ಹೊಸ ಹುರುಪು ಪಡೆದ ರಂಗಕಲಿಕೆ! ಆನ್‌ಲೈನ್ ಮೂಲಕ ಪ್ರಸಿದ್ಧ ಕಲಾವಿದರಿಂದ ತರಬೇತಿ
Team Udayavani, May 7, 2020, 5:20 PM IST
ಉಡುಪಿ: ರಾಜ್ಯ, ದೇಶ, ವಿದೇಶದ ರಂಗಕಲಾವಿದರು ಒಂದೇ ವೇದಿಕೆಯಲ್ಲಿ! ಜೀವನ್ ರಾಂ ಸುಳ್ಯ, ಮಂಡ್ಯ ರಮೇಶ್, ಕಾಸರಗೋಡು ಚಿನ್ನಾ ಅವರ ಮಾರ್ಗದರ್ಶನ. ರಂಗಕಲಿಕೆಗೆ ಆನ್‌ಲೈನ್ ರೂಪ. ಇದಕ್ಕೆ ಸಾಕ್ಷಿಯಾಗಿದ್ದು ರಂಗಕಲಿಕೆಯಲ್ಲಿ ನಿರತವಾಗಿರುವ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ.
ಕಲೆ, ಭಾಷೆ, ಕಲಾವಿದರಿಗೆ ಒತ್ತು
ದೇಶದ ಹಲವು ರಾಜ್ಯಗಳಲ್ಲಿ ನೆಲೆಸಿರುವ ಖ್ಯಾತ ಹಿರಿಯ, ಕಿರಿಯ ಕಲಾವಿದರ ಸಂಗಮದ ಮೂಲಕ ನಿರ್ದಿಷ್ಟ ವಿಷಯದ ಬಗ್ಗೆ ಅಭಿನಯಿಸುವ ಮೂಲಕ ರಂಗಕಲಿಕೆಯ ವಿವಿಧ ಮಗ್ಗುಲಲ್ಲಿ ಕಲಿಕೆ ನಡೆಯುತ್ತಿದೆ. ಒಂದೆಡೆ ತರಬೇತಿ, ಇನ್ನೊಂದೆಡೆ ವಿವಿಧ ರಾಜ್ಯಗಳ ಕಲಾವಿದರ ಸಂಗಮ, ಜತೆಗೆ ಬಹುಭಾಷಾ ಕೃತಿಗಳ, ಪೌರಾಣಿಕ, ಐತಿಹಾಸಿಕ ಕೃತಿಗಳ ಸಮನ್ವಯ ಕೆಲಸವಾದರೆ, ಎಲ್ಲರ ಅಭಿನಯವನ್ನು ಒಟ್ಟುಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ರಂಗಕಲಾಭಿಮಾನಿಗಳಿಗೆ ದೃಶ್ಯ ಚಿತ್ತಾರವನ್ನು ಉಣಬಡಿಸುವ ಕೆಲಸ ಸಾಗುತ್ತಿದೆ.
100ಕ್ಕೂ ಹೆಚ್ಚು ಕಲಾವಿದರು
ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ “ಹೀಗೊಂದು ರಂಗ ಕಲಿಕೆಯ’ ಈಗಾಗಲೇ ಒಟ್ಟು ಮೂರು ಸಂಚಿಕೆಯನ್ನು ಹೊರ ತಂದಿದೆ. ಜೀವನ್ ರಾಂ ಸುಳ್ಯ ಮಾತುಗಾರಿಕೆ, ಅಭಿನಯ ವಿಷಯವಾಗಿ, ಮಂಡ್ಯ ರಮೇಶ್ ಹಾಸ್ಯರಸ, ಕಾಸರಗೋಡು ಚಿನ್ನಾ ಕರುಣಾ ರಸಗಳ ಬಗ್ಗೆ ತಿಳಿಸಿದ್ದಾರೆ. ಜಿಲ್ಲೆ, ದೇಶದ ವಿವಿಧ ರಾಜ್ಯದ 100ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು ಆ ಮೂಲಕ ರಂಗಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸಮಯ ಸದುಪಯೋಗ
ನಿರ್ದಿಷ್ಟ ಉದ್ದೇಶ ಮತ್ತು ಈ ಲಾಕ್‌ಡೌನ್‌ನ ಸಮಯವನ್ನು ಸದುಪಯೋಗದ ದೃಷ್ಟಿಯಿಂದ ಆರಂಭಿಸಿದ ರಂಗ ಕಲೆಗೆ ಉತ್ತಮ ಸ್ಪಂದನೆ ದೊರೆತಿದೆ. ಆ ಮೂಲಕ ರಂಗ ಕಲೆಯಲ್ಲಿ ಪ್ರಥಮ ಎಂಬಂತೆ ಈ ಪ್ರಯೋಗ ಸಾಗಿದ್ದು ಮುಂದಿನ ಸಂಚಿಕೆಯಲ್ಲಿ ಡಾ| ಶ್ರೀಪಾದ್ ಭಟ್ ಶಿರಸಿ ಪಾಲ್ಗೊಂಡು ರಂಗಕಲಿಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಂಸ್ಕೃತಿ ವಿಶ್ವ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋಗಳು ಲಭ್ಯವಿವೆ.
-ರವಿರಾಜ್ ಎಚ್.ಪಿ., ಸಂಚಾಲಕರು, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.