ಮುಂದಿನ ಬಜೆಟಲ್ಲಿ ಕೃಷಿಗೆ ಭರಪೂರ ಅವಕಾಶ?
Team Udayavani, Jan 3, 2022, 6:53 AM IST
ಹೊಸದಿಲ್ಲಿ: ದೇಶದ ಜೀವನದ ಪ್ರಧಾನ ಅಂಗವಾಗಿರುವ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರಕಾರ ಮುಂದಾಗಿದೆ.
ಫೆ. 1ರಂದು ಮಂಡಿಸುವ 2022-23ನೇ ಸಾಲಿನ ಮುಂಗಡ ಪತ್ರದಲ್ಲಿ ಕೃಷಿ ಕ್ಷೇತ್ರಕ್ಕೆ 18ರಿಂದ 18.5 ಲಕ್ಷ ಕೋಟಿ ರೂ.ಗಳ ವರೆಗೂ ಮೊತ್ತ ಮೀಸಲಿಡಲು ಚಿಂತಿಸಲಾಗುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ 16.5 ಲಕ್ಷ ಕೋಟಿ ರೂ. ಮೊತ್ತವನ್ನು ರೈತಾಪಿ ವರ್ಗದ ಜನರಿಗಾಗಿ ಮೀಸಲಿರಿಸಿದ್ದರು.
ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಬಗ್ಗೆ ಬ್ಯಾಂಕ್ಗಳಿಗೂ ಕೇಂದ್ರದ ವತಿಯಿಂದ ಗುರಿ ಹಾಕಿಕೊಳ್ಳಲು ಸೂಚನೆ ಇದೆ. 2017-18ನೇ ಸಾಲಿನಲ್ಲಿ 11.68 ಲಕ್ಷ ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಆ ವರ್ಷ ಸಾಲ ನೀಡುವುದಕ್ಕೆ ಮೀಸಲಾಗಿ ಇರಿಸಲಾಗಿದ್ದ ಮೊತ್ತ 10.66 ಲಕ್ಷ ಕೋಟಿ. ರೂ. ಅಂದರೆ ನಿಗದಿತ ಗುರಿಯ ಮೊತ್ತಕ್ಕಿಂತ 1.02 ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ನೀಡಿರುವುದು ಗಮನಾರ್ಹ. 2016-17ನೇ ಸಾಲಿನಲ್ಲಿ 9 ಲಕ್ಷ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿತ್ತು. ಅಂತಿಮವಾಗಿ 10.66 ಲಕ್ಷ ಕೋಟಿ ರೂ. ನೀಡಲಾಗಿತ್ತು.
ಇದನ್ನೂ ಓದಿ:ನವೆಂಬರ್ನಲ್ಲಿ 17.5 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಕಡಿಮೆ ಬಡ್ಡಿ
ಕೃಷಿ ವರ್ಗಕ್ಕೆ ಶೇ. 9ರ ಬಡ್ಡಿಯಲ್ಲಿ ಸಾಲ ನೀಡಲಾ ಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಲ್ಪಾವಧಿ ಸಾಲವನ್ನು ಹೊರೆ
ಯಾಗದ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಭದ್ರತೆ ರಹಿತ ಸಾಲದ ಮೊತ್ತವನ್ನೂ ಹೆಚ್ಚಿಸಲಾಗಿದೆ. 3 ಲಕ್ಷ ರೂ. ವರೆಗಿನ ಅಲ್ಪಾವಧಿ ಸಾಲಕ್ಕೆ ಶೇ. 2 ಕಡಿಮೆ ಬಡ್ಡಿ ದರ ವಿಧಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.