ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ


Team Udayavani, Sep 5, 2020, 1:15 PM IST

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಸುಮಾರು ಆರು ತಿಂಗಳಿನಿಂದ ಶಾಲಾ-ಕಾಲೇಜು ಮತ್ತು ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಬರುವಿಕೆಗೆ ಕಾದು ವಿಧಿ ಇಲ್ಲದೇ ಆನ್‌ ಲೈನ್‌ ತರಗತಿಗಳ ಮೊರೆ ಹೋಗಿದ್ದಾರೆ ಈಗ ಹೇಗಾಗಿದೆ ಎಂದರೆ ಎಲ್ಲೆಡೆ ಯಾವ ಶಾಲಾ ಕಾಲೇಜು, ಶಿಕ್ಷಕ ಪಾಲಕರು ಮತ್ತು ವಿದ್ಯಾರ್ಥಿಗಳನ್ನು ಮಾತಾನಾಡಿಸಿದರೂ ಆನ್‌ಲೈನ್‌ ತರಗತಿಗಳದ್ದೇ ವಿಷಯ. ವಿವಿಧ ಶಾಲಾ ಕಾಲೇಜು ಶಿಕ್ಷಕರು ಮತ್ತು ಸರಕಾರದ ಶಿಕ್ಷಣ ಇಲಾಖೆಗಳು ಸೇರಿದಂತೆ ವಿವಿಧ ಮೊಬೈಲ್‌ ಆ್ಯಪ್‌ ಮತ್ತು ವಿಡಿಯೋ ಆಧಾರಿತ ಆ್ಯಪ್ ಗಳ ಮೊರೆ ಹೋಗಿದ್ದಾರೆ. ಇದರಿಂದ ಸ್ವಲ್ಪವಾದರೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧ್ಯವಾಗಿದೆಯಾದರೂ ತತ್ರಜ್ಞಾನದ ಕುರಿತ ಸಮಸ್ಯೆಗಳು ಅದರೊಂದಿಗೆ ಬಹಳವೆ ಇದೆ. ಆರೋಗ್ಯ ಸಮಸ್ಯೆ ನೆಟ್‌ ವರ್ಕ್‌ ಸಮಸ್ಯೆ, ಒಳ್ಳೆಯ ಮೊಬೈಲ್‌ ಇಲ್ಲದಿರುವುದು, ಡೇಟಾ ಸಮಸ್ಯೆ ಇದರೊಂದಿಗೆ ಆರ್ಥಿಕ ಸಮಸ್ಯೆ ಹೀಗೆ ಒಂದೆರಡಲ್ಲ.

ಆದರೂ ನಮ್ಮ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ತೊಂದರೆ ಆಗದಿರಲೆಂದು ನಮ್ಮ ಕಾಲೇಜಿನಲ್ಲಿ ಇರುವ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡು ಒಂದು ರೀತಿಯ ವ್ಯವಸ್ಥಿತ ಆನ್‌ಲೈನ್‌ ತರಗತಿಗಳಿಗಾಗಿ ತಯಾರಿ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಪದವಿ ಮುಗಿಸಿ ಹೋಗುವಂತಹ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಿದ್ದಾರೆ. ವಿಶ್ವವಿದ್ಯಾಲಯದ ನಿರ್ದೇಶನದಂತೆ ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ತರಗತಿಗಳ ವಿದ್ಯಾಥಿಗಳಿಗಾಗಿ ಆನ್‌ಲೈನ್‌ ಮೂಲಕ ಪಾಠ ಮಾಡುತ್ತಿದ್ದಾರೆ.

