ಆನ್ ಲೈನ್ ಪೋಸ್ಟ್: ಪೋಸ್ಟ್ ಆಫೀಸ್ ಖಾತೆಗೆ ಆನ್‌ಲೈನ್‌ನಲ್ಲೇ ಹಣ ಕಟ್ಟಿ!
ಐಪಿಪಿಬಿ ಎಂಬ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ
Team Udayavani, Apr 13, 2020, 11:30 AM IST
ಸಾಂದರ್ಭಿಕ ಚಿತ್ರ
ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದರೆ, ಬ್ಯಾಂಕ್‌ಗಳಿಗಿಂತ ಸ್ವಲ್ಪವೇ ಸ್ವಲ್ಪ ಬಡ್ಡಿ ಜಾಸ್ತಿ ಸಿಗುತ್ತದೆ ಎಂಬುದು ಹಲವರ ಮಾತು, ನಂಬಿಕೆ. ತೆರಿಗೆ ವಿನಾಯಿತಿ ಪಡೆಯಬೇಕು ಅನ್ನುವವರು, ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್) ಯೋಜನೆಯಲ್ಲಿ ಹಣ ಹೂಡುವುದು ಸೂಕ್ತ. ಆದರೆ, ಅಂಚೆ ಕಚೇರಿಯವರೆಗೆ ಹೋಗಿ, ಅಲ್ಲಿ ಖಾತೆ ತೆರೆಯುವುದು ಸ್ವಲ್ಪ ಮಟ್ಟಿಗೆ ಪ್ರಯಾಸದ ಕೆಲಸವೇ.
ಅದರಲ್ಲೂ, ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೂ ಹೋಗುವುದಕ್ಕೆ ಆಗುವುದಿಲ್ಲ ಎನ್ನುವವರಿಗೆ, ಮೊಬೈಲ್ ಆ್ಯಪ್‌ನ ನೆರವಿನಿಂದಲೇ, ಆನ್‌ಲೈನ್ ಮೂಲಕ ಖಾತೆ ತೆರೆಯುವ ಮತ್ತು ಕಂತುಗಳನ್ನು ಕಟ್ಟುವ ಸೌಲಭ್ಯವನ್ನು ಭಾರತೀಯ ಅಂಚೆ ಇಲಾಖೆಯು ಒದಗಿಸಿದೆ. ಪೋಸ್ಟ್ ಆಫೀಸ್ ನ ಪಿಪಿಎಫ್ ಯೋಜನೆಯಲ್ಲಿ ಕಂತುಗಳನ್ನು ಕಟ್ಟಲು/ ಹೊಸದಾಗಿ ಖಾತೆ ತೆರೆಯಲು ಮಾಡಬೇಕಾದುದಿಷ್ಟೆ-
ಮೊದಲಿಗೆ ಗೂಗಲ್ ಪ್ಲೇನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ- ಐಕಕಆ) ಎಂಬ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. (ಈ ಅಪ್ಲಿಕೇಷನ್ ಮುಂಚಿತವಾಗಿಯೇ ಇದ್ದರೆ, ಮತ್ತೆ ಮೊದಲಿನಿಂದ ಡೌನ್ಲೋಡ್ ಮಾಡುವುದು ಬೇಕಿಲ್ಲ. ಹೊಸದಾಗಿ ಖಾತೆ ತೆರೆಯುವ ಹಾಗಿದ್ದರೆ ಮಾತ್ರ ಈ ಹಂತವನ್ನು ಪಾಲಿಸಿ)
ನಿಮ್ಮ ಆಧಾರ್, ಪಾನ್ ವಿವರಗಳನ್ನು ಅಲ್ಲಿ ದಾಖಲಿಸಿ.
ಈಗ, ನಿಮ್ಮ ಬ್ಯಾಂಕ್ ಖಾತೆಯಿಂದ, ಪೋಸ್ಟ್ ಆಫೀಸ್ ಪೇಮೆಂಟ್ ಬ್ಯಾಂಕ್‌ನ ಖಾತೆಗೆ ಹಣ ತುಂಬಿ (ಇದು, ಬೇರೆ ಯಾವುದೇ ಪೇಮೆಂಟ್
ಅಪ್ಲಿಕೇಷನ್‌ಗಳಲ್ಲಿ ಹಣ ತುಂಬಿದಷ್ಟೇ ಸುಲಭ)
ನಂತರ DOP ( Department of posts) ಸರ್ವಿಸಸ್ ಆಯ್ಕೆ ಮಾಡಿಕೊಳ್ಳಿ.
ಅದರಲ್ಲಿ, ನೀವು ಯಾವ ಖಾತೆಗೆ ಹಣ ತುಂಬಿಸಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಿ. . ಅಂದರೆ, ಆರ್.ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ, ಆರ್.ಡಿ.ಯ ಮೇಲಿನ ಸಾಲ ಮರುಪಾವತಿ- ಇವುಗಳಲ್ಲಿ ನೀವು ಯಾವ ಖಾತೆಗೆ ಹಣ ತುಂಬಬೇಕೋ ಅದನ್ನು ಆಯ್ಕೆ ಮಾಡಿ.
ನೀವು ಪಿಪಿಎಫ್ ಖಾತೆಗೆ ಹಣ ಪಾವತಿಸುವುದಾದರೆ, ಅದನ್ನು ಆಯ್ಕೆ ಮಾಡಿ. ನಂತರ ನಿಮ್ಮ ಪಿಪಿಎಫ್ ಖಾತೆಯ ಸಂಖ್ಯೆ ಮತ್ತು ಡಿಒಪಿ ಕಸ್ಟಮರ್ ಐಡಿಯನ್ನು ದಾಖಲಿಸಿ.
ಪಾವತಿಸುವ ಹಣದ ಮೊತ್ತವನ್ನು ದಾಖಲಿಸಿ. ನಂತರ ಪೇ ಆಪ್ಷನ್ ಅನ್ನು ಆಯ್ಕೆ ಮಾಡಿ.
ನಿಮ್ಮ ಪಾವತಿಯು ಯಶಸ್ವಿಯಾದ ನಂತರ, ಪಾವತಿ ವರ್ಗಾವಣೆಯಾಗಿರುವುದರ ಕುರಿತು, ಐಪಿಪಿಬಿಯಿಂದ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ.
ಈ ಮೊದಲೇ ತಿಳಿಸಿದಂತೆ, ಐಪಿಪಿಬಿ ಮೂಲಕ ನೀವು ಪಿಪಿಎಫ್ ಅಷ್ಟೇ ಅಲ್ಲದೆ, ಆರ್.ಡಿ, ಸುಕನ್ಯಾ ಸಮೃದ್ಧಿ, ಆರ್.ಡಿ.ಯ ಮೇಲಿನ ಸಾಲ ಮರುಪಾವತಿಯನ್ನೂ ಸಹ ಮಾಡಬಹುದು.
ರೋಹಿಣಿ ರಾಮ್ ಶಶಿಧರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.