ಆನ್‌ಲೈನ್ ಶಾಲೆಯಲ್ಲಿ…
Team Udayavani, Jun 10, 2020, 4:40 AM IST
ಮಹಿಳಾ ದಿನಾಚರಣೆಯ ಅಂಗವಾಗಿ, ರಿಯಾಯಿತಿ ದರದಲ್ಲಿ ಜರ್ಮನ್, ಫ್ರೆಂಚ್ ಭಾಷೆ ಕಲಿಯಿರಿ ಎಂಬ ಜಾಹೀರಾತಿನಿಂದ ಆಕರ್ಷಿತಳಾಗಿ, ಜರ್ಮನ್ ಕಲಿಕಾ ತರಗತಿಗೆ ಸೇರಿದೆ. ಒಳ್ಳೆಯ ಇಂಟರ್ನೆಟ್ ಸಂಪರ್ಕ, ಲ್ಯಾಪ್‌ಟಾಪ್ ಮತ್ತು ಉತ್ತಮ ಶ್ರವಣ ಸಾಧನಗಳು ಕಲಿಕೆಗೆ ಬೇಕಾದ ಪ್ರಾಥಮಿಕ ಅಗತ್ಯಗಳಾಗಿದ್ದವು. ಮೊದಲೆರಡು ಹೇಗೂ ಮನೆಯಲ್ಲಿದ್ದವು. ಶ್ರವಣಸಾಧನದ ಬಗೆಗೆ ಗೆಳತಿಯ ಮಗಳಿಂದ ತಿಳಿದುಕೊಂಡು, ಹೊಸದಾಗಿ ಖರೀದಿಸಿದ್ದೂ ಆಯಿತು.
ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಜೋಡಿಸಿಕೊಂಡು ತರಗತಿಗಳಿಗೆ ಸಿದ್ಧವಾಗುವಾಗಲೇ, ಲಾಕ್‌ಡೌನ್ ಘೋಷಣೆಯಾದ್ದರಿಂದ, “ಸಮಯ ಕಳೆಯುವ ಕಷ್ಟ’ದ ಯೋಚನೆಯೂ ಬರಲಿಲ್ಲ. ಮೊದಲ ದಿವಸ, ಅಂತರ್ಜಾಲ ಸಂಪರ್ಕದ ಮೂಲಕ ನನ್ನ ಗುರುತಿನ ಸಂಕೇತವನ್ನು ಟೈಪಿಸಿ, “ಇಂಟರ್ನೆಟ್ ತರಗತಿ’ಗೆ ಪ್ರವೇಶ ಪಡೆದೆ. ತನ್ನಿಂತಾನಾಗಿಯೇ “ಝೂಮ್’ ವೇದಿಕೆಗೆ ಬಂದಿದ್ದೆ. ಅದನ್ನು ಕ್ಲಿಕ್ ಮಾಡಿ, ತರಗತಿಯ ಒಳಗೆ ಅಧಿಕೃತ ಪ್ರವೇಶ ಪಡೆದೆ. ಶಿಕ್ಷಕಿಯ ಸುಮಧುರ ಸ್ವರ ಕೇಳಿ, ಎಲ್ಲವೂ ಸರಿಯಾಗಿರಬಹುದೆಂಬ ಭರವಸೆ ಮೂಡಿಸಿತು.
“ವೀಡಿಯೊ ಆನ್ ಮಾಡಿಕೊಳ್ಳಿ’ ಎಂದಾಗ, ಹೇಗೆ ಮಾಡುವುದೆಂದು ತಿಳಿಯದೆ ತಬ್ಬಿಬ್ಟಾದೆ. ಅಷ್ಟರಲ್ಲೇ ಸಹಪಾಠಿಯೊಬ್ಬ, “ಪರದೆಯ ಎಡಬದಿ ಕೆಳಗೆ’ ಆಡಿಯೊ ಮತ್ತು ವಿಡಿಯೊ ಗುರುತು ಇದೆ ನೋಡಿ, ಎಂದು ತಿಳಿಸಿದ. ಮೊದಲನೇ ದಿನ ಗುಂಪಿನಲ್ಲಿದ್ದ 12 ಜನರೂ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡೆವು. ಕರಿಹಲ ಗೆಯ ಬದಲು ಬಿಳಿಹಲಗೆ; ಚಾಕ್ ತುಂಡಿನ ಬದಲು ಕೀ ಬೋರ್ಡ್ ಎಂಬುದಷ್ಟೇ ವ್ಯತ್ಯಾಸ ಇಲ್ಲಿ.
