ಮುಂದಿನ ವರ್ಷವೂ ಅಸಾಧ್ಯವಾದರೆ ಒಲಿಂಪಿಕ್ಸ್ ರದ್ದು: ಐಒಸಿ
Team Udayavani, May 22, 2020, 7:10 AM IST
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಸದ್ಯ ಬೀಸುವ ದೊಣ್ಣೆಯಿಂದ ಪಾರಾಗಿದೆಯೇನೋ ನಿಜ, ಆದರೆ ಮುಂದಿನ ವರ್ಷವೂ ಇದೇ ಸ್ಥಿತಿಯಿದ್ದು, ನಡೆಸಲು ಅಸಾಧ್ಯವಾದರೆ ಈ ಕ್ರೀಡಾಕೂಟವನ್ನು ರದ್ದು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ.
ಕೋವಿಡ್ 19 ವೈರಸ್ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಪಂದ್ಯಾವಳಿಯನ್ನು 2021ಕ್ಕೆ ಮುಂದೂಡಲಾಗಿದೆ. ಆದರೆ ಮುಂದಿನ ವರ್ಷವೂ ಇದನ್ನು ನಡೆಸಲು ಸಾಧ್ಯವಾಗದೆ ಹೋದರೆ ಇನ್ನು ಇದನ್ನು ಮುಂದುವರಿಸಲಾಗದು, ಆಗ ಕೂಟವನ್ನೇ ಕೈಬಿಡಬೇಕಾಗುತ್ತದೆ ಎಂಬುದಾಗಿ ಥಾಮಸ್ ಬಾಕ್ ಹೇಳಿದರು.
“ಪ್ರತೀ ವರ್ಷವೂ ವಿಶ್ವದ ಕ್ರೀಡಾಕೂಟಗಳ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಕ್ರೀಡಾ ಒಕ್ಕೂಟಗಳು ಒಪ್ಪುವುದೂ ಇಲ್ಲ. ಹಾಗೆಯೇ ಇದರಿಂದ ಕ್ರೀಡಾಪಟುಗಳನ್ನು ಅನಿಶ್ಚಿತತೆಗೆ ತಳ್ಳಿದಂತಾಗುತ್ತದೆ’ ಎಂಬುದಾಗಿ ಬಾಕ್ ಸ್ಪಷ್ಟಪಡಿಸಿದರು.
ಆರೋಗ್ಯ ನಿಯಮ ಪಾಲನೆ
2021ರಲ್ಲಿ ಕೂಟ ನಡೆಯುವುದೇ ಆದರೆ ಆ್ಯತ್ಲೀಟ್‌ಗಳನ್ನು ಕ್ವಾರಂಟೈನ್ ಹಾಗೂ ಇತರ ಆರೋಗ್ಯ ನಿಯಮಗಳ ವ್ಯಾಪ್ತಿಯಲ್ಲಿ ಸಜ್ಜುಗೊಳಿಸುವುದು ಐಒಸಿಯ ಉದ್ದೇಶವಾಗಿದೆ. ಆದರೆ ಎಲ್ಲವನ್ನೂ ಈಗಲೇ ಬಹಿರಂಗಗೊಳಿಸಲು ಆಗುವುದಿಲ್ಲ ಎಂದು ಬಾಕ್ ಹೇಳಿದರು.
“ನಿಜಕ್ಕೂ ಇದೊಂದು ದೊಡ್ಡ ಟಾಸ್ಕ್. 2021ರ ಜುಲೈ 23ರಂದು ಜಗತ್ತು ಹೇಗೆ ಕಾಣುತ್ತದೆ, ಯಾವ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೋಡಿದ ಬಳಿಕ ಮುಂದಿನ ನಿರ್ಧಾರ…’ ಎಂಬುದಾಗಿ ಥಾಮಸ್ ಬಾಕ್ ಹೇಳಿದರು.ಜಪಾನಿನಲ್ಲಿ ಈವರೆಗೆ 17,100 ಮಂದಿ ಕೋವಿಡ್ 19 ಸೋಂಕಿತರಿದ್ದು, 797 ಮಂದಿ ಮೃತ ಪಟ್ಟಿದ್ದಾರೆ. ಉಳಿದೆಡೆ ಹೋಲಿಸಿದರೆ ಜಪಾನಿನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ.
ಪ್ರಧಾನಿ ಶಿಂಜೊ ಅಬೆಗೆ ಅಂದೇ ಅನುಮಾನ
ಕಳೆದ ಮಾರ್ಚ್ ತಿಂಗಳಲ್ಲಿ ಐಒಸಿ ಮತ್ತು ಜಪಾನ್ ಸರಕಾರ ಸೇರಿಕೊಂಡು ಟೋಕಿಯೊ ಒಲಿಂಪಿಕ್ಸ್ ಪಂದ್ಯಾವಳಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲು ತೀರ್ಮಾನಿಸಿದ್ದವು. ಇದೇ ವೇಳೆ ಜಪಾನ್ ಪ್ರಧಾನಿ ಶಿಂಜೊ ಆಬೆ, 2021ರಲ್ಲೂ ಒಲಿಂಪಿಕ್ಸ್ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕೋವಿಡ್ 19 ವೈರಸ್ ಹಾವಳಿ ಮುಂದುವರಿದರೆ ಕೂಟವನ್ನು ನಡೆಸುವುದು ಕಷ್ಟ ಎಂದಿದ್ದರು. ಥಾಮಸ್ ಬಾಕ್ ಕೂಡ ಇದನ್ನು ಸಮರ್ಥಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.