Love jihadಶ್ರೀರಾಮ ಸೇನೆಯಿಂದ ರಾಜ್ಯದ 6 ಕಡೆ ಕಾರ್ಯಾಚರಣೆ; ಲವ್ ಜೆಹಾದ್ ತಡೆಗೆ ಸಹಾಯವಾಣಿ
Team Udayavani, May 27, 2024, 7:35 AM IST
ಮಂಗಳೂರು: ಲವ್ ಜೆಹಾದ್ ಹೆಸರಲ್ಲಿ ಹಿಂದೂ ಯುವತಿಯರನ್ನು ವಂಚಿಸುವ ಸಂಚನ್ನು ವಿಫಲಗೊಳಿಸಲು ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ. ಈ ಸಹಾಯವಾಣಿಗೆ ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು ಅಲ್ಲದೆ, ಸಂತ್ರಸ್ತರ ಮನೆಗೆ ತೆರಳಿ ಸಹಕಾರ ನೀಡಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲುºರ್ಗಿ ಮತ್ತು ದಾವಣಗೆರೆಯನ್ನು ಕೇಂದ್ರ
ವಾಗಿರಿಸಿ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರಗಳು ಸುತ್ತಲಿನ ಜಿಲ್ಲೆಗಳ ಲವ್ ಜೆಹಾದ್ ಸಂಬಂಧಿ ದೂರುಗಳನ್ನು ನಿರ್ವಹಿಸ ಲಿವೆ. ಸಹಾಯವಾಣಿಯ ಸಂಖ್ಯೆಯನ್ನೂ ಶೀಘ್ರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ತಜ್ಞರ ತಂಡ
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಚಿಂತನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದಕ್ಕೆಂದೇ ಆಯಾ ಜಿಲ್ಲೆಗಳಲ್ಲಿ ವಕೀಲರು, ಕೌನ್ಸೆಲಿಂಗ್ ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡ ಕಾರ್ಯನಿರ್ವಹಿಸಲಿದೆ. ಲವ್ ಜೆಹಾದ್ ಜಾಲದಲ್ಲಿ ಸಿಕ್ಕಿ ಬೀಳುವಂತಹ ಯುವತಿಯರ ಗುರುತನ್ನು ಗುಪ್ತವಾಗಿರಿಸಿ ಜಾಲದಿಂದ ಹೊರತರಲು ಶ್ರೀರಾಮ ಸೇನೆ ಕೆಲಸ ಮಾಡಲಿದೆ.
ಈಗಾಗಲೇ ನಮಗೆ ದೂರುಗಳು ಬಂದಿದ್ದು, ಅವುಗಳನ್ನು ಪರಿಹರಿಸಿಕೊಟ್ಟಿದ್ದೇವೆ. ಅನೇಕ ಮಂದಿ ದೂರುಕೊಡಲು ಇಚ್ಛಿಸಿದರೂ ಮುಂದೆಬರಲು ಹೆದರುತ್ತಾರೆ. ಅಂಥವರಿಗೆ ಈ ಸಹಾಯವಾಣಿ ನೆರವಾಗಲಿದೆ ಎನ್ನುವುದು ರಾಮಸೇನೆಯವರ ಹೇಳಿಕೆ.
ಬಜರಂಗದಳದಿಂದ ಆರಂಭ
2022ರಲ್ಲಿ ದ.ಕ. ಜಿಲ್ಲೆಗೆ ಸೀಮಿತವಾಗಿ ಇಂಥದ್ದೇ ಸಹಾಯವಾಣಿ ಆರಂಭಿಸಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಜರಂಗದಳ ಮುಖಂಡರು ತಿಳಿಸಿದ್ದಾರೆ. ಅಂತರ್ ಧರ್ಮೀಯ ಸಂಬಂಧಗಳು ಕಂಡುಬಂದಾಗ, ಹಿಂದೂ ಯುವತಿಯರು, ವಿದ್ಯಾರ್ಥಿನಿಯರನ್ನು ವಂಚಿಸುವುದು ಕಂಡುಬಂದಾಗ ನೆರೆಕರೆಯವರು, ಯುವತಿಯ ಹೆತ್ತವರು ನಮ್ಮನ್ನು ಸಂಪರ್ಕಿಸಿದ್ದಾರೆ. ಬಹುತೇಕ ಪ್ರಕರಣ ಗಳಲ್ಲಿ ಮಾತುಕತೆ, ಕೌನ್ಸೆಲಿಂಗ್ ಮೂಲಕವೇ ಇತ್ಯರ್ಥಪಡಿಸುತ್ತಿದ್ದೇವೆ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ತಿಳಿಸಿದ್ದಾರೆ.
ಈ ಸಹಾಯವಾಣಿಯನ್ನು ಕಾನೂನು ಬದ್ಧವಾಗಿ, ಸುವ್ಯವಸ್ಥಿತವಾಗಿ ಮಾಡುತ್ತೇವೆ. ಯಾರ ವಿರುದ್ಧವಾಗಿ ಅಲ್ಲ. ಕೇವಲ ಹಿಂದೂ ಸೋದರಿಯರ ರಕ್ಷಣೆಗೆ ಈ ಕ್ರಮ. ಅವರಲ್ಲಿ ಅರಿವು ಮೂಡಿಸಬೇಕಾಗಿದೆ. ಕೆಲವರು ಈ ಸಂಚಿಗೆ ಸಿಲುಕಿ ಹೊರಗೆ ಬರಲಾಗುವುದಿಲ್ಲ. ಅಂಥವರನ್ನು ರಕ್ಷಿಸುವ ಗುರಿ ಇದೆ.
– ಆನಂದ ಶೆಟ್ಟಿ ಅಡ್ಯಾರ್, ಶ್ರೀರಾಮ ಸೇನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.