![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 29, 2020, 3:05 PM IST
ಪಣಜಿ: ಗೋವಾದಲ್ಲಿ ಈರುಳ್ಳಿ ದರ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಡಿತರ ಅಂಗಡಿಗಳಲ್ಲಿ ರೇಷನ್ ಜೊತೆಗೆ ಪ್ರತಿ ತಿಂಗಳು 32 ರೂ ಪ್ರತಿ ಕಿಲೊ ದರದಲ್ಲಿ 3 ಕೆಜಿ ಈರುಳ್ಳಿ ನೀಡಲು ನಿರ್ಣಯ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 100 ರೂ ದರದಲ್ಲಿ ಲಭಿಸುತ್ತಿದ್ದ ಈರುಳ್ಳಿ ರಾಜ್ಯದ ಪಡಿತರ ಗ್ರಾಹಕರಿಗೆ ಪ್ರತಿ ಕೆಜಿಗೆ 32 ರೂ.ಗಳಲ್ಲಿ ಲಭಿಸುವಂತಾಗಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಬುಧವಾರ ಮಂತ್ರಿಮಂಡಳ ಬೈಠಕ್ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು. ಮಂತ್ರಿಮಂಡಳವು ಈರುಳ್ಳಿಯನ್ನು ರಾಜ್ಯದಲ್ಲಿ ಪಡಿತರ ಗ್ರಾಹಕರಿಗೆ ಕಡಿಮೆ ದರದಲ್ಲಿ ಲಭಿಸುವಂತೆ ಮಾಡಲು ನಿರ್ಣಯ ತೆಗೆದುಕೊಂಡಿದೆ.
ಇದಕ್ಕಾಗಿ ನಾಗರಿಕ ಸರಬರಾಜು ಇಲಾಖೆ 1015 ಮೆಟ್ರಿಕ್ ಟನ್ ಈರುಳ್ಳಿಯನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರ್ಕೇಟಿಂಗ್ ಫೆಡರೇಶನ್‌ನಲ್ಲಿ ಖರೀದಿ ಮಾಡಲಿದೆ. ಪ್ರತಿ ಮೆಟ್ರಿಕ್ ಟನ್ ಈರುಳ್ಳಿಗೆ 26,000 ರೂ ದರದಂತೆ ಖರೀದಿ ಮಾಡಲಾಗುತ್ತಿದ್ದು, ಇದಕ್ಕೆ 2000 ರೂ ಪ್ರತಿ ಮೆಟ್ರಿಕ್ ಟನ್ ಸಾಗಾಟ ಖರ್ಚು ಬರಲಿದೆ. 28000 ರೂ ಪ್ರತಿ ಮೆಟ್ರಿಕ್ ಟನ್ ದರದಲ್ಲಿ ಈರುಳ್ಳಿ ಖರೀದಿಸಿ 32 ರೂ. ದರದಲ್ಲಿ ರಾಜ್ಯದಲ್ಲಿ ಪಡಿತರ ಗ್ರಾಹಕರಿಗೆ ನೀಡಲಾಗುವುದು ಎಂದು ಸಿಎಂ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ :ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.