ಎನ್‌ಟಿಪಿಸಿ ಸಹಯೋಗ; ಕಸದಿಂದ ರಸ :ತ್ಯಾಜ್ಯದಿಂದ ಟೊರಿಫೈಡ್ ಚಾರ್‌ಕೋಲ್ ತಯಾರಿಕಾ ಘಟಕ
Team Udayavani, Sep 30, 2020, 1:19 PM IST
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ಎನ್‌ವಿವಿಎನ್ (ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್) ಜೊತೆಗೂಡಿ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಸುಮಾರು 200 ಟನ್ ಒಣ ತ್ಯಾಜ್ಯದಿಂದ ಇಂಧನ ತಯಾರಿಸುವ ಕುರಿತಂತೆ ಒಡಂಬಡಿಕೆಗೆ ಸಜ್ಜಾಗುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯದಿಂದ ಟೊರಿಫೈಡ್ ಚಾರ್ ಕೋಲ್(ಇಂಧನ) ತಯಾರಿಕಾ ಘಟಕ ಸ್ಥಾಪನೆ ಸಂಬಂಧ ಮಂಗಳವಾರ ದೆಹಲಿ ಶಾಸ್ತ್ರಿ ಭವನದ ಕಲ್ಲಿದ್ದಲು ಮಂತ್ರಾಲಯ ಕಾರ್ಯಾಲಯದಿಂದ ವೆಬಿನಾರ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಎನ್‌ಟಿಪಿಸಿ ಜೊತೆ ಒಪ್ಪಂದ ಹಸ್ತಾಂತರ ಮಾಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸತತ ಪ್ರಯತ್ನದಿಂದ ಈ ಯೋಜನೆ ಹು-ಧಾ ಮಹಾನಗರ ಪಾಲಿಕೆಗೆ ಲಭ್ಯವಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ನಿತ್ಯ 400 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ 280 ಟನ್ ಹಾಗೂ ಧಾರವಾಡದಲ್ಲಿ 120 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪಾಲಿಕೆಯು 191 ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದೆ. ಸುಮಾರು 72 ಟ್ರ್ಯಾಕ್ಟರ್‌ಗಳಿಂದ ಮಾರುಕಟ್ಟೆ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಚಂದಮಾಮ’ದ ಜನಪ್ರಿಯ ‘ವಿಕ್ರಮ-ಬೇತಾಳ’ದ ಚಿತ್ರ ಕಲಾವಿದ ಕೆ.ಸಿ. ಶಿವಶಂಕರ್ ನಿಧನ
ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆಯಡಿ 5 ಕಾಂಪ್ಯಾಕ್ಟರ್ ಸ್ಟೇಷನ್‌ಗಳನ್ನು ನಗರದ ವಿವಿಧೆಡೆ ನಿರ್ಮಿಸಿ ಕಾರ್ಯ ಗತಗೊಳಿಸಲಾಗಿದೆ. ಹುಬ್ಬಳ್ಳಿಯಲ್ಲಿ 300 ಟಿಪಿಡಿ ಸಾಮರ್ಥ್ಯದ ಕಾಂಪೋಸ್ಟ್ ಘಟಕ ಹಾಗೂ ಧಾರವಾಡದಲ್ಲಿ 150 ಟಿಪಿಡಿ ಸಾಮರ್ಥಯದ ಕಾಂಪೋಸ್ಟ್ ಘಟಕ ಸ್ಥಾಪಿಸಲಾಗಿದೆ. 5 ಒಣ ತ್ಯಾಜ್ಯ ಸಂಗ್ರಹಣೆ ಹಾಗೂ ಪುನರ್ ಬಳಕೆ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ.
ಪಾಲಿಕೆ ಒಡೆತನದ ಶಿವಳ್ಳಿ ತ್ಯಾಜ್ಯ ನಿವೇಶನದಲ್ಲಿ 50 ಟಿಪಿಡಿ ಸಾಮರ್ಥ್ಯದ ಕಟ್ಟಡ ನಿರ್ಮಾಣ ಮತ್ತು ಕೆಡಗುವಿಕೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ:ಬಾಬ್ರಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ
ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಘನೀಕರಿಸಿ ಟೊರಿಫೈಡ್ ಚಾರ್ಕೊಲ್ ಅನ್ನಾಗಿ ಮಾಡಲಾಗುತ್ತದೆ. ಇದರಿಂದ ಪಳೆಯುವಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಪರ್ಯಾಯ ಇಂಧನವಾಗಿ ರೂಪುಗೊಳ್ಳಲಿದೆ. ಅಲ್ಲದೆ, ನಗರದ ಒಣ ತ್ಯಾಜ್ಯವು ವೈಜ್ಞಾನಿಕವಾಗಿ ಪರಿಸರಕ್ಕೆ ಮಾರಕವಾಗದಂತೆ ವಿಲೇವಾರಿಯಾಗಲು ಅನುಕೂಲ ವಾಗಲಿದೆ. ಪಾಲಿಕೆಯು ಶೂನ್ಯ ನೆಲಭರ್ತಿ ನಗರವಾಗುವತ್ತ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.