ಆರ್ಯಾಪು: ತೋಡಿನ ಹೂಳೆತ್ತಿದ ಮಹಿಳೆಯರು
ನರೇಗಾ ಯೋಜನೆ ಸದ್ವಿನಿಯೋಗ
Team Udayavani, Jul 4, 2020, 5:16 AM IST
ಪುತ್ತೂರು: ನರೇಗಾ ಯೋಜನೆ ಮೂಲಕ ಮಹಿಳಾ ತಂಡದ ಸದಸ್ಯರು ಸೇರಿ ಮಳೆ ನೀರು ಹರಿದು ಹೋಗುವ ತೋಡಿನ ಹೂಳೆತ್ತುವ ಮೂಲಕ ಗಮನ ಸೆಳೆದಿದ್ದಾರೆ. ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಕಾರ್ಪಾಡಿ ಸರೋವರ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರ ಈ ಹೊಸ ಪ್ರಯತ್ನ ಯಶಸ್ವಿಯಾಗಿದೆ.
ಮಹಿಳಾ ತಂಡ
ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಕಾರ್ಪಾಡಿ ಸರೋವರ- ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ಸಣ್ಣ ತೋಡಿನಲ್ಲಿ ತುಂಬಿದ್ದ ಹೂಳು, ಹುಲ್ಲು ಹಾಗೂ ಪೊದೆಗಳನ್ನು ತೆಗೆದು ಮಳೆ ನೀರು ಹರಿಯಲು ವ್ಯವಸ್ಥೆ ಮಾಡಿದ್ದಾರೆ. ಒಂದೇ ದಿನದಲ್ಲಿ ಸುಮಾರು 200 ಮೀ. ದೂರವನ್ನು ಸ್ವಚ್ಛಗೊಳಿಸಿದ್ದಾರೆ.
ಒಕ್ಕೂಟದ ಅಧ್ಯಕ್ಷೆ ಅಂಬಿಕಾ ರಮೇಶ್, ಎನ್‌ಆರ್‌ಎಲ್‌ಎಂನ ನಯನಾ, ಅವನಿ ಗುಂಪಿನ ಅಧ್ಯಕ್ಷೆ ಲಲಿತಾ, ಸದಸ್ಯರಾದ ಭಾರತಿ, ಶಾಲಿನಿ, ಜಯಂತಿ, ವೇದಾವತಿ, ಲೀಲಾವತಿ, ಚಂದ್ರಕಲಾ, ವನಿತಾ, ಗಿರಿಜಾ, ಸುಮಲತಾ, ಇಂದಿರಾ, ಯಮುನಾ ಹಾಗೂ ಗೀತಾ ಸಹಿತ ಒಟ್ಟು ಒಕ್ಕೂಟದ 14 ಮಂದಿ ಪಾಲ್ಗೊಂಡಿದ್ದರು.
ತಾಲೂಕಿನಲ್ಲೇ ಪ್ರಥಮ
ಉದ್ಯೋಗ ಖಾತರಿ ಯೋಜನೆ ಮೂಲಕ ಮಹಿಳೆಯರು ಉದ್ಯೋಗ ಚೀಟಿ ಮಾಡಿಸಿಕೊಂಡು ಅದರ ಮೂಲಕ ಸಾರ್ವಜನಿಕ ಕೆಲಸದಲ್ಲಿ ತೊಡಗಿ ರುವುದು ಇದೇ ಪ್ರಥಮ. ಉದ್ಯೋಗ ಚೀಟಿ ಹೊಂದಿರುವವರು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಲು ಅರ್ಹರಾಗಿದ್ದು, ಖಾತೆಗೆ ಹಣ ಜಮೆಯಾಗುತ್ತದೆ. ದಿನವೊಂದಕ್ಕೆ ಕನಿಷ್ಠ ರೂ. 275ರಂತೆ ವೇತನ ಪಾವತಿಸಲಾಗುತ್ತಿದೆ.
ಗಿಡ ನೆಡುವ ಗುರಿ
ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಇಂಗು ಗುಂಡಿ, ಗೇರು ಸಸಿ ನೆಡುವುದು ಸಹಿತ ಹಲವು ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲಿದ್ದೇವೆ.
-ಅಂಬಿಕಾ ರಮೇಶ್, ಒಕ್ಕೂಟದ ಅಧ್ಯಕ್ಷೆ
ಉತ್ತಮ ಕಾರ್ಯ
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮೂಲಕ ತಾಲೂಕಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರೇ ಹೂಳೆತ್ತಿರುವ ಮಾದರಿ ಕಾರ್ಯ ನಡೆದಿದೆ. ಪ್ರತಿಯೊಬ್ಬರಿಗೆ ರೂ. 275ರಂತೆ ಕೂಲಿ ನೀಡಲಾಗುತ್ತದೆ. ಅವರ ಕೆಲಸ ಪ್ರಮಾಣವನ್ನು ಅವಲಂಬಿಸಿ ಹಣವನ್ನು ಅವರವರ ಖಾತೆ ಜಮೆ ಮಾಡಲಾಗುತ್ತಿದೆ. ಇಂಗು ಗುಂಡಿಗೂ ಅವಕಾಶವಿದ್ದು, ಒಂದು ಗುಂಡಿಗೆ ರೂ. 300ರಂತೆ ನೀಡಲಾಗುತ್ತಿದೆ.
-ನವೀನ್ ಭಂಡಾರಿ
ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.