ಕಡೂರಲ್ಲಿ 40 ವರ್ಷದವರಿಗೂ ವೃದ್ದಾಪ್ಯ ವೇತನ! ಯೋಜನೆಯಲ್ಲಿ ಗೋಲ್‌ಮಾಲ್?
ಉಳಿದ ಹೋಬಳಿಗಳಲ್ಲಿಯೂ ಇಂತಹ ಅನರ್ಹ ಪ್ರಕರಣಗಳು ಹೆಚ್ಚಿವೆ
Team Udayavani, Nov 7, 2024, 5:23 PM IST
ಉದಯವಾಣಿ ಸಮಾಚಾರ
ಕಡೂರು: ಕಡೂರು ಮತ್ತು ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಭೂ ಮಂಜೂರು ಪ್ರಕರಣ ಭಾರೀ ಸದ್ದು ಮಾಡಿದ್ದು
ತಹಶೀಲ್ದಾರರೊಬ್ಬರು ಜೈಲು ಪಾಲಾಗಿದ್ದ ಘಟನೆ ಮಾಸುವ ಮುನ್ನವೇ ಕಡೂರಲ್ಲಿ ವೃದ್ಧಾಪ್ಯ ವೇತನ ನೀಡುವಲ್ಲೂ ಭಾರೀ ಗೋಲ್‌ಮಾಲ್ ನಡೆದಿದ್ದು ಬೆಳಕಿಗೆ ಬಂದಿದೆ.
ಕಡೂರು ತಾಲೂಕಿನ ಹೋಬಳಿಯೊಂದರಲ್ಲಿ 40-50 ವರ್ಷದವರೂ ಪ್ರತಿ ತಿಂಗಳು ವೃದ್ಧಾಪ್ಯ ವೇತನ ಪಡೆಯುತ್ತಿರುವುದು ಈಗ ಬಹಿರಂಗಗೊಂಡಿದ್ದು ಅನರ್ಹರ ಪತ್ತೆಗೆ ಆಡಳಿತ ವರ್ಗ ಮುಂದಾಗಿದೆ. ಅನರ್ಹರು ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವಂತೆ ಇಡೀ ತಾಲೂಕಿನಲ್ಲಿ ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನ ಅನರ್ಹರ ಪಾಲಾಗುತ್ತಿರುವ ಶಂಕೆ ಮೂಡಿದ್ದು ಈ ಅಕ್ರಮದ ಹಿಂದಿರುವ ತಪ್ಪಿತಸ್ಥ ಅಧಿಕಾರಿಗಳ ತಲೆದಂಡಕ್ಕೆ ಆಡಳಿತ ವರ್ಗ ಸಜ್ಜಾಗಿದೆ.
ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತರೀಕೆರೆ ಉಪವಿಭಾಗಾಧಿಕಾರಿ ಕಡೂರು ತಹಶೀಲ್ದಾರ್ ಹಾಗೂ ಅ ಧಿಕಾರಿಗಳಿಗೆ ಸೂಚಿಸಿದ್ದು, ಸದ್ಯದಲ್ಲೇ ವರದಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ರಾಜ್ಯ ಸರ್ಕಾರ ಸಂಧ್ಯಾಕಾಲದಲ್ಲಿರುವರಿಗೆ ಆಧಾರವಾಗಲಿ ಎಂದು ವೃದ್ಧಾಪ್ಯ ವೇತನ ನೀಡುತ್ತಿದೆ.
60 ವರ್ಷ ಮೇಲ್ಪಟ್ಟವರಿಗೆ ಮಾಸಾಶನ ನೀಡಲಾಗುತ್ತಿದ್ದು, ಯೋಜನೆ ಪ್ರಯೋಜನ ಪಡೆಯಬೇಕಾದ ಫಲಾನುಭವಿಗಳು ಸಮರ್ಪಕ ದಾಖಲೆಗಳನ್ನು ನೀಡಿ ಸರ್ಕಾರದ ಹಣ ಪಡೆಯಬೇಕಿದೆ. ಆದರೆ, ಕಡೂರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 40 ರಿಂದ 50 ವರ್ಷ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಶಯ ಮೂಡಿದ್ದರಿಂದ ತರೀಕೆರೆ ಉಪವಿಭಾಗಾಧಿಕಾರಿ ಡಾ| ಕಾಂತರಾಜ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಕಡೂರು ತಹಶೀಲ್ದಾರ್ ಸಿ.ಎಸ್ .ಪೂರ್ಣಿಮಾ ಅವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಸದ್ಯ ತನಿಖೆ ಆರಂಭಿಸಲಾಗಿದೆ. ಕಡೂರು ತಹಶೀಲ್ದಾರ್ ಅವರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿರುವ 1,506 ಫಲಾನುಭವಿಗಳಲ್ಲಿ 605 ಫಲಾನುಭವಿಗಳು ವಿಚಾರಣೆಗೆ
ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವರಲ್ಲಿ ಕೇವಲ 44 ಜನ ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆ ವೇಳೆ 19 ಮಂದಿ ವೃದ್ಧಾಪ್ಯ ವೇತನ ಪಡೆಯಲು ಅನರ್ಹರು ಎಂಬುದು ಬೆಳಕಿಗೆ ಬಂದಿದೆ. 25 ಜನ ಅರ್ಹರಾಗಿದ್ದು ಉಳಿದ ಪ್ರಕರಣಗಳ ತನಿಖೆ ಬಾಕಿ ಇದೆ. ವಿಚಾರಣೆಗೆ ಹಾಜರಾಗದವರ ವೃದ್ಧಾಪ್ಯ ವೇತನ ಮಂಜೂರಾತಿ ತಡೆಹಿಡಿಯಲಾಗಿದ್ದು, ತನಿಖೆ ಮುಂದುವರೆಯಲಿದೆ. ಕಸಬಾ ಹೋಬಳಿಯಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಾಲೂಕಿನ ಎಂಟು ಹೋಬಳಿಗಳಲ್ಲಿನ ಇಂತಹ ಪ್ರಕರಣ ನಡೆದಿದೆಯೇ ಎಂದು ಪರಿಶೀಲನೆ ನಡೆಸಲು ಹೋಬಳಿಗಳ ಆರ್.ಐ. ಮತ್ತು ವಿ.ಎ.ಗಳಿಗೆ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರು ಸೂಚನೆ ನೀಡಿದ್ದು ಮುಂದಿನ ಎರಡು ವಾರದಲ್ಲಿ ಸಂಪೂರ್ಣ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲು ನಿರ್ಧರಿಸಲಾಗಿದೆ.