ಅದಕ್ಕೆ ಪೂರಕ ತಯಾರಿಯನ್ನು ಮಾಡಿಕೊಂಡಿದ್ದಾರೆ. ಪ್ರಸ್ತುತ ಮೈಕ್ರೋಸಾಪ್ಟ್ ಟೀಮ್ಸ್‌ ಮತ್ತೆ ಸ್ಟ್ರೀಮ್‌ ಆ್ಯಪ್‌ಗಳ ಮೂಲಕ ತರಗತಿಗಳು ನಡೆದಿವೆ ನಡೆಯುತ್ತಿವೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ತಂತ್ರಜ್ಞಾನ ತಂಡದ ಸಹಕಾರದೊಂದಿಗೆ ಶಿಕ್ಷಕರು ಒಂದು ಹೆಜ್ಜೆ ಮುಂದೆ ಇದ್ದಾರೆ ಎನ್ನುವುದು ನನ್ನ ಅನಿಸಿಕೆ. ವಿದ್ಯಾರ್ಥಿಗಳಿಗೆ ತರಗತಿಗಳು ಆನ್‌ಲೈನ್‌ನಲ್ಲಿ ಕೇಳಬಹುದು ಹಾಗೆಯೇ ಇಲ್ಲಿ ಆನ್‌ ಲೈನ್‌ ತರಗತಿಗಳ ಸಂದರ್ಭದಲ್ಲಿ ಅರ್ಥವಾಗದ ವಿಷಯಗಳನ್ನು ಚಾಟ್‌ ಮಾಡುವುದರ ಮೂಲಕ ತಿಳಿದುಕೊಳ್ಳುವ ಅವಕಾಶವು ವಿದ್ಯಾರ್ಥಿಗಳಿಗಿದೆ.
ಪರ್ಯಾಯವಾಗಿ ವಿದ್ಯಾರ್ಥಿಗಳು ಆಯಾ ವಿಷಯಗಳ ಕಂಟೆಂಟ್‌ಗಳನ್ನು ಡೌನೊಲೋಡ್‌ ಮಾಡಿಕೊಂಡು ಆಫ್ಲೈನ್‌ನಲ್ಲೂ ನೋಡುವಂತಹ ವ್ಯವಸ್ಥೆ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಅದನ್ನು ಯಾವಾಗ ಬೇಕಾದರೂ ನೋಡಬಹುದು. ಇದು ವಿದ್ಯಾರ್ಥಿಗಳ ವಿವಿಧ ವಿಷಯಗಳ ಅಭ್ಯಾಸಕ್ಕೆ ಮನನಕ್ಕೆ ಅನುಕೂಲಕರವಾಗಿದೆ. ನೋಟ್ಸ್‌ ಮಾಡಿಕೊಳ್ಳಲು ಸಹಾಯವಾಗಬಹುದು.

ಆದರೆ ಸಮಸ್ಯೆಗಳನ್ನು ನಾವು ತೆಗೆದುಹಾಕುವಂತಿಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳು ನಮ್ಮೊಂದಿಗೆ ಇರುವಂತಹ, ನಾವು ಅವರೊಂದಿಗೆ ಪಾಠ ಮಾಡುವಂತಹದರ ಅನುಭವ ಒಬ್ಬ ಶಿಕ್ಷಕನಿಗೆ ಗೊತ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗೌಜಿ ಗದ್ದಲವಿಲ್ಲದೇ ಭಣಗುಡುತ್ತಿದೆ. ಶಿಕ್ಷಕರಿಗೆ ಒಂದು ರೀತಿಯ ಉತ್ಸಾಹವೇ ಈ ಯುವ ಚಿಲುಮೆಗಳು. ಯಾವ ತಂತ್ರಜ್ಞಾನವು ಅನುಕೂಲಕತೆ ಎಂದರೂ ತರಗತಿಯೋಳಗಿನ ಪಾಠದ ಖುಷಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಗೊತ್ತು. ಬೇರೆ ದಾರಿಗಳಿಲ್ಲದೇ ವಿದ್ಯಾರ್ಥಿಗಳ ಲವಲವಿಕೆ ಇಲ್ಲದೇ ಪಾಠ ಮಾಡುವಂತಹ ಪರಿಸ್ಥಿತಿ ಶಿಕ್ಕಕನದ್ದೂ. ಆದರೂ ಆನ್‌ಲೈನ್‌ನಲ್ಲಿನ ತರಗತಿ ತುಂಬ ಕಲಿಸಿಕೊಟ್ಟಿದೆ ಎನ್ನುವುದು ಅಕ್ಷರಶಃ ಸತ್ಯ !!!

ಲೇಖನ ಬರಹ: ಸುಮಲತಾ ಸುರೇಶ್‌
ಭಂಡಾರ್ಕಾರ್ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ಉತ್ತಮ ಶಿಕ್ಷಕರ ನೆನಪಲ್ಲಿ: ಬಡತನದ ಬವಣೆಯಲ್ಲಿ ಗೆದ್ದು ಗುರುವಾದ ಭೀಮಣ್ಣ ಸಜ್ಜನ್

ಉತ್ತಮ ಶಿಕ್ಷಕರ ನೆನಪಲ್ಲಿ: ಬಡತನದ ಬವಣೆಯಲ್ಲಿ ಗೆದ್ದು ಗುರುವಾದ ಭೀಮಣ್ಣ ಸಜ್ಜನ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.