ಹೊಂದಿರುವ ಎಲ್ಲ ಉದ್ಯಮಗಳೂ ನ.1ರಿಂದ ತಮ್ಮ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಚಲನ್ ಅನ್ನು ಇ-ಚಲನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. 30 ದಿನಗಳ ಒಳಗಾಗಿ ಈ ಪ್ರಕ್ರಿಯೆ ನಡೆಯಬೇಕು.
ಲ್ಯಾಪ್‌ಟಾಪ್ ಆಮದು
ಲ್ಯಾಪ್‌ಟಾಪ್‌ಗ್ಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಅ.30ರವರೆಗೆ ಸಡಿಲಿಸಿದೆ. ಈ ಗಡುವು ಮುಗಿಯುವ ಕಾರಣ ನ.1ರಿಂದ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ.
ವಹಿವಾಟು ಶುಲ್ಕ ಹೆಚ್ಚಳ:
ಬಿಎಸ್‌ಇ(ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ತನ್ನ ಈಕ್ವಿಟಿ ಡಿರೈವೇಟಿವ್ ವಿಭಾಗದ ಮೇಲಿನ ವಹಿವಾಟು ಶುಲ್ಕವನ್ನು ಹೆಚ್ಚಳ ಮಾಡಿದೆ. ಆರಂಭದಲ್ಲಿ ಎಸ್ ಆ್ಯಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ ಆಯ್ಕೆಯ ಮೇಲೆ ಇದು ಅನ್ವಯವಾಗಲಿದೆ. ಅದರಂತೆ, 3 ಕೋಟಿ ರೂ.ವರೆಗಿನ ವಹಿವಾಟಿಗೆ ಪ್ರತಿ ಕೋಟಿಗೆ 500 ರೂ. ಹಾಗೂ 3 ಕೋಟಿಯಿಂದ 100 ಕೋಟಿ ರೂ.ವರೆಗಿನ ವಹಿವಾಟಿಗೆ ಪ್ರತಿ ಕೋಟಿಗೆ 3,750 ರೂ. ಶುಲ್ಕ ವಿಧಿಸಲಾಗುತ್ತದೆ.
ಎಲ್‌ಪಿಜಿ ದರ:
ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಇಂದು ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು ಅಥವಾ ಯಥಾಸ್ಥಿತಿ ಮುಂದುವರಿಯಬಹುದು.
ಎಲ್‌ಐಸಿ ಪುನಶ್ಚೇತನ ಅಭಿಯಾನ:
ಅನಿವಾರ್ಯ ಕಾರಣಗಳಿಂದಾಗಿ ಪ್ರೀಮಿಯಂ ಪಾವತಿಸದೇ ಎಲ್‌ಐಸಿ ಲ್ಯಾಪ್ಸ್ ಆಗಿದ್ದರೆ, ಅಂಥವರಿಗೆ ತಮ್ಮ ಜೀವವಿಮೆಯನ್ನು ಪುನಶ್ಚೇತನ ಮಾಡಿಕೊಳ್ಳಲು ಭಾರತೀಯ ಜೀವವಿಮಾ ನಿಗಮ ನೀಡಿದ್ದ ಕಾಲಾವಕಾಶ ಮಂಗಳವಾರಕ್ಕೆ ಮುಗಿದಿದೆ. 2 ತಿಂಗಳ ಕಾಲ ನಡೆದ “ಎಲ್‌ಐಸಿ ಪುನಶ್ಚೇತನ ಅಭಿಯಾನ’ ಅ.31ಕ್ಕೆ ಕೊನೆಯಾದ ಕಾರಣ, ನ.1ರಿಂದ ಪುನಶ್ಚೇತನಕ್ಕೆ ಅವಕಾಶ ಇರುವುದಿಲ್ಲ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.