ಶಿಕ್ಷಕಿ, ಯಾರನ್ನು ಕುರಿತೂ ಪ್ರಶ್ನಿಸಬಹುದಾದ, ವಿದ್ಯಾರ್ಥಿಗಳು ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಬಹುದಾದ ಅವಕಾಶಗಳು ನಿಜವಾದ ತರಗತಿಯ ಅನುಭವದಷ್ಟೇ ನೈಜವಾಗಿದ್ದವು. ಪದಗಳ ಉಚ್ಚಾರಣೆ, ಪುನರಾವರ್ತನೆ.. ಎಲ್ಲವೂ ಸುಲಲಿತವಾಗಿ ಮುಂದುವರಿದವು. ಮೊದಲ ದಿನದ ಅನುಭವದ ಖುಷಿಯಲ್ಲಿ ಎರಡನೇ ದಿನವೂ ಲಾಗಿನ್ ಆದಾಗ, ಯದ್ವಾತದ್ವಾ ಶಬ್ದ ಕೇಳಿಸತೊಡಗಿತು ಎಲ್ಲಿಂದಲೋ ತಿಳಿಯದು.
ನಾಯಿ ಬೊಗಳಿದ ಶಬ್ದ, ಟಿ.ವಿ.ಯ ಗದ್ದಲ, ಯಾರ್ಯಾರದ್ದೋ ಮಾತು ಗಳು, ಇವೆಲ್ಲದರ ಮಧ್ಯೆ, ಶಿಕ್ಷಕಿಯ ಧ್ವನಿ ಕೇಳದೇ ಹೋಯಿತು. ನನ್ನ ಉಪಕರಣದಲ್ಲಿಯೇ ಏನಾ ದರೂ ತೊಂದರೆ ಇರಬಹು ದಾ ಎಂಬ ದಿಗಿಲು.. ನಮ್ಮ ಗುಂಪಿ ನಲ್ಲಿ ಅದನ್ನು ಹೇಳಿದಾಗ ಸಹ ಪಾಠಿಯೊಬ್ಬ “ಎಲ್ಲರ ಮಾತನ್ನೂ ಮ್ಯೂಟ್ ಮಾಡಿ ಬಿಡಿ’ ಎಂದ. ಉಚ್ಚಾರಣೆ ಸರಿ ಇದೆಯೋ, ಇಲ್ಲವೋ ಎಂದು ಗೊತ್ತಾ ಗುವುದು ಹೇಗೆ? ಎಂದು ಕೊಳ್ಳುವ ಮೊದಲೇ, ಸ್ಕ್ರೀನ್ ಮೇಲೆ ಅದೇ ಸಹಪಾಠಿ ಸಂದೇಶ ಹಾಕಿದ್ದ, “ಸ್ಪೇಸ್ ಬಾರ್ ಒತ್ತಿ ಹಿಡಿದು ಮಾತನಾಡಿದರೆ ಎಲ್ಲರಿಗೂ ಕೇಳುತ್ತದೆ’ ಎಂದು.
