Student Card: ಒಂದು ದೇಶ-ಒಂದು ವಿದ್ಯಾರ್ಥಿ ಕಾರ್ಡ್!
Team Udayavani, Oct 15, 2023, 11:11 PM IST
ಹೊಸದಿಲ್ಲಿ: ಇಡೀ ಭಾರತೀಯರಿಗೆಲ್ಲ ಅನ್ವಯಿಸುವ ಆಧಾರ್ ಕಾರ್ಡ್ ಈಗಾ ಗಲೇ ಎಲ್ಲದಕ್ಕೂ ಬಳಕೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, “ಒಂದು ದೇಶ- ಒಂದು ವಿದ್ಯಾರ್ಥಿ ಕಾರ್ಡ್” ಮಾಡಲು ಸಿದ್ಧತೆ ಆರಂಭಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಅದಕ್ಕೆ ಅಪಾರ್ (ಆಟೋಮೇಟೆಡ್ ಪರ್ಮ ನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ) ಎಂದು ಕರೆದಿದೆ. ಇಲ್ಲಿ ವಿದ್ಯಾರ್ಥಿಯೊಬ್ಬರ ಅಷ್ಟೂ ಶೈಕ್ಷಣಿಕ ಅರ್ಹತೆಗಳು, ಅವರ ಇತರೆ ಕೌಶಲಗಳು, ಸಾಧನೆಗಳು ದಾಖಲಾಗಿರುತ್ತವೆ. ಜೀವನಪೂರ್ತಿ ಅದು ಎಲ್ಲ ಕಡೆ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರಹೇಳಿದೆ. ನೆನಪಿಟ್ಟುಕೊಳ್ಳಬೇಕಾಗಿರುವುದೇನೆಂದರೆ ಇದು ಆಧಾರ್ ಕಾರ್ಡ್ ಜೊತೆಗೆ ಹೆಚ್ಚುವರಿಯಾಗಿ ಬಳಕೆಯಾಗಲಿದೆ.
ನೂತನ ಶಿಕ್ಷಣ ನೀತಿಯ ಅನ್ವಯ ಈ ವಿಶಿಷ್ಟ ಗುರುತಿನ ಸಂಖ್ಯೆ ಕಲ್ಪಿಸಲು ಚಿಂತನೆ ನಡೆದಿದ್ದು, ಇದು ಸರ್ಕಾರಿ ಮಾತ್ರವಲ್ಲದೇ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ.
ಈಗಾಗಲೇ ಕೇಂದ್ರ ಸರಕಾರಎಲ್ಲ ರಾಜ್ಯ ಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿ, ಈ ಬಗ್ಗೆ ಈಗಲೇ ಕಾರ್ಯಾ ರಂಭ ಮಾಡಬೇಕೆಂದು ಸೂಚಿಸಿವೆ ಎಂದು ಮೂಲಗಳು ಹೇಳಿವೆ. ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳಿಗೆ ಸೂಚನೆ ನೀಡಿರುವ ಕೇಂದ್ರ, ರಾಜ್ಯ ಶಿಕ್ಷಣ ಸಂಸ್ಥೆಗಳಿಗೆ ಆದೇಶ ನೀಡಿ ಅ.16ರಿಂದ 18ರ ನಡುವೆ ಪೋಷ ಕರ ಸಭೆ ನಡೆಸಿ ವಿಷಯವನ್ನು ಮನದಟ್ಟು ಮಾಡಬೇಕೆಂದು ಸೂಚಿಸಿದೆ ಎನ್ನಲಾಗಿದೆ. ಅಪಾರ್ ಕಾರ್ಡ್‌ನಲ್ಲಿ ವಿದ್ಯಾರ್ಥಿ ಶೈಕ್ಷಣಿಕ ಅರ್ಹತೆ, ಹೆಚ್ಚುವರಿ ಕೌಶಲ್ಯ, ಎತ್ತರ, ತೂಕ, ರಕ್ತದ ಗುಂಪು ಇತರೆ ಮಾಹಿತಿಗಳಿರುತ್ತವೆ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು, ಆಧಾರ್ ಕಾರ್ಡ್ ಮಾಹಿತಿಗಳನ್ನು ಪೋರ್ಟಲ್‌ನಲ್ಲಿ ತುಂಬಿಸಲಿಕ್ಕೆ ಕಷ್ಟ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.