![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Aug 24, 2024, 11:59 PM IST
ಮಂಗಳೂರು: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿ ಸುತ್ತಿದ್ದೇನೆ. 2ನೇ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿರುವ ಇತರ ರಾಜ್ಯಗಳಿಂದ ಮಾಹಿತಿ ತರಿಸಲು ಸಮಿತಿ ರಚಿಸಲಾಗಿದ್ದು, ಅಧಿಕೃತ ಸ್ಥಾನಮಾನಕ್ಕೆ ಶ್ರಮಿಸುವುದಾಗಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಜರಗಿದ ತುಳುನಾಡ “ಜಾನಪದ ಉಚ್ಚಯ 2024’ರ ಸಮಾರೋಪದಲ್ಲಿ ಹಿರಿಯ ನಟ ನಿರ್ಮಾಪಕ ತೋನ್ಸೆ ವಿಜಯ ಕುಮಾರ್ ಶೆಟ್ಟಿಗೆ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು. ಶಾಶ್ವತವಾಗಿ ತುಳು ಪರಂಪರೆ, ಜೀವನ ಪದ್ಧತಿಯನ್ನು ದೇಶ ವಿದೇಶದ ಜನ ಕಲಿಯಬೇಕೆನ್ನುವ ಉದ್ದೇಶದಿಂದ ತುಳು ಗ್ರಾಮ ಪರಿಕಲ್ಪನೆಯನ್ನು ಜಾರಿ ಗೊಳಿಸಲಾಗುವುದು ಎಂದರು.
ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ವಿಧಾನಸಭೆಯಲ್ಲಿ ತುಳು ಭಾಷೆಯ ಕಂಪು ಪಸರಿದೆ. ಲೋಕ ಸಭೆಯಲ್ಲೂ ಇದು ಮಾರ್ದನಿಸಬೇಕು. ರಾಜಕೀಯ ಮರೆತು ಒಂದಾಗಿ ಭಾಷೆಯ ಸ್ಥಾನಮಾನಕ್ಕೆ ಶ್ರಮಿಸಬೇಕು. ಜಾನಪದ ಭಾಷೆಗೆ ತಾಯಿ ಬೇರು ಇದ್ದಂತೆ, ಇಂತಹ ತುಳು ಬೆಳೆಸಲು ಒಂದಾಗೋಣ ಎಂದರು.
ಹಿರಿಯ ರಂಗಕರ್ಮಿ ತೋನ್ಸೆ ವಿಜಯ ಕುಮಾರ್ ಶೆಟ್ಟಿಗೆ “ಪೆರ್ಮೆದ ತುಳುವೆ 2024′ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂ ಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಡಾ| ಮೂಡಂಬೈಲು ರವಿ ಶೆಟ್ಟಿ ಕತಾರ್, ಶಶಿ ಕಿರಣ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಕೆ.ಡಿ. ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ಕಿಶನ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ, ಧರ್ಮಪಾಲ ಯು. ದೇವಾಡಿಗ ಮುಂಬಯಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.