Iceland: ಐಸ್ಲ್ಯಾಂಡ್ನಲ್ಲಿ 800 ಬಾರಿ ಕಂಪಿಸಿದ ಭೂಮಿ- ಸ್ಥಳಕ್ಕೆ ಅಧಿಕಾರಿಗಳ ದೌಡು
Team Udayavani, Nov 11, 2023, 11:16 PM IST
ರಖೀವಿಕ್: ಐರೋಪ್ಯ ರಾಷ್ಟ್ರ ಐಸ್ಲ್ಯಾಂಡ್ನ ನೈಋತ್ಯ ರೇಖೀನಿಸ್ ಪರ್ಯಾಯ ದ್ವೀಪದಲ್ಲಿ ಶುಕ್ರವಾರ 14 ಗಂಟೆಗಳಲ್ಲಿ 800 ಬಾರಿ ಭೂಕಂಪನವಾಗಿದೆ. ಜ್ವಾಲಾಮುಖೀ ಸ್ಫೋಟಿಸುವ ಆತಂಕದ ಹಿನ್ನೆಲೆಯಲ್ಲಿ ಐಸ್ಲ್ಯಾಂಡ್ ಸರಕಾರವು ತುರ್ತು ಪರಿಸ್ಥಿತಿ ಘೋಷಿಸಿದೆ.
“ಐಸ್ಲ್ಯಾಂಡ್ ರಾಜಧಾನಿ ರೇಖೀವಿಕ್ನಿಂದ 40 ಕಿ.ಮೀ. ದೂರದಲ್ಲಿ ರೇಖೀನಿಸ್ ಪರ್ಯಾಯ ದ್ವೀಪದ ಗ್ರಿಂಡಾವಿಕ್ ಗ್ರಾಮದ ಸಮೀಪದ ಸುಂಧುಕಗಿಗರ್ನಲ್ಲಿ ಭೂಕಂಪದ ಕೇಂದ್ರ ಬಿಂದು ಇದೆ. ಇಲ್ಲಿ ಎರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಜ್ವಾಲಾಮುಖೀ ಕೂಡ ಸ್ಫೋಟಿಸುವ ಸಾಧ್ಯತೆ ಇದೆ’ ಎಂದು ಐಸ್ಲ್ಯಾಂಡ್ ಹವಾಮಾನ ಇಲಾಖೆ ತಿಳಿಸಿದೆ.
“ಗ್ರಿಂಡಾವಿಕ್ ಗ್ರಾಮದ ಸಮೀಪ ಸಂಭವಿಸಿದ ಭೂಕಂಪವು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಆ ಗ್ರಾಮದಲ್ಲಿ ಸುಮಾರು 4,000 ಮಂದಿ ನೆಲೆಸಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಿಪತ್ತು ನಿರ್ವಹಣ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯ ಕೈಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ನಿಂದ ಇಲ್ಲಿಯವರೆಗೆ ರೇಖೀನಿಸ್ ಪರ್ಯಾಯ ದ್ವೀಪದಲ್ಲಿ 24,000 ಬಾರಿ ಭೂಕಂಪನ ಸಂಭವಿಸಿದೆ. 2021ರಿಂದ ಮೂರು ಬಾರಿ ರೇಖೀನಿಸ್ನಲ್ಲಿ ಲಾವಾರಸ ಸ್ಫೋಟಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.