ಮತದಾರನಿಗೆ ಈಗ ನಿಜವಾದ ಅಗ್ನಿ ಪರೀಕ್ಷೆ

Team Udayavani, Sep 22, 2019, 3:07 AM IST

matadaranige

ಬೆಂಗಳೂರು: ಅಂತೂ ರಾಜ್ಯದಲ್ಲಿ ಉಪ ಚುನಾವಣೆ ಬಂದಿದೆ. 15 ಅನರ್ಹ ಶಾಸಕರ ಮಟ್ಟಿಗೆ, ಕೇಂದ್ರ ಚುನಾವಣಾ ಆಯೋಗದ ತೀರ್ಮಾನ ರಾಜಕೀಯ ಭವಿಷ್ಯದ ಬಗ್ಗೆ ಅನರ್ಹರನ್ನು ಗಂಭೀರವಾಗಿ ಚಿಂತಿಸು ವಂತೆ ಮಾಡಿದೆ. ಆದರೆ, ಚಿಂತಿಸಬೇಕಾದವರು ತ್ರಿಪಕ್ಷಗಳ ನೇತಾರರು! ಅನರ್ಹ ಶಾಸಕರು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮುರಿಯಲು ಕಾರಣರಾದರು. ಇನ್ನು ಬಿಜೆಪಿ ಸರ್ಕಾರ ರಚನೆಯಾಗಲೂ ಬೆಂಬಲ ನೀಡಿದರು.

ರಾಜ್ಯದಲ್ಲಿ ಸಂಖ್ಯಾಬಲದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಬಹುಮತ ಇತ್ತು. ಅನರ್ಹರ ರಾಜೀನಾಮೆ ಕಾರಣ ದಿಂದ ತಾಂತ್ರಿಕವಾಗಿ ಬಹುಮತ ಪಡೆದಿರುವ, ಆದರೆ ವಿಧಾನಸಭೆ ಒಟ್ಟಾರೆ ಶಾಸಕರ ಸಂಖ್ಯೆ ಪರಿಗಣಿಸಿದರೆ ಅಲ್ಪಮತೀಯ ಬಿಜೆಪಿ ಸರ್ಕಾರಕ್ಕೆ ಚುನಾವಣಾ ಆಯೋಗ ಒಂದರ್ಥದಲ್ಲಿ ಅಗ್ನಿ ಪರೀಕ್ಷೆ ಒಡ್ಡಿದೆ. ಅಂದರೆ, 15 ಅನರ್ಹರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಕನಿಷ್ಠ 7 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕಾದ ಒತ್ತಡ ಬಿಜೆಪಿಗಿದೆ.

ಕೇವಲ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಮ್ಯಾಜಿಕ್‌ ಸಂಖ್ಯೆ ಪಡೆಯುವುದು ಮಾತ್ರವಲ್ಲ. ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ “ಅತೃಪ್ತ’ರನ್ನು ಸಮಾಧಾನಪಡಿಸುವುದು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸವಾಲಾಗಿ ಪರಿಣಮಿಸಿದೆ. ಅದಕ್ಕೆ ಇಂಬೆನ್ನುವಂತೆ ಅನರ್ಹರು ಇತ್ತೀಚೆಗೆ ತಮ್ಮ ರಾಜಕೀಯದ ಅತಂತ್ರತೆ ಬಗ್ಗೆ ಬಿಜೆಪಿಯತ್ತ ಬೊಟ್ಟು ಮಾಡುತ್ತಿರುವುದೇ ಆಗಿದೆ.