ಮುಂದಿನ ಗೋಳು ಹೇಳತೀರದು. ಕೆಲವರಿಗೆ ಇಂಟರ್ನೆಟ್ ಸಂಪರ್ಕ ತಪ್ಪಿಹೋದರೆ, ಇನ್ನು ಕೆಲವರಿಗೆ ಕರೆಂಟ್ ಕೈಕೊಟ್ಟು ಲ್ಯಾಪ್‌ಟಾಪ್ ನಿಷ್ಕ್ರಿಯವಾ ಗುತ್ತಿತ್ತು. ತರಗತಿಗಳ ಆರಂಭದ ದಿನದಂದೇ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕಿಯನ್ನೊಳಗೊಂಡ ವಾಟ್ಸಾಪ್ ಗುಂಪೊಂದು ತಯಾರಾಗಿತ್ತು. ಏನೇ ತೊಂದರೆಯಾದರೂ ಅದರಲ್ಲಿ ಸಂದೇಶ ಹಾಕಬಹುದಾಗಿತ್ತು. ನಾವು ಕಲಿತ ಹೊಸ ಪದಗಳನ್ನು ಹಂಚಿಕೊಳ್ಳಬಹುದಾಗಿತ್ತು.
ಮೊದಮೊದಲಿಗೆ ತರಗತಿಗಳನ್ನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು. ಯಾರಾದರೂ ತರಗತಿಗೆ ಹಾಜರಾಗದಿದ್ದಲ್ಲಿ, ಬಿಡುವಾದಾಗ ನೋಡಬಹುದಾಗಿತ್ತು. ಮುಂದಿನ ದಿನಗಳಲ್ಲಿ “ಝೂಮ್’ನ ಸುರಕ್ಷತೆಯ ಬಗೆಗಿನ ಸಂಶಯಗಳಿಂದಾಗಿ ಈ ಸೌಲಭ್ಯದಿಂದ ವಂಚಿತರಾದೆವು. ಕೆಲವು ದಿನಗಳ ನಂತರ ವಿದ್ಯಾರ್ಥಿಗಳನ್ನು ಎರಡು ಮೂರು ಗುಂಪುಗಳಾಗಿ ವಿಂಗಡಿಸಿ, ನಮ್ಮ ನಮ್ಮೊಳಗೇ ಮಾತಾಡುವ, ಅಭ್ಯಾಸಗಳನ್ನು ಮಾಡುವ ಅವಕಾಶ ಕಲ್ಪಿಸಲಾಯಿತು. ಗುಂಪುಗಳಿಗೆ “ಬ್ರೇಕ್ ಔಟ್ ರೂಮ್ಸ್’ ಎಂದು ಹೆಸರು.
ನಾವು ಮುಖತಃ ಪರಿಚಿತರಲ್ಲದಿದ್ದರೂ “ಎಷ್ಟೋ ವರ್ಷಗಳಿಂದ ಒಬ್ಬರನ್ನೊಬ್ಬರು ಅರಿತಿದ್ದೇವೆ’ ಎಂಬ ಭಾವನೆಯನ್ನು ಮೂಡಿಸುವಲ್ಲಿ ಇದು ಸಮರ್ಥವಾಯಿತು. ಪ್ರತಿದಿನವೂ ಏನಾದರೊಂದು ಅಡಚಣೆ ಎದುರಾದರೂ, ನನ್ನ “ಮರಳಿ ಶಾಲೆಗೆ’ ಅನುಭವದ ರಸಗಳಿಗೆಗಳು ಹೆಚ್ಚುತ್ತಲೇ ಹೋದವು. ಭಾಷಾ ಕಲಿಕೆಯ ಜೊತೆಗೆ ಇಂಟರ್ನೆಟ್, ಲ್ಯಾಪ್‌ಟಾಪ್ ಉಪಯೋಗಗಳ ಹಲವಾರು ಆಯಾಮಗಳ ಪರಿಚಯವಾಯಿತು. ಇದಕ್ಕೆಲ್ಲ ಅನುವು ಮಾಡಿಕೊಟ್ಟ ಲಾಕ್‌ಡೌನ್ ಸಮಯಕ್ಕೆ ಥ್ಯಾಂಕ್ಸ್
* ಡಾ. ಉಮಾಮಹೇಶ್ವರಿ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.