Online Gameನಲ್ಲಿ 79 ಲಕ್ಷ ರೂಪಾಯಿ, 18 ಎಕ್ರೆ ಹೊಲ ಕಳಕೊಂಡ ಯುವಕ!
Team Udayavani, Aug 14, 2023, 10:22 AM IST
ರಾಯಚೂರು: ಬೇಗನೆ ಹಣ ಗಳಿಸುವ ಆಸೆಯಿಂದ ಆನ್ ಲೈನ್ ಗೇಮ್ ಆ್ಯಪ್‌ಗಳ ಸುಳಿಗೆ ಸಿಲುಕಿದ ಯುವನಕೊಬ್ಬ ಲಕ್ಷಾಂತರ ರೂ. ಕಳೆದುಕೊಂಡಿದ್ದಾನೆ. ಈಗ ತನಗೆ ವಂಚನೆಯಾಗಿದ್ದು, ಹಣವನ್ನು ಮರಳಿ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.
ಇದನ್ನೂ ಓದಿ:Fraud: ಹೈದ್ರಾಬಾದ್ ಉದ್ಯಮಿಗೆ ವಂಚನೆ: ಕೇರಳ ಮೂಲದ ದಂಪತಿ ಸೆರೆ
ಲಿಂಗಸುಗೂರು ತಾಲೂಕಿನ ಮುದಗಲ್ಲ ಪಟ್ಟಣದ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡವನು. ಆನ್‌ಲೈನ್ ಗೇಮ್ ಚಟದಿಂದ ಸುಮಾರು 79 ಲಕ್ಷ ರೂ. ಹಾಗೂ 18 ಎಕ್ರೆ ಜಮೀನನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾನೆ.
ಆ್ಯಪ್‌ಗಳ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಎನ್ನುವವರಿಂದ ನನಗೆ ವಂಚನೆಯಾಗಿದ್ದು, ಹಣ ಪಡೆದು ಲಾಗಿನ್ ಐಡಿ, ಪಾಸ್ ವರ್ಡ್ ನೀಡುತ್ತಿದ್ದರು ಎಂದು ಆಪಾದಿಸಿದ್ದಾನೆ. ವಿವಿಧ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ರಮ್ಮಿ, ಕ್ರಿಕೆಟ್, ಕ್ಯಾಸಿನೋ ಸಹಿತ ಇತರ ಆಟಗಳಿಗೆ ದುಡ್ಡು ಕಟ್ಟಿದ್ದಾನೆ. ಆ್ಯಪ್‌ಗಳು ಹಾಗೂ ಅವುಗಳ ಡೀಲರ್‌ಗಳಿಂದ ವಂಚನೆಯಾಗಿದೆ ಎಂದು ಈಗ ಅಲವತ್ತುಕೊಂಡಿದ್ದಾನೆ. 2014ರಿಂದ ಈವರೆಗೆ ಆನ್‌ಲೈನ್ ಗೇಮ್ ಗಳ ಮೇಲೆ ಲಕ್ಷಾಂತರ ರೂ. ಸುರಿದ ಯುವಕ ತನಗೆ ನ್ಯಾಯ ಕಲ್ಪಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.