ತಾಲೂಕಿನ ಒಂದು ಹೋಬಳಿಯಲ್ಲಿ ವಿಚಾರಣೆಗೆ ಹಾಜರಾದ ಕೆಲವರಲ್ಲೇ ಇಷ್ಟೊಂದು ಅನರ್ಹ ಪ್ರಕರಣಗಳು ಬೆಳಕಿಗೆ ಬಂದ
ಹಿನ್ನೆಲೆಯಲ್ಲಿ ಉಳಿದ ಎಂಟು ಹೋಬಳಿಗಳಲ್ಲೂ ಪರಿಶೀಲಿಸಿ ಅನರ್ಹರ ಪತ್ತೆಗೆ ಮುಂದಾಗಲಾಗಿದೆ.
ಮುಂದಿನ ಎರಡು ವಾರಗಳಲ್ಲಿ ವರದಿ ಜಿಲ್ಲಾಡಳಿತದ ಕೈ ಸೇರಲಿದ್ದು, ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಖಚಿತವಾಗಿದೆ.
ಒಟ್ಟಾರೆ ನ್ಯಾಯಯುತವಾಗಿ ಸಂಧ್ಯಾಕಾಲದಲ್ಲಿರುವ ವೃದ್ಧರಿಗೆ ಸೇರಬೇಕಾದ ಮಾಸಾಶನ ಅನರ್ಹರ ಪಾಲಾಗುತ್ತಿದೆ. ಈ
ಸಂಬಂಧ ಜಿಲ್ಲಾಡಳಿತ ಬೇರೆ ತಾಲೂಕುಗಳಲ್ಲೂ ಪ್ರಕರಣ ನಡೆದಿದೆಯೇ ಎಂಬುದರ ತನಿಖೆಗೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಅನೇಕರ ತಲೆದಂಡ?
ತಾಲೂಕಿನ ಉಳಿದ ಹೋಬಳಿಗಳಲ್ಲಿಯೂ ಇಂತಹ ಅನರ್ಹ ಪ್ರಕರಣಗಳು ಹೆಚ್ಚಿವೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ಅನರ್ಹರಿಗೆ ಮಾಸಾಶನ ಮಂಜೂರು ಮಾಡಿರುವ ಆರೋಪ ದೃಢಪಟ್ಟು ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಸಂಪೂರ್ಣ ಪರಿಶೀಲನೆ ನಡೆದರೆ ತನಿಖೆ ದಿಕ್ಕು ತಪ್ಪದಿದ್ದರೆ ಅನೇಕರ ತಲೆದಂಡ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿದೆ.
ತಾಲೂಕಿನ ಕಸಬಾ ಹೋಬಳಿಯಲ್ಲಿ ಅನರ್ಹರು ವೃದ್ಧಾಪ್ಯ ವೇತನ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದ ತಕ್ಷಣ ಮಾಸಾಶನ ಫಲಾನುಭವಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗದವರ ಹಣ ತಡೆಹಿಡಿಯಲಾಗಿದೆ. ಮುಂದಿನ ಎರಡು ವಾರದಲ್ಲಿ ಪ್ರಕರಣದ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು.
*ಪೂರ್ಣಿಮಾ. ತಹಶೀಲ್ದಾರ್.
ಕಡೂರು ತಾಲೂಕಿನಲ್ಲಿ ಅನರ್ಹರು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಜಿಲ್ಲೆಯ ಉಳಿದ ತಾಲೂಕು ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿಲ್ಲ.
*ನಾರಾಯಣರಡ್ಡಿ ಕನಕರಡ್ಡಿ,
ಅಪರ ಜಿಲ್ಲಾಧಿಕಾರಿ.
*ಎ.ಜೆ.ಪ್ರಕಾಶ್‌ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KFD: ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆ
Chikkamagaluru: ಕಾಫಿ ಪಲ್ಪರ್ ನೀರಿನಿಂದ ಆನೆಬಿದ್ದ ಹಳ್ಳದ ನೀರು ಕಲುಶಿತ
Chikkamagaluru: ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಬಸ್; ಐವರಿಗೆ ಗಂಭೀರ ಗಾಯ
Chikkamagaluru: ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು
Charmady: ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ…
MUST WATCH
ಹೊಸ ಸೇರ್ಪಡೆ
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