ಒಳಗೊಳಗೇ ಬೇಗುದಿ ಅನುಭವಿಸುತ್ತಿರುವ ಬಗ್ಗೆ ಒಂದೊಂದೇ ಮಾತುಗಳು ಕೇಳಿಬರುತ್ತಿದ್ದು ರಾಜ್ಯದ ಮಟ್ಟಿಗೆ ರಾಜಕೀಯ ನೆಮ್ಮದಿಯನ್ನಂತೂ ತರಲು ಸಾಧ್ಯವಿಲ್ಲ. ಅನರ್ಹರು ಈಗ ಮತ್ತೆ ಸಿಡಿದರೆ ಯಡಿಯೂರಪ್ಪ ಸರ್ಕಾರಕ್ಕೆ ನಿಧಾನಗತಿಯಲ್ಲಾದರೂ ಮುಳುವಾಗಬಹುದು. ಸದ್ಯಕ್ಕೆ 7 ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿ, ಮುಂದೆ ಮತ್ತೆ ವಿರೋಧ ಪಕ್ಷಗಳಲ್ಲಿರುವ ಅತೃಪ್ತರ’ತ್ತ ಗಾಳ ಹಾಕಿ ಸರ್ಕಾರ ಉಳಿಸಿಕೊಳ್ಳಬಹುದು.

ಆದರೆ, ಸರ್ಕಾರ ಪತನಕ್ಕೆ ರೂವಾರಿಗಳಾದ ಅತೃಪ್ತರ ಪರಿಸ್ಥಿತಿ ಗಮನಿಸಿದರೆ ಹೊಸ ಅತೃಪ್ತರು ಅವರ ದಾರಿಯನ್ನುಹಿಡಿಯುವುದು ಬಹುತೇಕ ಕಷ್ಟ. ಜತೆಗೆ ಅನರ್ಹರ ಮುಂದಿನ ರಾಜಕೀಯ ನಡೆಯೂ ಹೊಸ ರಾಜಕೀಯ ಅವಕಾಶಗಳತ್ತ , ಬಿಜೆಪಿಯ ಸಂತುಷ್ಟಿ/ ಸಂಕಷ್ಟಗಳತ್ತ ಬೆಳಕು ಚೆಲ್ಲುವ ಸಾಧ್ಯತೆಯೂ ಇದೆ. ಹಾಗಾಗಿ ರಾಜ್ಯ ಬಿಜೆಪಿ ಪಾಲಿಗೆ ಹೊಸ ಸವಾಲುಗಳತ್ತ ತೆರೆದುಕೊಳ್ಳುವ ಅಗತ್ಯಗಳು ಕಾಣಬಹುದು.

ಅನರ್ಹರನ್ನು ಸಂಪ್ರೀತಿಗೊಳಿಸಲು, ಅವರ ಸಂಬಂಧಿಗಳಿಗೆ/ ಸ್ನೇಹಿತರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಅವಕಾಶಗಳಿರಬಹುದು. ಅಥವಾ ಮದ್ರಾಸ್‌ ಹೈಕೋರ್ಟ್‌ ತೀರ್ಪಿನಂತೆ ಅನರ್ಹತೆಗೆ ತಡೆ ನೀಡಿ ಚುನಾವಣೆಗೆ ಸ್ವತಹ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಅಷ್ಟೇನು ಸುಲಭದ ಮಾತಲ್ಲ. ಹಾಗಂತ ಅದು ಸಾಧುವೂ ಅಲ್ಲ.

ಇತ್ತ ಅಧಿಕಾರ ಕಳೆದುಕೊಂಡು ಕೈಕೈ ಹೊಸೆಯುತ್ತಿರುವ ಕಾಂಗ್ರೆಸ್‌- ಜೆಡಿಎಸ್‌ ಮಿತ್ರರು ಮತ್ತು ಮೈತ್ರಿ ಪತನಕ್ಕೆ ಪರೋಕ್ಷವಾಗಿ ಕಾರಣರಾಗಿ ಒಳಗೊಳಗೇ ಸಂತಸ ಪಡುತ್ತಿದ್ದ ಕಾಂಗ್ರೆಸ್‌ ಪಕ್ಷದ ಕೆಲ ಧುರೀಣರು ಈಗ ಯಾವ ರಾಜಕೀಯ ನಡೆಗೆ ಮುಖಮಾಡುತ್ತಾರೆ ಎಂಬುದು ಚರ್ಚಿಸಬೇಕಾದ ವಿಷಯ. ಅನರ್ಹರ ಕ್ಷೇತ್ರಗಳಲ್ಲಿ ಅನರ್ಹರು ಅಥವಾ ಅವರ ಕಡೆಯವರ ಸೋಲಿಗೆ ಖಂಡಿತಾ ಜೆಡಿಎಸ್‌ ವರಿಷ್ಠರು ಟೊಂಕ ಕಟ್ಟಿ ನಿಲ್ಲಲಿದ್ದಾರೆ.

ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ? ಎಲ್ಲಕ್ಕಿಂತಲೂ ಪ್ರಮುಖವಾಗಿ ಮೈತ್ರಿ ಪತನಕ್ಕೆ ಕಾರಣರೆಂಬ ಆರೋಪ ಹೊತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಈಗ ಪ್ರಮುಖವಾಗಿ ಮತದಾರನ ಚರ್ಚೆಗೆ ಬರಲಿದೆ. ಒಳಗೊಳಗಿಂದಲೇ ಅನರ್ಹರತ್ತ ಸಹಕರಿಸುತ್ತಾರೆಯೇ ಅಥವಾ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತಾರೆಯೇ ಎನ್ನುವುದು ಇಲ್ಲಿ ಮುಖ್ಯ ಅಂಶ.

ಹಾಗಾಗಿ ಸಿದ್ದರಾಮಯ್ಯ ಅವರ ಮಟ್ಟಿಗೆ ಹೇಳುವುದಾದರೆ, ಅವರ ರಾಜಕೀಯ ಭವಿಷ್ಯವೂ ಇಲ್ಲಿ ಪರೀಕ್ಷೆಗೆ ಒಳಪಡಲಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲಲು ತಮ್ಮ ಅಭ್ಯರ್ಥಿಗಳ ಪರವಾಗಿ ನಿಜವಾಗಿ ಕೆಲಸಮಾಡಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಯಾಕೆಂದರೆ ಅನರ್ಹರಲ್ಲಿ ಅನೇಕರು ಅವರ ಸಮೀಪವರ್ತಿಗಳಾಗಿದ್ದವರೇ. ಹೆಚ್ಚಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಪ್ರಬಲರಾಗಿ ಇರಲು ಕಾರಣರಾದವರು ಆ ಅನರ್ಹರೇ.

ಆದರೆ, ಇಲ್ಲಿ ಪ್ರಮುಖ ಅಂಶವಾದರೆ ಮತದಾರನ ತೀರ್ಮಾನ. ಮತದಾರನ ಕಾರಣಕ್ಕಾಗಿಯೇ ರಾಜ್ಯ ರಾಜಕೀಯದಲ್ಲಿ ಅತಂತ್ರ ರಾಜಕೀಯ ಕಾಣಿಸಿಕೊಂಡಿರುವುದು. ಹಾಗಾಗಿಯೇ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಘಟಿಸುತ್ತಿರುವುದು. ಇಲ್ಲಿ ನಿಜವಾದ ಅಗ್ನಿ ಪರೀಕ್ಷೆ ಮತದಾರನ ಮೇಲೆ ಆಗಲಿದೆ. ಆತ ನೀಡುವ ತೀರ್ಮಾನ, ಮತ್ತಷ್ಟು ಅತಂತ್ರ ರಾಜಕೀಯಕ್ಕೆ ಕಾರಣವಾಗುತ್ತದೋ ಅಥವಾ ರಾಜಕೀಯ ಪಕ್ಷಗಳಿಗೆ ಹೊಸ ಪಾಠವನ್ನು ಕಲಿಸುತ್ತದೋ ಎಂಬುದನ್ನು ಈ ಉಪ ಚುನಾವಣೆ ದಾಖಲಿಸಲಿದೆ.

* ನವೀನ್‌ ಅಮ್ಮೆಂಬಳ

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.